ಬೆಂಗಳೂರು:ರಾಷ್ಟ್ರೀಯ ಹೆದ್ದಾರಿ ಬೆಳಗಾವಿಯ ಖಾನಾಪುರದಿಂದ - ಗೋವಾದವರೆಗೆ ಅಗಲೀಕರಣ ವಿಚಾರ ಸಂಬಂಧ ಪರಿಸರವಾದಿ ಸುರೇಶ್ ಹೆಬ್ಬಿಕ್ಕರ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ನಡೆಯಿತು.
ಚತುಶ್ಪಥ ರಸ್ತೆ ನಿರ್ಮಾಣ ಮಾಡದಂತೆ ನಿರ್ದೇಶನಕ್ಕೆ ಮನವಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸುರೇಶ್,ಅವರ ಮನವಿಯ ಮೇರೆಗೆ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಾಪೀಠದಲ್ಲಿ PIL ವಿಚಾರಣೆ ನಡೆಸಿತು,ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 4ಎ ಹೆದ್ದಾರಿ ಅಗಲೀಕರಣ ಮಾಡಲು ಎನ್‌ಎಚ್‌ಎಐ ಸಿದ್ಧತೆ ಮಾಡಿ ದಾಂಡೇಲಿ ಬಳಿಯಿರುವ ಅಣಿಶಿ (ಕಾಳಿ) ಟೈಗರ್ ರಿಸರ್ವ್ ಏರೀಯಾ,ಆನೆ ಸಂರಕ್ಷಿತಾ ಅಭಯಾರಣ್ಯ ಪ್ರದೇಶದ ಒಳಗೆ ರಸ್ತೆ ನಿರ್ಮಿಸದಂತೆ/ ಅಗಲೀಕರಣ ಮಾಡದಂತೆ ವಾದ ಮಂಡನೆ ಮಾಡಿದರು,ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ವಾದ ಮಾಡಿ,ಪ್ರತಿವಾದಿಗಳು ಅಕ್ಷೇಪಣೆ ಮತ್ತು ಕೋರ್ಟ್ ಕೇಳಿದ್ದ ವರದಿ ನೀಡಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಅಕ್ಟೋಬರ್ 17ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ರಾಷ್ಟ್ರೀಯ ಹೆದ್ದಾರಿ 4ಎ ಯನ್ನ ಬೆಳಗಾವಿ ಖಾನಾಪುರ ದಿಂದ ಗೋವಾಗೆ ಮಾಡಲು ಎನ್ ಹೆಚ್ಎಐ ಮುಂದಾಗಿತ್ತು. ಅದಕ್ಕಾಗಿ ವನ್ಯ ಜೀವಿ ಮಂಡಳಿಯ ಅನುಮತಿ ಪಡೆಯದೇ ಬರೋಬ್ಬರಿ 26 ಸಾವಿರ ಮರಗಳನ್ನು ತೆರವುಗೊಳಿಸಲಾಗಿತ್ತು. ಇದರಿಂದ ವನ್ಯಜೀವಿಗಳ ಪ್ರಾಣಕ್ಕೆ ಅಪಾಯ ಇದೆ. ನಾಲ್ಕು ಲೈನ್ ನಿರ್ಮಾಣ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಗೆ ಪರಿಸರವಾದಿ ಸುರೇಶ್ ಹೆಬ್ಲಿಕರ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ವಾದಿಸಿದ್ದರು. ಈ ಹಿಂದೆ ವಾದ ಆಲಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಅರಣ್ಯ ಇಲಾಖೆಗೆ ನೊಟೀಸ್ ಜಾರಿ ಮಾಡಿತ್ತು. ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಂದು ನೀಡುವಂತೆ ಹೈ ಕೋರ್ಟ್ ಸೂಚಿಸಿತ್ತು.