ETV Bharat / state

ಕೊರೊನಾ ಕುರಿತ ಜಾಗೃತಿ ದೃಶ್ಯ ರೂಪಕದಲ್ಲಿ ಕಿಚ್ಚ ಸುದೀಪ್​ ಇಲ್ಲ: ಸಚಿವ ಸುಧಾಕರ್​​ - ರಾಜ್ಯ ಸರ್ಕಾರ

ಸುದೀಪ್ ಪಾಲ್ಗೊಳ್ಳಲಿದ್ದಾರೆ ಎಂದು ಬಹಳಷ್ಟು ಒತ್ತಾಸೆ ಇಟ್ಟುಕೊಂಡಿದ್ದೆ. ಆದರೆ ಅವರು ಸಂಪರ್ಕಕ್ಕೆ ಸಿಗಲೇ ಇಲ್ಲ. ಹಲವು ಬಾರಿ ಪ್ರಯತ್ನ ನಡೆಸಿದೆ. ಅವರು ಫೋನ್​ಗೆ ಸಿಗಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದರು.

Sudeep is not participated in Corona awareness song
ಸುಧಾಕರ್
author img

By

Published : Jun 5, 2020, 8:08 PM IST

Updated : Jun 5, 2020, 8:40 PM IST

ಬೆಂಗಳೂರು: ರಾಜ್ಯ ಸರ್ಕಾರ ಹೊರ ತಂದಿರುವ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಹಾಡಿನಲ್ಲಿ ಕಿಚ್ಚ ಸುದೀಪ್​ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್

ದೃಶ್ಯ ರೂಪಕ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೃಶ್ಯ ರೂಪಕದಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ ಎಂದು ಬಹಳಷ್ಟು ಒತ್ತಾಸೆ ಇಟ್ಟುಕೊಂಡಿದ್ದೆ. ಆದರೆ ಅವರು ಸಂಪರ್ಕಕ್ಕೆ ಸಿಗಲೇ ಇಲ್ಲ. ಹಲವು ಬಾರಿ ಪ್ರಯತ್ನ ನಡೆಸಿದೆ. ಅವರು ಫೋನ್​ಗೆ ಸಿಗಲಿಲ್ಲ. ಅವರ ಮ್ಯಾನೇಜರ್​​ಗೂ ಸಂಪರ್ಕಿಸಿ ಮಾಹಿತಿ ನೀಡಿದ್ದೆ. ಆದರೂ ಅವರು ಯಾಕೆ ಬರಲಿಲ್ಲ ಎಂದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮಾಡಬಹುದು ಎನ್ನುವ ಆಶಯವಿದೆ ಎಂದರು.

ಸುದೀಪ್ ರೀತಿ ಬೇರೆ ಬೇರೆ ನಟರಿಗೂ ಖುದ್ದಾಗಿ ಕರೆ ಮಾಡಿದ್ದೆ. ಎಲ್ಲರೂ ಖುಷಿಯಿಂದ ಬಂದು ಭಾಗಿಯಾದರು. ರವಿಚಂದ್ರನ್, ಶಿವರಾಜ್ ಕುಮಾರ್, ಸುಮಲತಾ, ರಮೇಶ್ ಅರವಿಂದ್, ಉಪೇಂದ್ರ, ಪುನೀತ್ ರಾಜ್​ಕುಮಾರ್, ದರ್ಶನ್, ಯಶ್, ಗಣೇಶ್, ಧೃವ ಸರ್ಜಾ, ರವಿಶಂಕರ್, ರಕ್ಷಿತ್ ಶೆಟ್ಟಿ, ರಾಕ್​ಲೈನ್ ವೆಂಕಟೇಶ್​, ಅಭಿಷೇಕ್ ಅಂಬರೀಶ್, ಅದೇ ರೀತಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಪಂಕಜ್ ಅಡ್ವಾಣಿ ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳೂ ಪಾಲ್ಗೊಂಡಿದ್ದಾರೆ. ಜೊತೆಗೆ ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯರು, ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ‌ ಸಿದ್ದರಾಮಯ್ಯ ಸೇರಿ ಎಲ್ಲರೂ ಇದರಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

Last Updated : Jun 5, 2020, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.