ETV Bharat / state

ರಿಸಲ್ಟ್​ ರಿಜೆಕ್ಟ್ ಮಾಡಿ ಮತ್ತೆ ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿಗಳು - ಮತ್ತೆ ಪಿಯುಸಿ ಎಕ್ಸಾಂ ಬರೆಯಲು ಮುಂದಾದ ವಿದ್ಯಾರ್ಥಿಗಳು

ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಒಟ್ಟು 6,66,497 ವಿದ್ಯಾರ್ಥಿಗಳು ಪಾಸ್ ಔಟ್ ಆಗಿದ್ದರು. ಇದರಲ್ಲಿ ಕೆಲವು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.‌ ಒಳ್ಳೆಯ ಪರ್ಸೆಂಟೇಜ್ ಬಂದಿದ್ದರೂ, ನಮಗೆ ಇನ್ನೂ ಜಾಸ್ತಿ ಅಂಕಗಳು ಬರಬೇಕಿತ್ತು. ಕೊರೊನಾ ಇದ್ದರೂ ಚೆನ್ನಾಗಿ ಓದಿದ್ದೆವು. ಹೀಗಾಗಿ ಶೇ.90ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆ ಇದೆ ಅಂತಾರೆ ವಿದ್ಯಾರ್ಥಿಗಳು.

ಮತ್ತೆ ಪಿಯುಸಿ ಎಕ್ಸಾಂ ಬರೆಯಲು ಮುಂದಾದ ವಿದ್ಯಾರ್ಥಿಗಳು

author img

By

Published : Aug 3, 2021, 1:27 PM IST

Updated : Aug 3, 2021, 1:51 PM IST

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ ಕಾರಣಕ್ಕೆ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲರನ್ನೂ ತೇರ್ಗಡೆಗೊಳಿಸಲಾಗಿದೆ. ಎಸ್ಎಸ್ಎಲ್​​​ಸಿ ಅಂಕ ಹಾಗೂ ಪ್ರಥಮ ಪಿಯುಸಿ ಅಂಕ, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಮೇರೆಗೆ ಅಂಕಗಳನ್ನು ಸೇರಿಸಿ ಫಲಿತಾಂಶ ಪ್ರಕಟಿಸಲಾಗಿತ್ತು. ಹಾಗೆಯೇ ಈ ಫಲಿತಾಂಶ ತೃಪ್ತಿಕರವಾಗಿಲ್ಲದೇ ಹೋದರೆ, ಅಂತಹವರಿಗೆ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸುವುದಾಗಿ ಪಿಯು ಬೋರ್ಡ್ ಹೇಳಿತ್ತು.

ಈ ವರ್ಷ ಒಟ್ಟು 6,66,497 ವಿದ್ಯಾರ್ಥಿಗಳು ಪಾಸ್ ಔಟ್ ಆಗಿದ್ದು, ಇದರಲ್ಲಿ ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.‌ ಒಳ್ಳೆಯ ಪರ್ಸೆಂಟೇಜ್ ಬಂದಿದ್ದರೂ, ನಮಗೆ ಇನ್ನೂ ಜಾಸ್ತಿ ಅಂಕಗಳು ಬರಬೇಕಿತ್ತು. ಕೊರೊನಾ ಇದ್ದರೂ ಚೆನ್ನಾಗಿ ಓದಿದ್ದೆವು, ಹೀಗಾಗಿ ಶೇ.90ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆ ಇದೆ ಅಂತಾರೆ ವಿದ್ಯಾರ್ಥಿಗಳು. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ರಿಸಲ್ಟ್​ ರಿಜೆಕ್ಟ್ ಇಲ್ಲದೇ ಇದ್ದರೂ ಫ್ರೆಶರ್ಸ್ ಹಾಗೂ ರಿಪಿಟರ್ಸ್ ಸೇರಿ 965 ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ನೋಂದಣಿ ಮಾಡಿಕೊಂಡಿದ್ದಾರೆ.

