ETV Bharat / state

School uniform scam: ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ: ಪ್ರಕರಣ ದಾಖಲು - ಶೇಷಾದ್ರಿಪುರಂ ಠಾಣೆ

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

School Uniform scam
ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆ
author img

By

Published : Jun 10, 2023, 3:21 PM IST

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಗುಣಮಟ್ಟದ ಬಟ್ಟೆ ಪೂರೈಸಿದ ಆರೋಪದಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿರ್ಗಮಿತ ವ್ಯವಸ್ಥಾಪಕ ನಿರ್ದೇಶಕ ಮುದ್ದಯ್ಯ ಎಸ್, ತಾಂತ್ರಿಕ ವ್ಯವಸ್ಥಾಪಕ ಶ್ರೀಧರ್ ಬಿ.ಜಿ ಹಾಗೂ ಎಸ್ಟೇಟ್ ಆಫೀಸರ್ ಬಿ. ಲಕ್ಷ್ಮಣ್ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2021 -22ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಲು ರಾಜ್ಯಾದ್ಯಂತ 1,34,05,729 ಮೀಟರ್ ಬಟ್ಟೆಯನ್ನು ನೀಡಲಾಗಿತ್ತು. ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರಕ್ಕಾಗಿ ಬಟ್ಟೆ ನೀಡಲಾಗಿತ್ತು. ಆದರೆ ಒಳ್ಳೆಯ ಗುಣಮಟ್ಟದ ಬಟ್ಟೆ ನೀಡಿಲ್ಲ ಎಂದು ದೂರು ದಾಖಲಿಸಲಾಗಿದೆ. ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದಾಗಿದ್ದು, ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಜವಳಿ ಆಯುಕ್ತರ ಸಹಾಯಕ ಬಿ. ಶ್ರೀಧರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಅಲ್ಲದೇ ಪೀಣ್ಯಾ ಬಳಿಯ ಎರಡು ಎಕರೆ 34 ಗುಂಟೆ ವಿಸ್ತೀರ್ಣದಲ್ಲಿ ಇರುವ ಏಳು ಕೈಗಾರಿಕಾ ಶೆಡ್ ಬಾಡಿಗೆ ನೀಡುವಲ್ಲಿಯೂ ಅವ್ಯವಹಾರ ನಡೆದಿದೆ. ಕಡಿಮೆ ಬೆಲೆಗೆ 22 ವರ್ಷಕ್ಕೆ ನೋಟಿಫಿಕೇಷನ್ ಮಾಡಿ ಕೊಡಲಾಗಿದೆ ಎಂದು ಒಂದೇ ದೂರಿನಲ್ಲಿ ಎರಡೂ ವಿಚಾರಗಳನ್ನು ನಮೂದಿಸಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳಪೆ ಶೂ, ಸಾಕ್ಸ್​ ನೀಡಿ, ಖರೀದಿಯಲ್ಲಿ ಕಮಿಷನ್​: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಮವಸ್ತ್ರ ವಿತರಣೆ ವಿಳಂಬ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಛೀಮಾರಿ ಹಾಕಿತ್ತು. ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಕಳೆದ ಫೆಬ್ರುವರಿಯಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಮವಸ್ತ್ರ ಖರೀದಿಗೆ ಸರ್ಕಾರಿ ಶಾಲೆಗಳಿಗೆ ಗ್ರೀನ್​ ಸಿಗ್ನಲ್​ ನೀಡಿತ್ತು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಶಾಲೆಯ ಮುಖ್ಯಶಿಕ್ಷಕರು ಹಾಗೂ ಎಸ್​ಡಿಎಂಸಿ ಅಧ್ಯಕ್ಷರು ಮಕ್ಕಳಿಗೆ ಕಳಪೆ ಶೂ ಹಾಗೂ ಸಾಕ್ಸ್​ ನೀಡಿ, ಖರೀದಿಯಲ್ಲಿ ಕಮಿಷನ್​ ಪಡೆದಿದ್ದಾರೆ ಎನ್ನುವ ಆರೋಪ ಕಲಬುರಗಿ ಜಿಲ್ಲೆಯಲ್ಲಿ ಕೇಳಿ ಬಂದಿತ್ತು.

ಕಲಬುರಗಿ ಜಿಲ್ಲೆಯ ಪ್ರತಿ ವಿದ್ಯಾರ್ಥಿಯ ಶೂ ಹಾಗೂ ಸಾಕ್ಸ್​ ಖರೀದಿಯಲ್ಲಿ 60 ರಿಂದ 80ರ ವರೆಗೆ ಕಮಿಷನ್​ ಪಡೆದಿರುವುದಾಗಿ ಖುದ್ದು ಮುಖ್ಯ ಶಿಕ್ಷಕರೊಬ್ಬರು ಬಾಯ್ಬಿಟ್ಟಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಶರಣ್​ ಐ ಟಿ ಆರೋಪ ಮಾಡಿದ್ದರು. ಹೆಡ್​ ಮಾಸ್ಟರ್​ಗಳ ಕಮಿಷನ್​ನಿಂದಾಗಿ ಅಂಗಡಿ ಮಾಲೀಕರು ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್​ಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಧರಿಸಿದ ಕೆಲವೇ ದಿನಗಳಲ್ಲಿ ಅವುಗಳು ಹಾಲಾಗಿವೆ. ಶೂ ಖರೀದಿಯಲ್ಲಿ ಕಮಿಷನ್​ ದಂಧೆ ನಡೆಯುತ್ತಿದ್ದರ ಬಗ್ಗೆ ಸ್ವತಃ ಒಬ್ಬ ಹೆಡ್​ ಮಾಸ್ಟರೇ ಹೇಳಿದ್ದರು ಎಂದು ಶರಣ್​ ದೂರಿದ್ದರು. ಇದೀಗ ಮತ್ತೆ ಅಂತಹದೇ, ಕಳಪೆ ಬಟ್ಟೆ ಪೂರೈಕೆಯ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ಆರೋಪ.. ಮುಖ್ಯೋಪಾಧ್ಯಾಯರು ನಡೆಸಿದ್ದಾರಾ ಕಮಿಷನ್​ ದಂಧೆ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.