ETV Bharat / state

'ನಾವೇನೂ ಸಣ್ಣ ಮಕ್ಕಳಲ್ಲ, ನಮ್ಮಿಬ್ಬರಿಗೂ ನಮ್ಮದೇ ಜವಾಬ್ದಾರಿಗಳಿವೆ'

ಕೊರೊನಾ‌ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾವೇನು ಸಣ್ಣ ಮಕ್ಕಳಲ್ಲ, ನಮ್ಮಿಬ್ಬರಿಗೂ ನಮ್ಮದೇ ಆದ ಜವಾಬ್ದಾರಿಗಳಿವೆ ಎಂದಿದ್ದಾರೆ.

_SUDHAKAR_TWEET
ಸಚಿವ ಸುಧಾಕರ್​​ ಟ್ವೀಟ್​
author img

By

Published : Apr 4, 2020, 9:40 AM IST

ಬೆಂಗಳೂರು : ನಾನು ಮತ್ತು ಶ್ರೀರಾಮುಲು ಅಣ್ಣ ತಮ್ಮಂದಿರ ಹಾಗಿದ್ದೇವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವೇನು ಸಣ್ಣ ಮಕ್ಕಳಲ್ಲ ಅಂತಾ ಸಚಿವ ಡಾ.ಕೆ ಸುಧಾಕರ್ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ನಿಯಂತ್ರಣ ಉಸ್ತುವಾರಿ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು,ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವಿನ ಆಂತರಿಕ ಕಲಹಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ನಿನ್ನೆ ತೆರೆ ಎಳೆದಿದ್ದಾರೆ. ಉಭಯ ಸಚಿವರ ನಡುವಿನ‌ ಸಂಧಾನ ಕಾರ್ಯ ಫಲಕೊಡದ ಹಿನ್ನೆಲೆ ಸಚಿವ ಸುರೇಶ್‌ಕುಮಾರ್ ಹೆಗಲಿಗೆ ಕೊರೊನಾ ಸಂಬಂಧದ ಮಾಹಿತಿಯನ್ನು ನೀಡುವ ಜವಾಬ್ದಾರಿ ವಹಿಸಿದ್ದಾರೆ.

_SUDHAKAR_TWEET
ಸಚಿವ ಸುಧಾಕರ್​​ ಟ್ವೀಟ್​

ಈ ಭಿನ್ನಾಭಿಪ್ರಾಯದ ಬಗ್ಗೆ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡುವ ಸಚಿವ ಸುಧಾಕರ್‌ ಅವರು, ನನ್ನ ಮತ್ತು ಶ್ರಿರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.. ಕೊರೊನಾ‌ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾವೇನು ಸಣ್ಣ ಮಕ್ಕಳಲ್ಲ, ನಮ್ಮಿಬ್ಬರಿಗೂ ನಮ್ಮದೇ ಆದ ಜವಾಬ್ದಾರಿಗಳಿವೆ ಎಂದಿದ್ದಾರೆ.

ಈ ಸುಳ್ಳು ಸುದ್ದಿ ಹಿಂದೆ ನೀಚ ರಾಜಕೀಯ ಷಡ್ಯಂತ್ರವಿದೆ ಅಂತಾ ಟ್ವೀಟ್ ಮೂಲಕ ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.