ETV Bharat / state

ವೀಕೆಂಡ್ ವಿತ್ ಪಬ್ಲಿಕ್: ಬೈಕ್‌ನಲ್ಲಿ ಸಂಚರಿಸಿದ ಶಿಕ್ಷಣ ಸಚಿವ - ಬೈಕ್‌ನಲ್ಲಿ ಸಂಚರಿಸಿದ ಶಿಕ್ಷಣ ಸಚಿವ

ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ದ್ವಿಚಕ್ರ ವಾಹನದಲ್ಲಿ ಓಡಾಡಿದ ಸಚಿವ ಸುರೇಶ್ ಕುಮಾರ್ ವಾರ್ಡ್​ಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ನಾಗರಿಕರ ಮನೆಗಳಿಗೆ ಭೇಟಿ ಕೊಟ್ಟು, ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್
author img

By

Published : Jan 4, 2021, 6:36 AM IST

Updated : Jan 4, 2021, 10:12 AM IST

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವೀಕೆಂಡ್ ವಿತ್ ಪಬ್ಲಿಕ್ ಅಂತ ನಿನ್ನೆ ಬೈಕ್​ ಮೂಲಕ ಕೆಲ ವಾರ್ಡ್​ಗಳ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಗಮನ ಸೆಳೆದರು.

suresh-kumar-bike-ride
ಸಚಿವರ ಭೇಟಿ

ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರೊಂದಿಗೆ ದ್ವಿಚಕ್ರ ವಾಹನದಲ್ಲಿ ಓಡಾಡಿದ ಸಚಿವ ಸುರೇಶ್ ಕುಮಾರ್ ವಾರ್ಡ್​ಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಮತ್ತು ಕೆಲವು ನಾಗರಿಕರ ಮನೆಗಳಿಗೆ ಭೇಟಿ ಕೊಟ್ಟರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಅನೌಪಚಾರಿಕ ಭೇಟಿಯಲ್ಲಿ ಅನೇಕರೊಂದಿಗೆ ಮಾತನಾಡುತ್ತಾ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಪಡೆದುಕೊಂಡರು.

suresh-kumar-bike-ride
ಮನೆಗಳಿಗೆ ಸಚಿವರ ಭೇಟಿ

ಕೊರೊನಾ ನಂತರದ ಬೆಳವಣಿಗೆ, ಶಾಲಾ ಕಾಲೇಜುಗಳ ಆರಂಭ ಇತ್ಯಾದಿ ವಿಷಯಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿದರು. ಸರ್ಕಾರದಿಂದ ಜನರು ಏನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಸಮಾಲೋಚನೆ ನಡೆಸಿದರು.

ಬಹಳ ದಿನಗಳ ನಂತರ ದ್ವಿಚಕ್ರವಾಹನದಲ್ಲಿ ಓಡಾಡಿದ ಸುರೇಶ್ ಕುಮಾರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಈ ಕುರಿತಾದ ಫೋಟೋ ಹಂಚಿಕೊಂಡಿದ್ದಾರೆ.

Last Updated : Jan 4, 2021, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.