ETV Bharat / state

ಶುಗರ್ ಮಾಫಿಯಾ ವಿರುದ್ಧ ಕಬ್ಬು ಬೆಳೆಗಾರರಿಂದ ಪೊರಕೆ ಚಳವಳಿ - kurubooru shanthkumar

ನೂರಾರು ಕಬ್ಬು ಬೆಳೆಗಾರರಿಂದ ಶುಗರ್ ಮಾಫಿಯಾ ವಿರುದ್ಧ ಪೂರಕೆ ಚಳವಳಿ ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆಯಿತು.

sugarcane farmers groom protest against government
ಶುಗರ್ ಮಾಫಿಯಾದ ವಿರುದ್ಧ ಕಬ್ಬು ಬೆಳೆಗಾರರಿಂದ ಪೊರಕೆ ಚಳುವಳಿ...
author img

By

Published : Nov 23, 2022, 8:18 PM IST

Updated : Nov 23, 2022, 9:11 PM IST

ಬೆಂಗಳೂರು: ಕಬ್ಬಿನ ಎಫ್.ಆರ್.ಪಿ ಹೆಚ್ಚುವರಿ ದರ ನಿಗದಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಲಾಯಿತು. ರೈತರು ಮುಖ್ಯಮಂತ್ರಿ ಮನೆ ಮುಂದೆ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪೊರಕೆ ಚಳವಳಿ ಮೂಲಕ ಪ್ರತಿಭಟನೆ ಮುಂದುವರಿದಿದೆ.

ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿ 5 ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ತಿರ್ಮಾನ ಕೈಗೂಳುವ ಸರ್ಕಾರ ಭರವಸೆ ನೀಡಿತ್ತು, ಇದು ಹುಸಿಯಾಗಿದೆ. ಸಕ್ಕರೆ ಸಚಿವರು ನುಡಿದಂತೆ ನಡೆಯದೆ ಇರುವುದನ್ನು ಖಂಡಿಸಿ, ರೈತರಿಗೆ ನ್ಯಾಯ ಸಿಗುವವರೆಗೆ ಚಳವಳಿ ನಡೆಸುವುದಾಗಿ ತೀರ್ಮಾನಿಸಿದ್ದೇವೆ. ಈ ಮೂಲಕ ಸರ್ಕಾರದ ವರ್ತನೆಯನ್ನು ಖಂಡಿಸಿ ಪೊರಕೆ ಚಳವಳಿ ನಡೆಸಲಾಗುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಕಬ್ಬು ಉತ್ಪಾದನಾ ವೆಚ್ಚ ಶೇಕಡ 20ರಷ್ಟು ಏರಿಕೆ: ಕಬ್ಬಿನ ಉತ್ಪಾದನೆಯ ವೆಚ್ಚ ಶೇಕಡ 20ರಷ್ಟು ಏರಿಕೆಯಾಗಿದೆ, ಆದರೆ, ಕೇಂದ್ರ ಸರ್ಕಾರ ಎಫ್.ಆರ್.ಪಿ(ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ) ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಸುಲಿಗೆ ಮಾಡುತ್ತಿದೆ. ಲಗಾಣಿ ಹೆಚ್ಚು ಪಡೆಯಲಾಗುತ್ತಿದೆ. ಕಬ್ಬು ಕಟಾವಾಗಿ 16 ತಿಂಗಳಾಗಿದೆ. ಸಾಗಾಣಿಕೆ ವೆಚ್ಚ ಎಲ್ಲ ದೂರಕ್ಕೂ ಒಂದೆ ದರ ನಿಗದಿ ಮಾಡಿ ರೈತರನ್ನು ವಂಚಿಸಲಾಗುತ್ತಿದೆ.

ಇದರಿಂದ ರೈತರಿಗೆ ನೂರಾರು ಕೋಟಿ ಮೋಸವಾಗುತ್ತಿದೆ. ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದ್ದರೂ ಯಾರೂ ಪಾಲನೆ ಮಾಡುತ್ತಿಲ್ಲ. ಯಾವ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ರೈತರು ದೂರು ನೀಡಿದರೆ ದೂರುಗಳು ಕಸದ ಬುಟ್ಟಿ ಸೇರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 189 ರೈತರು ಕಬ್ಬಿನ ಹಣ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆದು ಸಾಬಿತಾಗಿದರು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನುಡಿದರು.

