ಬೆಂಗಳೂರು: ನಾಳೆಯಿಂದ ಶಾಲಾ ತರಗತಿಗಳು ಆರಂಭವಾಗಲಿದ್ದು, ಶಿಕ್ಷಣ ಸಂಸ್ಥೆಗಳು ಈಗಾಗಲೇ ಸಿದ್ಧತೆ ಮುಗಿಸಿವೆ. ಇದೀಗ ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಲು ಆಡಳಿತ ಮಂಡಳಿಗಳು ನಿರ್ಧರಿಸಿವೆ.
ಜನವರಿ 1ರಿಂದಲೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕಿದ್ದ ಕಾರಣ ಇಂದು ನಗರದ ಕೆಲವು ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು. ಇದರ ಬೆನ್ನಲ್ಲೆ ನಗರದ ವಿವಿಧ ಶಾಲೆಗಳಲ್ಲಿ ನಾಳೆಯಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿರುವ ಕಾರಣದಿಂದಾಗಿ ಪ್ರತೀ ವಿದ್ಯಾರ್ಥಿಗೆ ಮತ್ತು ಶಿಕ್ಷಕರಿಗೆ ಕೋವಿಡ್ ಪರೀಕ್ಷೆಗೆ ಹಾಜರಾಗಲು ಶಾಲೆಯ ಆಡಳಿತ ಮಂಡಳಿ ಆದೇಶ ನೀಡಿತ್ತು.
ಇನ್ನು ಶಾಲೆಯ ಆದೇಶದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಆಗಮಿಸಿ ಗಂಟಲ ದ್ರವದ ಸ್ಯಾಂಪಲ್ ನೀಡಿದರು. ಇದರ ಜೊತೆ ಶಾಲಾ ಆಡಳಿತ ಮಂಡಳಿ ತರಗತಿಗಳನ್ನು ಹಾಗೂ ಶಾಲೆಯ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸ್ಯಾನಿಟೈಸೆಷನ್ ಕೂಡ ಮಾಡಿಸಿವೆ. ಅಲ್ಲದೇ ತರಗತಿಗಳಲ್ಲಿ ಪ್ರತಿಯೊಂದು ಬೆಂಚಿನ ಮೇಲೆ ವಿದ್ಯಾರ್ಥಿಯ ಹೆಸರು ಬರೆಯಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಲು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಮಾರ್ಚ್ನಲ್ಲಿ ನಡೆಸುವುದಿಲ್ಲ: ಸಚಿವ ಸುರೇಶ್ ಕುಮಾರ್