ETV Bharat / state

ಕೊರೊನಾ ಭೀತಿ ನಡುವೆಯೂ ಕೆನರಾ ಬ್ಯಾಂಕ್ ಜತೆಗೆ ಸಿಂಡಿಕೇಟ್ ಬ್ಯಾಂಕ್‌ ವಿಲೀನ..

ಸಿಂಡಿಕೇಟ್​ ಬ್ಯಾಂಕ್‌ ಏಪ್ರಿಲ್ 1ರಿಂದಲೇ ಕೆನರಾ ಬ್ಯಾಂಕ್​ ಜೊತೆ ವಿಲೀನವಾಗಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ವಿತ್ತ ಸಚಿವೆ ನಿರ್ಮಲಾ ಕೆನರಾ ಬ್ಯಾಂಕ್ ಜೊತೆ ವಿಲೀನ ಮಾಡುವ ಕುರಿತು ಸುಳಿವು ನೀಡಿದ್ದರು. ಸದ್ಯ ಕೊರೊನಾ ಕಾವಿನ ನಡುವೆಯೂ ವಿಲೀನ ಪ್ರಕ್ರಿಯೆ ನಡೆಯಲಿದೆ.

syndicate-and-canara-bank-merge
ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ವಿಲೀನ
author img

By

Published : Mar 31, 2020, 11:25 PM IST

ಬೆಂಗಳೂರು : ದೇಶದಲ್ಲಿ ಕೊರೊನಾ ಭೀತಿಯ ನಡುವೆಯೂ ಏಪ್ರಿಲ್​ 1ರಂದು ಸಿಂಡಿಕೇಟ್​ ಬ್ಯಾಂಕ್​, ಕೆನರಾ ಬ್ಯಾಂಕ್​ ಜೊತೆಗೆ ವಿಲೀನವಾಗಲಿದೆ ಎಂದು ಸಿಂಡಿಕೇಟ್ ಬ್ಯಾಂಕ್​ನ ವಿಶೇಷ ಅಧಿಕಾರಿ ವೈ. ನಾಗೇಶ್ವರ್ ರಾವ್‌ ತಿಳಿಸಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆ ವಿಲೀನವಾಗಲಿದೆ ಎಂದು ಘೋಷಣೆ ಮಾಡಿದ್ದರು. ಸದ್ಯ ಏಪ್ರಿಲ್ 1ಕ್ಕೆ ಬ್ಯಾಂಕ್ ವಿಲೀನವಾಗುವುದು. ನಾಳೆ ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ರಜೆ ಇರಲಿದೆ. ಆದರೆ, ವಿಲೀನ ಪ್ರಕ್ರಿಯೆ ನಾಳೆಗೆ ಮುಗಿಯಲಿದೆ.

ಈ ಕುರಿತು ಸಿಂಡಿಕೇಟ್ ಬ್ಯಾಂಕ್​ನ ವಿಶೇಷ ಅಧಿಕಾರಿ ವೈ. ನಾಗೇಶ್ವರ್ ರಾವ್ ಈಟಿವಿ ಭಾರತ್​ ಜೊತೆ ಮಾತನಾಡಿ, ಲಾಕ್‌ಡೌನ್ ನಡುವೆ ವಿಲೀನ ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಯಾವುದೇ ಅಡೆತಡೆ ಆಗುವುದಿಲ್ಲ. ಕೇವಲ ನಾಮಫಲಕ ಬದಲಾವಣೆ ಲಾಕ್‌ಡೌನ್ ಮುಗಿದ ಮೇಲೆ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಸಿಂಡಿಕೇಟ್-ಕೆನರಾ ಬ್ಯಾಂಕ್ ವಿಲೀನ ಸೇರಿ 10 ಬ್ಯಾಂಕ್ ವಿಲೀನ ನಾಳೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.