ETV Bharat / state

ಬೆಂಗಳೂರು ವಿವಿಗೆ ಭೇಟಿ ನೀಡಿದ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ನಿಯೋಗ...

ಬರ್ಮಿಂಗ್‌ಹ್ಯಾಮ್ ವಿವಿ ನಿಯೋಗ ಬೆಂಗಳೂರಿನ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಪರಿಶೀಲಿಸಲಿದೆ. ಜುಲೈ 7 ರಂದು ಮಧ್ಯಾಹ್ನ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿಯೋಗದೊಂದಿಗೆ ಕಂಪನಿ ಪ್ರತಿನಿಧಿಗಳ ಸಮಾಲೋಚನೆ ಏರ್ಪಡಿಸಲಾಗಿದೆ ಎಂದು ಪ್ರೊ. ಲಿಂಗರಾಜ ಗಾಂಧಿ ಮಾಹಿತಿ ನೀಡಿದ್ದಾರೆ.

Birmingham University delegation visited Bangalore University
ಬೆಂಗಳೂರು ವಿವಿಗೆ ಭೇಟಿ ನೀಡಿದ ಬರ್ಮಿಂಗ್‌ಹ್ಯಾಮ್ ವಿವಿ ನಿಯೋಗ
author img

By

Published : Jul 1, 2023, 9:15 PM IST

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವಿದೇಶಿ ಸಹಭಾಗಿತ್ವದ ಭಾಗವಾಗಿ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ನಗರ ವಿಶ್ವವಿದ್ಯಾನಿಲಯದ ನಿಯೋಗವು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ವಲಯ ಯೋಜನೆಯಡಿ ಒಂದು ವಾರದ ಅಧ್ಯಯನಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ. ಶನಿವಾರ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಲಿಂಗರಾಜ ಗಾಂಧಿಯವರು ಬರ್ಮಿಂಗ್‌ಹ್ಯಾಮ್ ನಗರ ವಿಶ್ವವಿದ್ಯಾಲಯ ನಿಯೋಗದ ಸದಸ್ಯರಾದ ಡಾ.ಶಾಂಕ್ ಮತ್ತು ಡಾ. ಅಲೆಕ್ಸ್ ಡೆ ರೈಟರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬ್ರಿಟಿಷ್ ಕೌನ್ಸಿಲ್‌ನೊಂದಿಗೆ ಹಮ್ಮಿಕೊಂಡಿರುವ ಸಂಶೋಧನಾ ವಿನಿಮಯ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸೇರಿದಂತೆ ಕರ್ನಾಟಕದ ಐದು ವಿಶ್ವವಿದ್ಯಾನಿಲಯಗಳು ಭಾಗವಹಿಸಲಿವೆ.

ನಿಯೋಗದೊಂದಿಗೆ ಕಂಪನಿ ಪ್ರತಿನಿಧಿಗಳ ಸಮಾಲೋಚನೆ: ಬರ್ಮಿಂಗ್‌ಹ್ಯಾಮ್ , ನಗರ ವಿಶ್ವವಿದ್ಯಾನಿಲಯದ ನಿಯೋಗದ ಬೆಂಗಳೂರಿನ ವಿವಿಧ ಕೈಗಾರಿಕೆಗಳಿಗೆ ಭೇಟಿ ಮಾಡಿ. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಪರಿಶೀಲಿಸಲಿದೆ. ಪ್ರವಾಸ ಕಾರ್ಯಕ್ರಮದ ಕೊನೆಯ ದಿನವಾದ ಜುಲೈ 7 ರಂದು ಮಧ್ಯಾಹ್ನ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿಯೋಗದೊಂದಿಗೆ ಕಂಪನಿ ಪ್ರತಿನಿಧಿಗಳ ಸಮಾಲೋಚನೆ ಏರ್ಪಡಿಸಲಾಗಿದೆ ಎಂದು ಪ್ರೊ. ಲಿಂಗರಾಜ ಗಾಂಧಿ ವಿವರಿಸಿದರು.

