ETV Bharat / state

ಡಿ ಕೆ ಶಿವಕುಮಾರ್​ಗೆ ತಮಿಳುನಾಡು ಸಿಎಂ ಸ್ಟಾಲಿನ್ ಅಭಿನಂದನೆ: ನಿರಂಕುಶ ರಾಜಕೀಯ ನಾಶವಾಯಿತು ಎಂದ ಮಮತಾ! - Tamil Nadu Chief Minister Stalin

ಕೊಳಕು ಮತ್ತು ವಿಭಜಕ ರಾಜಕಾರಣವನ್ನು ತಿರಸ್ಕರಿಸಿದ ಕರ್ನಾಟಕದ ಜನತೆಗೆ ಧನ್ಯವಾದಗಳು ಎಂದು ತೆಲಂಗಾಣದ ಸಚಿವ ಕೆ ಟಿ ರಾಮರಾವ್ ಟ್ವೀಟ್ ಮಾಡಿದ್ದಾರೆ.

tamil-nadu-cm-stalin-congratulates-dk-shivakumar
ಡಿ ಕೆ ಶಿವಕುಮಾರ್​ಗೆ ತಮಿಳುನಾಡು ಸಿಎಂ ಸ್ಟಾಲಿನ್ ಅಭಿನಂದನೆ: ನಿರಂಕುಶ ರಾಜಕೀಯ ನಾಶವಾಯಿತು ಎಂದ ಮಮತಾ!
author img

By

Published : May 13, 2023, 11:09 PM IST

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಟಾಲಿನ್ ಅವರು ಶನಿವಾರ ರಾತ್ರಿ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದರು. ಸ್ಟಾಲಿನ್ ಅವರಿಗೆ ಧನ್ಯವಾದ ಹೇಳಿದ ಡಿ ಕೆ ಶಿವಕುಮಾರ್ ಅವರು ತಮಿಳುನಾಡಿಗೆ ಬಂದು ತಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.

tamil-nadu-cm-stalin-congratulates-dk-shivakumar
ಮಮತಾ ಬ್ಯಾನರ್ಜಿ ಟ್ವೀಟ್

ಮಮತಾ ಬ್ಯಾನರ್ಜಿ ಅಭಿನಂದನೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದು, ಬದಲಾವಣೆಯ ಪರವಾಗಿ ತಮ್ಮ ನಿರ್ಣಾಯಕ ಜನಾದೇಶಕ್ಕಾಗಿ ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು! ವಿವೇಚನಾರಹಿತ ನಿರಂಕುಶ ಮತ್ತು ಬಹುಸಂಖ್ಯಾತ ರಾಜಕೀಯ ನಾಶವಾಯಿತು!! ಜನರು ಬಹುತ್ವ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಗೆಲ್ಲಲು ಬಯಸಿದಾಗ, ಪ್ರಾಬಲ್ಯ ಸಾಧಿಸಲು ಯಾವುದೇ ಕೇಂದ್ರ ವಿನ್ಯಾಸವು ಅವರ ಸ್ವಾಭಾವಿಕತೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ. ಅದು ನೈತಿಕತೆ, ನಾಳೆಗೆ ಪಾಠ ಎಂದು ಹೇಳಿದ್ದಾರೆ.

ತೆಲಂಗಾಣದ ಸಚಿವ ಕೆ ಟಿ ರಾಮರಾವ್ ಟ್ವೀಟ್ ಮಾಡಿದ್ದು, ಕೇರಳದ ಕಥೆಯು ಕರ್ನಾಟಕದ ಜನರನ್ನು ರಂಜಿಸಲು ವಿಫಲವಾದ ರೀತಿಯಲ್ಲಿಯೇ ಕರ್ನಾಟಕ ಚುನಾವಣಾ ಫಲಿತಾಂಶಗಳು ತೆಲಂಗಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೊಳಕು ಮತ್ತು ವಿಭಜಕ ರಾಜಕಾರಣವನ್ನು ತಿರಸ್ಕರಿಸಿದ ಕರ್ನಾಟಕದ ಜನತೆಗೆ ಧನ್ಯವಾದಗಳು. ಹೈದರಾಬಾದ್ ಮತ್ತು ಬೆಂಗಳೂರು ಭಾರತದ ಹೆಚ್ಚಿನ ಒಳಿತಿಗಾಗಿ ಹೂಡಿಕೆ ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸಲು ಆರೋಗ್ಯಕರವಾಗಿ ಸ್ಪರ್ಧಿಸಲಿ. ಕರ್ನಾಟಕದಲ್ಲಿ ನೂತನ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಶುಭಾಶಯಗಳು ಎಂದು ತಿಳಿಸಿದ್ದಾರೆ.

ತೆಲಂಗಾಣದ ಸಚಿವ ಕೆ ಟಿ ರಾಮರಾವ್ ಟ್ವೀಟ್

ಡಿಕೆಶಿ ಧರಣಿ: ಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದರೂ ಪ್ರಭಾವಿ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮರುಎಣಿಕೆ ನೆಪದಲ್ಲಿ ಫಲಿತಾಂಶ ತಿರುಚಲು ಪ್ರಯತ್ನಿಸಿದ ಚುನಾವಣೆ ಅಧಿಕಾರಿಗಳ ನಡೆ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಸಂಸದ ಡಿ ಕೆ ಸುರೇಶ್ ಮತ್ತಿತರ ಮುಖಂಡರು ಮತ ಎಣಿಕೆ ಕೇಂದ್ರ ಜಯನಗರದ ಆರ್ ವಿ ಶಿಕ್ಷಣ ಸಂಸ್ಥೆ ಎದುರು ಧರಣಿ ನಡೆಸಿದರು. ಮತ ಎಣಿಕೆ ಕೇಂದ್ರದ ಒಳಗೆ ಏಜೆಂಟರಲ್ಲದ ಬಿಜೆಪಿ ಮುಖಂಡರಾದ ಆರ್ ಅಶೋಕ್, ತೇಜಸ್ವಿ ಸೂರ್ಯ ಮತ್ತಿತರರ ಅಕ್ರಮ ಪ್ರವೇಶವನ್ನು ಅವರು ಖಂಡಿಸಿದರು.

ಇದನ್ನೂ ಓದಿ:ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ‌ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.