ETV Bharat / state

ಕೊರೊನಾದ ನಡುವೆಯೂ ಯಶಸ್ವಿಯಾದ ಕೃಷಿ ಮೇಳ !

ಕಳೆದ  ಬಾರಿ ನಡೆದ ಕೃಷಿ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ವಿಕ್ಷಣೆ ಮಾಡಿದ್ದರು. ಆದರೂ ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಕೃಷಿ ಮೇಳವನ್ನು ಯಶಸ್ವಿಗೊಳಿಸಿದ್ದಾರೆ.

ಕೊರೊನಾದ ನಡುವೆಯೂ ಯಶಸ್ವಿಯಾದ ಕೃಷಿ ಮೇಳ
ಕೊರೊನಾದ ನಡುವೆಯೂ ಯಶಸ್ವಿಯಾದ ಕೃಷಿ ಮೇಳ
author img

By

Published : Nov 14, 2020, 2:23 AM IST

ಯಲಹಂಕ: ಕೊರೊನಾ ಹಿನ್ನಲೆ ಈ ವರ್ಷ ಸರಳ ಕೃಷಿಮೇಳವನ್ನ ಗಾಂಧಿ ವಿಜ್ಞಾನ ಕೃಷಿ ಕೇಂದ್ರದ (ಜಿಕೆವಿಕೆ)ಅವರಣದಲ್ಲಿ ಅಯೋಜನೆ ಮಾಡಲಾಗಿತ್ತು ನವೆಂಬರ್ 11ರಿಂದ ಶುರುವಾದ ಕೃಷಿ ಮೇಳ ನವೆಂಬರ್13 ಕ್ಕೆ ಮುಕ್ತಾಯವಾಗಿದೆ.

ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು, ಸಾಮಾಜಿಕ ಜಾಲತಾಣಗಳಲ್ಲಿ ಕೃಷಿ ಮೇಳ ವಿಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು, ಪ್ರತಿದಿನ ಒಂದು ಲಕ್ಷ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೃಷಿ ಮೇಳ ವೀಕ್ಷಣೆ ಮಾಡಿದ್ದಾರೆ.

ಕಳೆದ ಬಾರಿ ನಡೆದ ಕೃಷಿ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ವಿಕ್ಷಣೆ ಮಾಡಿದ್ದರು. ಆದರೆ, ಈ ಬಾರಿ ಕೊರೊನಾ ವೈರಸ್ ಕಾರಣಕ್ಕೆ ಕಡಿಮೆ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಸಾಮಾಜಿಕ ಅಂತರ ಹಾಗೂ ಕೊರೊನಾದ ಬಗ್ಗೆ ಎಚ್ಚರಿಕೆ ಮೂಡಿಸಲು ಮೇಳದ ಅವರಣದಲ್ಲಿ 200 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಲ್ಲದೆ, 10 ವರ್ಷದ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.

ಕೊರೊನಾದ ನಡುವೆಯೂ ಯಶಸ್ವಿಯಾದ ಕೃಷಿ ಮೇಳ

ಈ ಬಾರಿಯ ಕೃಷಿ ಮೇಳದ ವಿಶೇಷತೆ ಎಂದರೆ ಮೂರು ಹೊಸ ತಳಿಗಳಾದ ನೆಲಗಡಲೆ, ಅಲಸಂದೆ, ಮೇವಿನ ಅಲಸಂದೆ ಪ್ರಾತ್ಯಕ್ಷಿಕೆಗೆ ಇಡಲಾಗಿತ್ತು, ಇದರ ಜೊತೆಗೆ 17 ಕೃಷಿ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಿ ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷಿಕರಿಗೆ ಸನ್ಮಾನ ಮಾಡಲಾಯಿತು. ಪ್ರಮುಖ ವಿಷಯ ಎಂದರೆ ಈ ಬಾರಿ ಅಂಗೈಯಲ್ಲೇ ಕೃಷಿ ಮೇಳ ನೋಡುವ ಅವಕಾಶವನ್ನು ಕೂಡ ಮಾಡಿಕೊಡಲಾಗಿತ್ತು. ಸಾಮಾಜಿಕ ಜಾಲತಾಣಗಳಾದ ವೆಬ್ ಸೈಟ್, ಯೂಟೂಬ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಮ್, ವಾಟ್ಸಪ್​ಗಳ ಮೂಲಕ ಕೃಷಿ ಮೇಳ ವಿಕ್ಷಣೆಗೆ ಅವಕಾಶ ಮಾಡಲಾಗಿತ್ತು,

ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೃಷಿ ಮೇಳ ವಿಕ್ಷಣೆ ಮಾಡಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೂ ಜೂಮ್ ಮಿಟಿಂಗ್ ಮೂಲಕ ರೈತರಿಗೆ ಪ್ರಶ್ನೆ ಕೇಳುವ ಅವಕಾಶ ನೀಡಲಾಗಿದ್ದು. ಸುಮಾರು 1200 ಕ್ಕೂ ಹೆಚ್ಚು ರೈತರು ಪ್ರಶ್ನೆ ಕೇಳಿದ್ದು, ಈ ಪ್ರಶ್ನೆಗಳಿಗೆ 25 ಕೃಷಿ ವಿಜ್ಞಾನಿಗಳು ಉತ್ತರ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.