ಇದನ್ನೂ ಓದಿ :ಪುನರ್​​ಜನಿ ಯೋಜನೆಗೆ ವಿದೇಶಿ ದೇಣಿಗೆ ಪಡೆದ ಆರೋಪ : ಕೇರಳ ವಿರೋಧ ಪಕ್ಷದ ನಾಯಕನ ವಿರುದ್ಧ ಇಡಿ ಪ್ರಾಥಮಿಕ ತನಿಖೆ

ಕೈಗಾರಿಕಾ ವಲಯದ ಪ್ರತಿನಿಧಿಗಳಾದ ಡಾ. ಶ್ರೀಧರ್, ರಾಜಪ್ಪನವರ್ ಮತ್ತು ಡಾ. ಹರಿಹರನ್ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕುಲಸಚಿವರು (ಮೌಲ್ಯಮಾಪನ) ಪ್ರೊ. ವಿ ಲೋಕೇಶ, ವಿತ್ತಾಧಿಕಾರಿ ಜಿ. ಪಿ ರಘು ಹಾಗೂ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯೋಜನಾ ಮಂಡಲಿ ಸದಸ್ಯ ಕಾರ್ಯದರ್ಶಿ ಡಾ. ರಿತಿಕಾ ಸಿದ್ದಾ ಪ್ರಾಸ್ತವಿಕವಾಗಿ ಮಾತನಾಡಿದರು. ಯೋಜನಾ ಸಮನ್ವಯಾಧಿಕಾರಿ ಡಾ. ತಂಡದ ಗೌಡ ವಂದನಾರ್ಪಣೆ ಮಾಡಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಲಿಂಗರಾಜ ಗಾಂಧಿ ಅವರು ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ ನಗರ ವಿಶ್ವವಿದ್ಯಾನಿಲಯ ಸೇರಿದಂತೆ ಬ್ರಿಟನ್‌ನ ಆರು ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿದ್ದರು. ಸಂಶೋಧನಾ ಸಹಭಾಗಿತ್ವದ ಭಾಗವಾಗಿ, ಸುಸ್ಥಿರ ಸ್ಮಾರ್ಟ್ ಸಿಟಿಗಳು ವಿಷಯದ ಕುರಿತು ವಿಚಾರ ವಿನಿಮಯಕ್ಕಾಗಿ ಕುಲಪತಿ ಅವರನ್ನು ವೊಲ್ವರ್ ಹ್ಯಾಪಟನ್ ವಿಶ್ವವಿದ್ಯಾನಿಲಯ ವಿಸಿಟಿಂಗ್ ರಿಸರ್ಚ್ ಸ್ಕಾಲರ್ ಯೋಜನೆಯಡಿ ಇದೇ ತಿಂಗಳು ಒಂದು ವಾರ ಕಾಲದ ಭೇಟಿಗಾಗಿ ಆಮಂತ್ರಿಸಿದೆ.

ವಿದೇಶಿ ನಿಯೋಗ ಭೇಟಿ ನೀಡುವ ಕಂಪನಿಗಳು: ಶಾರಿಗೆ ಲೈಫ್ ಹಾರ್ಡ್ ಮೆಟಲ್ಸ್, ಎಸ್‌ಎಲ್‌ವಿ ಸಿಸ್ಟಮ್ಸ್, ಎಸ್‌ಎಲ್‌ ಎ ಇಂಜಿನಿಯರಿಂಗ್‌, ಯುನೈಟೆಡ್ ಪ್ರಿನ್ಸ್, ಎಸ್‌.ಆರ್.ಎಸ್ ಟೂಲ್ಸ್, ವೋಲ್ವೊ ಎಕ್ವಿಪ್‌ಮೆಂಟ್ ಮ್ಯಾನ್ಯುವಾಕ್ಚರಿಂಗ್, ಟೊಯೊಟಾ, ಓಲಾ ಎಲೆಕ್ಟ್ರಿಕ್, ವೋಲ್ವೊ ಕಾರ್ ಮ್ಯಾನುಫ್ಯಾಕ್ಚರಿಂಗ್, ಓಜುಸ್ ಪವರ್, ಅಲ್ಟ್ರಾವೈಲೆಟ್ ಹೀಗೆ ವಿವಿಧ ಕಂಪನಿಗಳಿಗೆ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ನಗರ ವಿಶ್ವವಿದ್ಯಾನಿಲಯದ ನಿಯೋಗ ಭೇಟಿ ನೀಡಿ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಪರಿಶೀಲಿಸಲಿದೆ.

ಇದನ್ನೂ ಓದಿ: ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ:16 ಚಿನ್ನ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.