ETV Bharat / state

ಇನ್ಮುಂದೆ ರಾಜ್ಯ ಸರ್ಕಾರದಿಂದಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಕ್ಕಿ, ಗೋಧಿ ಪೂರೈಕೆ: ಸಚಿವೆ ಜೊಲ್ಲೆ - ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುತ್ತಿದೆ ಮಾಜಿ ಸಚಿವ ಯು.ಟಿ. ಖಾದರ್ ಮಾಡಿರುವ ಆರೋಪಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣ ನೀಡಿದ್ದಾರೆ. ಸಿದ್ಧಗಂಗ ಮಠ ಸೇರಿದಂತೆ ರಾಜ್ಯದ 464 ಶಿಕ್ಷಣ ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ ಕಡಿತಗೊಳಿಸಿರುವುದು ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದಲ್ಲ‌. ಹಿಂದಿನ ಸರ್ಕಾರದ ಅವಧಿಯಲ್ಲೇ ಆಗಿದೆ ಎಂದಿದ್ದಾರೆ.

ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ, Minister of Food and Civil Supplies Shashikala Jolle
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ
author img

By

Published : Feb 4, 2020, 5:59 PM IST

ಬೆಂಗಳೂರು: ಹಿಂದಿನ ಸರ್ಕಾರ ಇದ್ದಾಗಲೇ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಅಕ್ಕಿ, ಗೋಧಿ ಪೂರೈಕೆ ನಿಲ್ಲಿಸಲಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಈ ಕ್ರಮ ಆಗಿರುವುದಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಾಜಿ ಸಚಿವ ಯು.ಟಿ. ಖಾದರ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು. ಸಿದ್ಧಗಂಗೆ ಸೇರಿದಂತೆ ರಾಜ್ಯದ 464 ಶಿಕ್ಷಣ ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ ಕಡಿತಗೊಳಿಸಿರುವುದು ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದಲ್ಲ‌. ಹಿಂದಿನ ಸರ್ಕಾರದ ಅವಧಿಯಲ್ಲೇ ಆಗಿದೆ. ಕೇಂದ್ರ ಸರ್ಕಾರದ ಆದೇಶದ ಅನ್ವಯ ಖಾಸಗಿ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಕೆ ಕಡಿತವಾಗಿದೆ. ಮೂರು ತಿಂಗಳ ಹಿಂದೆಯೇ ಸಿದ್ಧಗಂಗಾ ಶ್ರೀಗಳು ಮತ್ತು ಮುರುಘಾ ಶರಣರು ಪತ್ರ ಬರೆದು ಈ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದರು ಎಂದು ಮಾಹಿತಿ ನೀಡಿದರು.

ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ

ಮಾಹಿತಿ ಅನುಸಾರ ನಾನು ಇದರ ಬಗ್ಗೆ ಗಮನ ಹರಿಸಿದ್ದು, ರಾಜ್ಯ ಸರ್ಕಾರದಿಂದಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಸಲು ಉದ್ದೇಶಿಸಿದ್ದೇವೆ‌‌. ಅದಕ್ಕೆ ವಾರ್ಷಿಕ 12.50 ಕೋಟಿ ರೂ.ವೆಚ್ಚ ತಗುಲುತ್ತದೆ‌. ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದೇವೆ. ಸಿಎಂ ಜೊತೆ ಚರ್ಚೆ ನಡೆಸಿ ಆಹಾರ ಧಾನ್ಯಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವೆ ಜೊಲ್ಲೆ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುತ್ತೇವೆ ಎಂದ ಅವರು, ವಿವಿಧ ಮಠಗಳು, ಮತ್ತು ಸಂಘ ಸಂಸ್ಥೆಗಳ ಮನವಿ ಮೇರೆಗೆ ಅಕ್ಕಿ, ಗೋದಿ ಕೊಡಲು ಮುಂದಾಗುತ್ತೇವೆ. ಮಠಗಳು, ಸಂಘ ಸಂಸ್ಥೆಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ತೇವೆ ಎಂದರು.

