ಬೆಂಗಳೂರು: ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಹಗರಣ ನಡೆದಿದ್ದರೆ ಅದರ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ. ಅದನ್ನು ಸ್ವೀಕರಿಸಿದ್ದೇನೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಡಿಕೆಶಿ ಸವಾಲ್ ನಾನು ಸ್ವೀಕರಿಸುತ್ತೇನೆ. ಅಧಿವೇಶನ ಮುಗಿದ ನಂತರ ಸೋಲಾರ್ ಹಗರಣದ ಬಗ್ಗೆ ಮಾಹಿತಿಯನ್ನ ರಾಜ್ಯದ ಜನರ ಮುಂದಿಡುತ್ತೇನೆ. ಸರ್ಕಾರಕ್ಕೆ ಕೆಲವು ಒಪ್ಪಂದದಿಂದ ನಷ್ಟವಾಗಿದೆ. ಈ ಒಪ್ಪಂದಗಳನ್ನ ಸರಿಪಡಿಸುವ ಕೆಲಸ ಮಾಡ್ತೇನೆ. ಸೋಲಾರ್ ಹಗರಣದ ಬಗ್ಗೆ ತನಿಖೆ ಮಾಡುವ ವಿಚಾರ ಸಮಯ ಬಂದಾಗ ಹೇಳತ್ತೇನೆ ಎಂದರು.
ಇನ್ನು ರೈತರಿಗೆ ಹೆಚ್ಚುವರಿ ಹಾಗೂ ನಿರಂತರ ವಿದ್ಯುತ್ ಪೂರೈಸುತ್ತೇವೆ ಎಂದು ನಾವು ಅಭಯ ನೀಡುತ್ತೇವೆ ಎಂದು ವಿವರಿಸಿದರು. ಹಿಂದೂಗಳ ಹತ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಇಸ್ಲಾಂ ಭಯೋತ್ಪಾದನೆ. ತಮ್ಮದೇ ಲೋಕ ಸೃಷ್ಟಿಮಾಡುವ ಹುನ್ನಾರ ಅವರದ್ದು. ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡಲಾಗಿದ್ದು, ಇದರಿಂದ ಸತ್ಯಾಂಶ ಹೊರಬರುತ್ತದೆ ಎಂದರು.
ಇದನ್ನೂ ಓದಿ: ಮಳೆ ಆತಂಕ.. ಬಿಜೆಪಿ ಸಾಧನಾ ಸಮಾವೇಶ ಮುಂದೂಡಲ್ಲ: ಬಿಜೆಪಿ ಸ್ಪಷ್ಟನೆ