ಬೆಂಗಳೂರು: ಭಕ್ತರ ಕಷ್ಟವನ್ನ ಪರಿಹರಿಸೋ ಆ ಭಗವಂತನಿಗೇ ಇಲ್ಲಿ ಸಂಕಷ್ಟ ಎದುರಾಗಿದೆ. ಬೆಂಗಳೂರಿನ 43 ದೇವಾಲಯಗಳನ್ನ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ನಿರ್ಮಾಣವಾಗಿರುವ ದೇವಾಲಯ, ಚರ್ಚ್ ಹಾಗೂ ಮಸೀದಿಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
2009ರ ನಂತರ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಕೋರ್ಟ್ ಸೂಚನೆ ನೀಡಿದೆ. ಈ ಪೈಕಿ ಮಾಗಡಿ ರಸ್ತೆಯ ಶ್ರೀ ಸಾಯಿ ಬಾಬಾ ದೇವಸ್ಥಾನ, ಶನಿ ಮಹಾತ್ಮ ದೇವಾಲಯ, ವಿಗ್ನ ನಿವಾರಕ ಗಣೇಶ ದೇವಾಲಯ ಸೇರಿದಂತೆ ನಗರದ 43 ದೇವಾಲಯಗಳನ್ನ ಕೆಡವಲು ಪಾಲಿಕೆ ಮುಂದಾಗಿದೆ.
ದೇವಾಲಯಗಳ ತೆರವಿನ ಪಟ್ಟಿ ಆಡಳಿತ ಮಂಡಳಿಗೆ ಸಿಕಿದ್ದೇ ತಡ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಭಕ್ತರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪ್ರಾಣ ಬೇಕಾದ್ರೂ ಬಿಡ್ತೇವೆ ಆದ್ರೆ, ದೇವಾಲಯದ ಕಟ್ಟಡ ತೆರವಿಗೆ ಅವಕಾಶ ನೀಡೊಲ್ಲ. ಹೀಗೆ ಮುಂದುವರಿದ್ರೆ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಗೆ ನೀಡಿದ್ದಾರೆ
ಭಕ್ತರ ಹಲವು ಸಮಸ್ಯೆಗಳನ್ನ ನಿವಾರಿಸೋ ದೇವರಿಗೆ ಇಲ್ಲಿ ಸಂಕಷ್ಟ ಎದುರಾಗಿರೋದು ನಿಜಕ್ಕೂ ವಿಪರ್ಯಾಸ. ನಾಳೆ ಪ್ರತಿಭಟನೆ ನಡೆಸೋದಾಗಿ ಭಕ್ತಾಧಿಗಗಳು ತಿಳಿಸಿದ್ದು, ಉಗ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯೂ ಇದೆ.