ETV Bharat / state

ಕೃಷ್ಣಾ ಜಲ ವಿವಾದ : ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ನಾಳೆಗೆ ಮುಂದೂಡಿಕೆ

ಕೃಷ್ಣಾ ಜಲ ವಿವಾದ - ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ- ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಾಳೆಗೆ ಮುಂದೂಡಿಕೆ

supreme-court-hearing-on-krishna-water-dispute
ಕೃಷ್ಣಾ ಜಲ ವಿವಾದ : ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ನಾಳೆಗೆ ಮುಂದೂಡಿಕೆ
author img

By

Published : Jan 10, 2023, 6:42 PM IST

ನವದೆಹಲಿ/ಬೆಂಗಳೂರು : ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ -2 (ಬ್ರಿಜೇಶ್ ಕುಮಾರ್ ಆಯೋಗ) ಅಂತಾರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನೀಡಿರುವ ಐತೀರ್ಪನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಈ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ​ ನಾಳೆ ಮತ್ತೆ ಮುಂದುವರೆಯಲಿದೆ.

ವಿಚಾರಣೆ ನಾಳೆಗೆ ಮುಂದೂಡಿಕೆ.. ಕರ್ನಾಟಕದ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಮ್​ ದಿವಾನ್ ಅವರು ಮಂಗಳವಾರ ಸುಮಾರು 1 ಗಂಟೆ 10 ನಿಮಿಷ ಕಾಲ ವಿವರವಾದ ಮತ್ತು ಸಮರ್ಥವಾದ ವಾದವನ್ನು ಮಂಡಿಸಿದರು. ಐತೀರ್ಪಿನ ಗೆಜೆಟ್ ಪ್ರಕಟಣೆಗೆ ಇರುವ ಅಗತ್ಯತೆಗಳನ್ನು ಮತ್ತು ಅವಶ್ಯಕತೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

14,955 ಕೋಟಿ ವೆಚ್ಚದಲ್ಲಿ ಯೋಜನೆ .. ಕರ್ನಾಟಕವು ಈಗಾಗಲೇ 14,955 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡುವ ಮೂಲಕ ಕರ್ನಾಟಕದ ಪಾಲಿಗೆ ಹಂಚಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 130 ಟಿ.ಎಂ.ಸಿ ನೀರಿನ ಬಳಕೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಈ ಸೌಕರ್ಯವು ವ್ಯರ್ಥವಾಗಬಾರದು ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಕಾವೇರಿ ಜಲವಿವಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದಾಗ್ಯೂ ಸಹ ನ್ಯಾಯಾಲಯವೇ ಅಂತಾ​ರಾಜ್ಯ ಜಲ ವಿವಾದ ಕಾಯ್ದೆಯನ್ವಯ ಗೆಜೆಟ್ ಪ್ರಕಟಣೆಗೆ ಅವಕಾಶ ನೀಡಿತ್ತು. ಅಂತಹದೇ ಸ್ಥಿತಿ ಇಂದೂ ಇದೆ. ಗೆಜೆಟ್ ಪ್ರಕಟಣೆಗೆ ಸರ್ವೋಚ್ಚ ನ್ಯಾಯಾಲಯವು ನಿಯಂತ್ರಣ ಹೇರಿದಾಗ ಅಂತಾರಾಜ್ಯ ಜಲ ವಿವಾದ ಕಾಯ್ದೆಯ 5(3)ರಡಿಯಲ್ಲಿ ಮುಂದುವರೆದ ವರದಿ ಸಲ್ಲಿಕೆಯಾಗಿರಲಿಲ್ಲ. ಎಲ್ಲಾ ರಾಜ್ಯಗಳು ನ್ಯಾಯಾಧೀಕರಣದ ಮುಂದೆ ಸ್ಪಷ್ಟೀಕರಣ ಉಲ್ಲೇಖದ ಆದೇಶಗಳ ನಿರೀಕ್ಷಣೆಯಲ್ಲಿದ್ದಾಗ ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ಗೆಜೆಟ್ ಪ್ರಕಟಣೆಗೆ ನಿಯಂತ್ರಣ ಹೇರಿತ್ತೇ ಹೊರತು ಗೆಜೆಟ್ ಪ್ರಕಟಣೆ ಮಾಡಬಾರದು ಎಂದು ಹೇಳಿರಲಿಲ್ಲ ಎಂದರು.

ಈಗ 29/11/2013 ರಂದೇ ನ್ಯಾಯಾಧೀಕರಣದ ಅಂತಿಮ ವರದಿ ಸಲ್ಲಿಕೆಯಾಗಿದೆ. ಈ ಮೊದಲು 30/12/2010 ರಂದು ನ್ಯಾಯಾಧೀಕರಣದ ಐತೀರ್ಪು ಸಲ್ಲಿಕೆಯಾಗಿದೆ. ನ್ಯಾಯಾಧೀಕರಣದ ಐತೀರ್ಪನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್​​​ನಲ್ಲಿ ಪ್ರಕಟಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ನಿಯಂತ್ರಣವನ್ನು ಸಡಿಲಗೊಳಿಸಬೇಕು ಮತ್ತು ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಕರ್ನಾಟಕದ ವಾದ ಮಂಡನೆಯ ನಂತರ ನಾಳೆ ಮತ್ತೆ ತನ್ನ ಕಲಾಪವನ್ನು ಮುಂದುವರೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ : ವಿಜಯಪುರ ಜಿಲ್ಲೆಯ ಭೂಸ್ವಾಧೀನ ತಾರತಮ್ಯ ನಿವಾರಣೆಗೆ ಸಚಿವ ಸಂಪುಟ ನಿರ್ಣಯ: ಸಚಿವ ಗೋವಿಂದ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.