Intro:Body:KN_BNG_01_SHASHIKALAJOLLE_BYTE_SCRIPT_7201951

ಮುಂದೆ ರಾಜ್ಯ ಸರ್ಕಾರವೇ ಅಕ್ಕಿ, ಗೋಧಿ ಪೂರೈಸಲಿದೆ: ಸಚಿವೆ ಜೊಲ್ಲೆ

ಬೆಂಗಳೂರು: ಹಿಂದಿನ ಸರ್ಕಾರ ಇದ್ದಾಗಲೇ ಅಕ್ಕಿ, ಗೋಧಿ ಪೂರೈಕೆ ನಿಂತಿದ್ದು, ನಮ್ಮ ಸರ್ಕಾರ ಬಂದ ಬಳಿಕ ಆಗಿರುವುದಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಯು.ಟಿ.ಖಾದರ್ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಅವರು, ಸಿದ್ದಗಂಗೆ ಸೇರಿದಂತೆ ರಾಜ್ಯದ 464 ಶಿಕ್ಷಣ ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ ಕಡಿತಗೊಳಿಸಿರುವುದು ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದಲ್ಲ‌. ಹಿಂದಿನ ಸರ್ಕಾರದ ಅವಧಿಯಲ್ಲೇ ಆಗಿದೆ. ಕೇಂದ್ರ ಸರ್ಕಾರದ ಆದೇಶದ ಅನ್ವಯ ಖಾಸಗಿ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಕೆ ಕಡಿತವಾಗಿದೆ. ಮೂರು ತಿಂಗಳ ಹಿಂದೆಯೇ ಸಿದ್ದಗಂಗಾ ಶ್ರೀಗಳು ಮತ್ತು ಮುರುಘಾ ಶರಣರು ಪತ್ರ ಬರೆದು ಈ ವಿಷಯ ನಮ್ಮ ಗಮನಕ್ಕೆ ತಂದಿದ್ದರು ಎಂದು ಸ್ಪಷ್ಟಪಡಿಸಿದರು.

ತಕ್ಷಣ ನಾನು ಇದರ ಬಗ್ಗೆ ಗಮನ ಹರಿಸಿದ್ದು ರಾಜ್ಯ ಸರ್ಕಾರದಿಂದಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಹಾರಧಾನ್ಯ ಪೂರೈಸಲು ಉದ್ದೇಶಿಸಿದ್ದೇವೆ‌‌. ಅದಕ್ಕೆ ವಾರ್ಷಿಕ 12.50 ಕೋಟಿ ರೂ.ವೆಚ್ಚ ತಗುಲುತ್ತದೆ‌. ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಿದ್ದೇವೆ. ಸಿಎಂ ಜೊತೆ ಚರ್ಚೆ ನಡೆಸಿ ಆಹಾರ ಧಾನ್ಯಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುತ್ತೇವೆ ಎಂದು ತಿಳಿಸಿದರು.

ವಿವಿಧ ಮಠಗಳು, ಮತ್ತು ಸಂಘ ಸಂಸ್ಥೆಗಳು ಮನವಿ ಮೇರೆಗೆ ಅಕ್ಕಿ ಗೋದಿ ಕೊಡಲು ಮುಂದಾಗುತ್ತೇವೆ. ಮಠಗಳು, ಸಂಘ ಸಂಸ್ಥೆಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ತೇವೆ. ನಾನು ಸಚಿವೆ ಆಗುವುದಕ್ಕಿಂತ ಮುನ್ನವೇ ಆಹಾರ ಧಾನ್ಯ ಪೂರೈಕೆ ನಿಂತಿತ್ತು. ರಾಜ್ಯದಲ್ಲಿ 183 ಸಂಸ್ಥೆಗಳಿಗೆ ಸರಕಾರದಿಂದ ಅಕ್ಕಿ- ಗೋಧಿ ಪೂರೈಕೆ ಮಾಡ್ತಾ ಇದ್ದೇವೆ. ಆದರೆ, 281 ಖಾಸಗಿ ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಅಕ್ಕಿ- ಗೋಧಿ ಪೂರೈಕೆ ನಿಲ್ಲಿಸುವಂತೆ ಕೇಂದ್ರದಿಂದ ಸೂಚನೆ ಬಂದಿತ್ತು. ಆದ್ರೆ ಇನ್ನು ಮುಂದೆ ಉಳಿದ ಎಲ್ಲ 281 ಖಾಸಗಿ ಸಂಸ್ಥೆಗಳಿಗೂ ಅಕ್ಕಿ ಮತ್ತು ಗೋಧಿ ಪೂರೈಕೆ ಮಾಡುತ್ತೇವೆ‌ ಎಂದು ವಿವರಿಸಿದರು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.