ಶುಗರ್ ಮಾಫಿಯಾ ವಿರುದ್ಧ ಕಬ್ಬು ಬೆಳೆಗಾರರಿಂದ ಪೊರಕೆ ಚಳವಳಿ

ಕಬ್ಬು ಕಟಾವು ವಿಳಂಬ: ಕಬ್ಬು ಕಟಾವು 16 ರಿಂದ 18 ತಿಂಗಳು ವಿಳಂಬವಾಗುತ್ತಿದೆ. ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗಾಗಿ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು. ಸರ್ಕಾರ ಪದೇ ಪದೆ ಕಾರ್ಖಾನೆ ಮಾಲೀಕರ ಸಭೆ ಕರೆದು ತೇಪೆ ಹಾಕಬಾರದು. ಕಾನೂನುನಾತ್ಮಕ ಅಧಿಕಾರಿ ನೇಮಕ ಮಾಡಬೇಕಾಗಿದೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಹೆಚ್ಚುವರಿ ಬೆಲೆ ನಿಗದಿ ಮಾಡಲಾಗಿದೆ. ಹೀಗಾಗಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವ ವರೆಗೂ ಯಾವುದೇ ಕಾರಣಕ್ಕೂ ಚಳವಳಿ ಕೈ ಬಿಡುವುದಿಲ್ಲ, ಹುಸಿಬರವಸೆಗಳು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಲ್ ಸ್ಕೋರ್ ನೀತಿ ಕೈಬಿಡಿ: ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು. 5 ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ಚಳವಳಿ ನಡೆಸಿದಾಗ ಬ್ಯಾಂಕ್ ಮುಖ್ಯಸ್ಥರ ಸಭೆ ಕರೆಯುವ ಭರವಸೆ ನೀಡಲಾಗಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ರೈತನೂಬ್ಬ ಸಿಬಿಲ್ ಸ್ಕೋರ್ ಇಲ್ಲದ ಕಾರಣ ವಿಷ ಸೇವಿಸಿ ಸಾವನಪ್ಪಿದ್ದಾನೆ. ಇದಕ್ಕೆಲ್ಲ ಸರ್ಕಾರಗಳ ನಿರ್ಲಕ್ಷ್ಯವೆ ಕಾರಣವಾಗಿದೆ ಎಂದು ಹೇಳಿದರು.

ಸಾಗುವಳಿ ಪತ್ರ ನೀಡದೇ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಅನುಕೂಲ: ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಮತ್ತು ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಾತ್ರವನ್ನು ನೀಡದಿರುವ ಕಾರಣ ರಿಯಲ್ ಎಸ್ಟೇಟ್ ದಂಧೆ ನಡೆಸುವವರಿಗೆ ಅನುಕೂಲವಾಗುತ್ತಿದೆ.

ಕೆಲವರು ಗಣಕೀಕರಣವಾಗುವಾಗ, ವಾಮಮಾರ್ಗದ ಮೂಲಕ ದಾಖಲೆಗಳನ್ನು ಸೃಷ್ಟಿಸಿಕೊಂಡು ಈಗ ರೈತರನ್ನು ವಕ್ಕಲೆಬ್ಬಿಸುತ್ತಿದ್ದಾರೆ. ಸರ್ಕಾರ ತನಿಖೆ ನಡೆಸಿ ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರಿಗೆ ನ್ಯಾಯನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಇದನ್ನೂ ಓದಿ: ರೈತರ ಚಳವಳಿ ಒಳ್ಳೆಯದು, ಆದರೆ ಜನರಿಗೆ ತೊಂದರೆ ನೀಡಬೇಡಿ: ರಾಜಾ ವಾರಿಂಗ್

Last Updated : Nov 23, 2022, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.