ETV Bharat / state

ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಶಾಸಕರ ನಿಯೋಗ

ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ, ನಿಯಮಾವಳಿ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಬಿಜೆಪಿ ಶಾಸಕರ ನಿಯೋಗ
ಬಿಜೆಪಿ ಶಾಸಕರ ನಿಯೋಗ
author img

By

Published : Jun 14, 2023, 6:46 PM IST

ಆರ್‌. ಅಶೋಕ್ ಹೇಳಿಕೆ

ಬೆಂಗಳೂರು : ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭಾಗವಹಿಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ. ಬಿಬಿಎಂಪಿಯನ್ನು ಕಾಂಗ್ರೆಸ್ ತನ್ನ ಕಚೇರಿಯನ್ನಾಗಿ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರವನ್ನು ಎಟಿಎಂ ಮಾಡಿಕೊಳ್ಳಲು ಹೊರಟಂತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು ನಿಯಮಾವಳಿ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಇಂದು ರಾಜಭವನಕ್ಕೆ ತೆರಳಿದ ಶಾಸಕರಾದ ಆರ್.ಅಶೋಕ್, ಸುರೇಶ್ ಕುಮಾರ್, ರಘು, ಸಿ.ಕೆ.ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ, ಸಂಸದ ಪಿ.ಸಿ. ಮೋಹನ್ ಅವರಿದ್ದ ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಯಿತು. ಈ ಸಂದರ್ಭದಲ್ಲಿ ಸುರ್ಜೇವಾಲ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು, ಶಾಸಕರ ವಿರುದ್ಧ ದೂರು ಸಲ್ಲಿಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, "ಮಹಾನಗರ ಪಾಲಿಕೆ ಕಚೇರಿಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದ್ದಾರೆ. ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್ ಎಲ್ಲರೂ ಪಾಲಿಕೆಯನ್ನು ಕಾಂಗ್ರೆಸ್ ಕಚೇರಿ ಮಾಡಲು ಹೊರಟಿದ್ದಾರೆ. ನಮ್ಮ ರಾಜ್ಯಸಭಾ, ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದರಿದ್ದಾರೆ. ಅವರನ್ನು ಕರೆದಿಲ್ಲ. ಇದಕ್ಕೆ ಬದಲಾಗಿ ರಾಜ್ಯದ ಯಾವ ಕ್ಷೇತ್ರದ ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ರಣದೀಪ್ ಸುರ್ಜೇವಾಲರನ್ನು ಕರೆದು ಸಭೆ ಮಾಡಿದ್ದಾರೆ. ಸಭೆಯಲ್ಲಿ ವಾರ್ಡ್ ವಿಂಗಡಣೆ, ಡಿಲಿಮಿಟೇಷನ್ ಚರ್ಚೆ ಮಾಡಿದ್ದಾರೆ".

"ಈ ಸಭೆಗೆ ಸಚಿವರ ಹೊರತು ಯಾರನ್ನೂ ಕರೆಯುವಂತಿಲ್ಲ. ಹಾಗಿದ್ದರೆ ಅಧಿಕಾರಿಗಳು ಯಾಕೆ ಬೇಕು? ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಹೇಳಿದಂತೆ ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್​ನವರು ಮುಂದಾಗಿದ್ದಾರೆ. ಕಾಂಗ್ರೆಸ್​ ಪಕ್ಕದ ಚೇರಲ್ಲಿ ಕೂತಿದ್ದರೆ ಕ್ಷಮಿಸಬಹುದಿತ್ತು. ಆದರೆ ಬಿಬಿಎಂಪಿಯ ಪ್ರಮುಖ ಚೇರಲ್ಲಿ ಕೂತಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ. ಹಾಗಾಗಿ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಎಲ್ಲ ದಾಖಲೆ, ಮಾಧ್ಯಮದಲ್ಲಿ ಬಂದ ವರದಿ ತಮ್ಮ ಬಳಿ ಇರುವುದಾಗಿ ರಾಜ್ಯಪಾಲು ಹೇಳಿದ್ದಾರೆ. ಅಧಿಕಾರಿಗಳನ್ನೂ ಕೂಡ ತನಿಖೆ ಮಾಡಬೇಕು ಅಂತ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ" ಎಂದು ತಿಳಿಸಿದರು.

ಸುರ್ಜೇವಾಲ ವಿಚಾರವಾಗಿ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, "ಕಾಂಗ್ರೆಸ್‌ನವರಿಗೆ ಅಧಿಕಾರದ ಮದ ಬಂದಿದೆ. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಾವೇ ಶಾಶ್ವತ ಅಂದುಕೊಂಡಿದ್ದಾರೆ. ನಾಲ್ಕು ದಿನಕ್ಕೆ ಈ ರೀತಿ ಮದ ಬಂದಿದೆ. ಅಧಿಕಾರಿಗಳು ಬಂದರೆ ಸುರ್ಜೇವಾಲ ಎದ್ದು ಹೋಗಬೇಕಿತ್ತು. ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ" ಎಂದರು.

