ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರೌಡಿಶೀಟರ್ ಸುನೀಲ್ ಬಿಜೆಪಿ ಸೇರುವ ವದಂತಿ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ ಶೋಧ ನಡೆಸುತ್ತಿರುವ ಸಿಸಿಬಿ ಪೊಲೀಸರು ತನಗೆ ನೊಟೀಸ್ ನೀಡಿದರೆ ಮಾತ್ರ ಹಾಜರಾಗುವೆ ಎಂದು ಸುನೀಲ್ ಪರ ವಕೀಲ ಪ್ರಮೋದ್ ಚಂದ್ರ ತಿಳಿಸಿದ್ದಾರೆ.
ಸುನೀಲ್ ಪರವಾಗಿ ಅವರು ಇಂದು ಸಿಸಿಬಿ ಮುಂದೆ ಹಾಜರಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್, ಸುನೀಲ್ ಎಲ್ಲಿಯೂ ತಪ್ಪಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಸಿಸಿಬಿ ಪೊಲೀಸರು ವಿಚಾರಣೆಗೆ ನೊಟೀಸ್ ನೀಡಿದರೆ ಸುನಿಲ್ ಹಾಜರಾಗುತ್ತಾರೆ. ಸುಖಾಸುಮ್ಮನೆ ನೊಟೀಸ್ ಕೊಡದೇ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತರ್ಲೆ ಮಾಡಿದ್ರೆ ಕಠಿಣ ಕ್ರಮ: ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್