ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (C.E.T) ಇದೇ ಆಗಸ್ಟ್ 28,29 ಮತ್ತು 30 ರಂದು ನಡೆಯಲಿದೆ. ಈ ನಿಟ್ಟಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್ನಿಂದ ರಕ್ಷಣೆಗಾಗಿ 2 ಲಕ್ಷ ಸರ್ಜಿಕಲ್ ಮಾಸ್ಕ್‌ಗಳನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಕೊಡುಗೆಯಾಗಿ ನೀಡಲಾಗಿದೆ. ನಗರದ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಆಸ್ಪತ್ರೆ ಹಾಗೂ ಎಇಎಸ್ (ಅಡ್ವಾನ್ಸ್ಡ್ ಎಜುಕೇಷನಲ್ ಸರ್ವೀಸ್) ಸಂಸ್ಥೆ ಸೇರಿ ಈ ಮಾಸ್ಕ್‌ಗಳನ್ನು ನೀಡಿವೆ.
ಬೆಂಗಳೂರಿನಲ್ಲಿಂದು ಈ ಸಂಸ್ಥೆಗಳ ಪ್ರತಿನಿಧಿಗಳು ಸಾಂಕೇತಿಕವಾಗಿ ಸರ್ಜಿಕಲ್ ಮಾಸ್ಕ್‌ಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಖಾಸಗಿ ಆಸ್ಪತ್ರೆಗಳು ಹಾಗೂ ಸಂಘ ಸಂಸ್ಥೆಗಳು ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿವೆ. ಇದು ಅತ್ಯಂತ ಸಂತಸದ ಸಂಗತಿ ಎಂದ್ರು.
ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರೈನ್ ಬೋ ಆಸ್ಪತ್ರೆ, ಬ್ರೈಟ್ ರೈಟ್ ಹಾಗೂ ಎಇಎಸ್ (ಅಡ್ವಾನ್ಸ್ಡ್ ಎಜ್ಯುಕೇಷನಲ್ ಸರ್ವೀಸ್) ಸಂಸ್ಥೆಗಳು ಸರ್ಜಿಕಲ್ ಮಾಸ್ಕ್‌ಗಳನ್ನು ದಾನ ಮಾಡಿರುವುದು ಸಾರ್ಥಕ ಕಾರ್ಯ. ಪರೀಕ್ಷೆ ಕಾಲದಲ್ಲಿ ವಿದ್ಯಾರ್ಥಿಗಳು ಸೋಂಕಿನಿಂದ ಪಾರಾಗಲು ಈ ಮಾಸ್ಕ್‌ಗಳು ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ:SSLC ಪರೀಕ್ಷೆ ತೀರ್ಮಾನ ಹಿಂಪಡೆಯಿರಿ: ಸರ್ಕಾರಕ್ಕೆ ಹೆಚ್ ವಿಶ್ವನಾಥ್ ಆಗ್ರಹ