ಅಕ್ಕಿ ಕೊಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎನ್ನುವ ಸಿದ್ದರಾಮಯ್ಯ ಆರೋಪದ ಕುರಿತು ಅಶೋಕ್ ಪ್ರತಿಕ್ರಿಯಿಸಿ, "ಈಗಲೇ ಹೇಳುತ್ತೇನೆ ಬರೆದಿಟ್ಟುಕೊಳ್ಳಿ. ಕರ್ನಾಟಕವನ್ನು ಶ್ರೀಲಂಕಾ ತರ ದಿವಾಳಿ ಮಾಡೋ ಕಾಲ‌ ಹತ್ತಿರದಲ್ಲಿದೆ. ಇವರ ಕೈಯಲ್ಲಿ ಏನೂ ಕೊಡಲು ಆಗಲ್ಲ. ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾಗ ಯಾಕೆ ಅಕ್ಕಿ ಕೇಳಲಿಲ್ಲ?. ಈಗ ಮೋದಿ ಸರ್ಕಾರವನ್ನು ಕೇಳುತ್ತಿದ್ದೀರಾ. ಅಂದು ಜ್ಞಾನ ಇರಲಿಲ್ವಾ.? ಇಬ್ಬರೂ ಸೇರಿ ಸಹಿ ಹಾಕಿ ಕೊಟ್ರಿ.? ಆಗ ಪರಿಜ್ಞಾನ ಇರಲಿಲ್ವಾ.? ಎಲ್ಲರಿಗೂ ಉಚಿತ ಕರೆಂಟ್​ ಫ್ರೀ ಎಂದು ಹೇಳಿದೀರಿ. ಇದೀಗ ಕರೆಂಟ್ ಬಿಲ್ ಹೆಚ್ಚಳಕ್ಕೆ ಬಿಜೆಪಿ ಕಾರಣ ಅಂತೀರಾ. ನಾವು ಇದೀವಾ ಕರೆಂಟ್ ಬಿಲ್ ಜಾಸ್ತಿ ಆದಾಗ.? ನಮ್ಮ ಸರ್ಕಾರ ಇದ್ದಾಗ ಆಗದ ಹೆಚ್ಚಳ ಈಗ ಕಾಂಗ್ರೆಸ್​ ಮಾಡಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು.

"ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹೆಚ್ಚಳ ಜಾಸ್ತಿ ಆಗುತ್ತದೆ. ಕುಡಿಯುವ ನೀರಿನ ದರ ಏರಿಕೆ ಆಗುತ್ತದೆ. ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಗ್ಯಾರಂಟಿ ಆಗುತ್ತದೆ. 15-20% ಸ್ಟ್ಯಾಂಪ್ ಡ್ಯೂಟಿ ಏರಿಕೆ ಆಗುತ್ತದೆ. ಇದೆಲ್ಲಾ ಹೆಚ್ಚಾದ ಮೇಲೆ ತರಕಾರಿ, ದವಸ, ಧಾನ್ಯ ಬೆಲೆ ಹೆಚ್ಚಳ ಮಾಡುತ್ತಾರೆ. ಈ ಮೂಲಕ 2000 ಕೊಟ್ಟು, ಅದಕ್ಕಿಂತ ಹೆಚ್ಚು ವಸೂಲಿ ಮಾಡುತ್ತಾರೆ ಎಂದು" ಅಶೋಕ್​ ಕಾಂಗ್ರೆಸ್​ ವಿರುದ್ದ ಆರೋಪ ಮಾಡಿದರು.

ಡಿ.ಕೆ. ಶಿವಕುಮಾರ್​ ಅವರೊಬ್ಬರಿಗೆ ತಲೆ ಇರೋದು. ಅವರು ಪಕ್ಕಾ ಬ್ಯುಸಿನೆಸ್ ಮ್ಯಾನ್. ಕೊಟ್ಟಂಗೂ ಆಗಬೇಕು, ಕಿತ್ತುಕೊಂಡಂಗೂ ಆಗಬೇಕು. ಜಿಎಸ್​ಟಿ ಕೂಡ ರಾಜ್ಯಕ್ಕೆ ಬರೋದು. ಎಣ್ಣೆ ಹೊಡೆಯೋರು ಈಗಲೇ ಕುಡಿದುಬಿಡಿ. ಅದರ ದರವೂ ಹೆಚ್ಚಳ ಆಗುತ್ತದೆ. ಮೊದಲು ಎಣ್ಣೆ ಹೊಡೆದಾಗ ಕಿಕ್ ಹೊಡೀತಿತ್ತು. ಇದೀಗ ಬಾಟಲ್ ನೋಡಿದರೆ ಕಿಕ್ ಹೊಡೆಯುತ್ತದೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಇದನ್ನೂ ಓದಿ : ಬಿಬಿಎಂಪಿ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿಚಾರ: ಯಾರು, ಯಾವ ದೂರು ಬೇಕಾದರೂ ಕೊಡಲಿ- ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.