ಬೆಂಗಳೂರು: ಇತ್ತೀಚೆಗೆ ನಂದಿನಿ ತುಪ್ಪದ ಜಾಲ ಪತ್ತೆ ಹಚ್ಚಿದ ಪೊಲೀಸರು ಇದೀಗ ಪ್ರತಿಷ್ಠಿತ ಸರ್ಫ್ ಎಕ್ಸೆಲ್ ಕಂಪನಿಯ ಹೆಸರಿನ ಲೋಗೊ ಬಳಸಿ ಬಟ್ಟೆ ಒಗೆಯುವ ನಕಲಿ ಪುಡಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಗ್ಗದಾಸಪುರದ ಮುನಿಯಪ್ಪ ಗೋದಾಮು ಒಂದರಲ್ಲಿ ಪ್ರತಿಷ್ಠಿತ ಸರ್ಫ್ ಎಕ್ಸೆಲ್ ಕಂಪನಿಯ ಬಟ್ಟೆ ಒಗೆಯುವ ಪುಡಿ ಗುಡ್ನೈಟ್ ಲಿಕ್ವಿಡ್ ನಕಲು ಮಾಡಿ ತಯಾರಿ ಮಾಡುತ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ದಾಳಿ ಮಾಡಿ ಲಕ್ಷ ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸೀಜ್ ಮಾಡಿದೆ.
ಬೈಯ್ಯಪ್ಪನ ಹಳ್ಳಿಯಲ್ಲಿ ಅಕ್ರಮ ಫ್ಯಾಕ್ಟರಿ ನಡೆಸುತ್ತಿದ್ದ ಮಹೇಶ್ ಕಳೆದ ಕೆಲ ದಿನಗಳಿಂದ ಥೇಟ್ ಸರ್ಫ್ ಎಕ್ಸೆಲ್ ಫೌಡರ್ ರೀತಿ ಪ್ಯಾಕ್ ಮಾಡಿ ಅಂಗಡಿಗಳಿಗೆ ಸೇಲ್ ಮಾಡ್ತಿದ್ದ. ಗ್ರಾಹಕರು ಈ ವಸ್ತುಗಳನ್ನು ಅಸಲು ವಸ್ತುಗಳೆಂದು ನಂಬಿ ಖರೀದಿ ಮಾಡುತ್ತಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.