ಮತ್ತೆ ಪಿಯುಸಿ ಎಕ್ಸಾಂ ಬರೆಯಲು ಮುಂದಾದ ವಿದ್ಯಾರ್ಥಿಗಳು

ಕೊಟ್ಟೂರು ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಫಲಿತಾಂಶ ತಿರಸ್ಕಾರ: ರಾಜ್ಯದಲ್ಲಿಯೇ ಒಂದೇ ಕಾಲೇಜಿನಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ತಿರಸ್ಕಾರ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ತೃಪ್ತಿಯಿಲ್ಲ, ಪರೀಕ್ಷೆ ಬರೆಯುತ್ತೇವೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಇಂದು ಪಿಯು ಕಾಲೇಜಿನ ಪ್ರಾಂಶುಪಾಲ ವೀರಭದ್ರಯ್ಯ, ನಮ್ಮ ಕಾಲೇಜಿನಿಂದ 104ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ಪ್ರತಿ ವರ್ಷ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದುಕೊಳ್ಳುತ್ತಿದ್ದರು.‌ 600ಕ್ಕೆ 600 ಅಂಕಗಳನ್ನು ನಮ್ಮ ಕಾಲೇಜಿನ ಹೆಚ್ಚಿನ‌ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದರು. ಆದರೆ ಈ ಸಲದ ಫಲಿತಾಂಶ ನಿರಾಸೆಯಾಗಿದೆ. ಶೇ.94ರಷ್ಟು ಅಂಕ ಬಂದಿರುವ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕಾರ ಮಾಡಿದ್ದು, ಕಲಾ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ಕಾಲೇಜು ಬರುತ್ತಿತ್ತು.‌ ಹೀಗಾಗಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದವಾಗಿದ್ದಾರೆ ಎಂದು ಹೇಳಿದರು.

ಪರೀಕ್ಷೆಗೆ ನೋಂದಣಿ ಮಾಡಿರುವ ವಿದ್ಯಾರ್ಥಿನಿ ಭವಾನಿ ಮಾತನಾಡಿ, ಕೊರೊನಾ ಕಾರಣಕ್ಕೆ ಈ ಬಾರಿ ಪರೀಕ್ಷೆ ನಡೆಸದೇ ಎಸ್ಎಸ್ಎಲ್​ಸಿ ಪಿಯುಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಿದ್ದಾರೆ. ನನಗೆ ಶೇ. 92 ಫಲಿತಾಂಶ ಬಂದಿದ್ದು, ಇದು ತೃಪ್ತಿ ತಂದಿಲ್ಲ. ಇದಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇದೆ. ಹೀಗಾಗಿ ಪರೀಕ್ಷೆ ಬರೆಯುತ್ತೇನೆ ಎಂದರು.

ಮತ್ತೊಬ್ಬ ವಿದ್ಯಾರ್ಥಿನಿ ಪೂಜಾ ಮಾತನಾಡಿ, ಕೊರೊನಾ ಇದ್ದರೂ, ಕಾಲೇಜಿನಲ್ಲಿ ನೀಡುತ್ತಿದ್ದ ಎಲ್ಲ ಟೆಸ್ಟ್ ಗಳನ್ನ ಚೆನ್ನಾಗಿ ಮಾಡಿದ್ದೇನೆ. ಮನೆಯಲ್ಲಿ ಆರ್ಥಿಕವಾಗಿ ಕಷ್ಟ ಇದ್ದು, ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಿ ಪಾಸ್ ಆಗಬೇಕೆಂಬ ನಿರೀಕ್ಷೆ ಇತ್ತು. ಆದರೆ ಇಲಾಖೆ ನೀಡಿರುವ ಫಲಿತಾಂಶ ಅಂದುಕೊಂಡಷ್ಟು ಬರದೇ ಇರೋದಕ್ಕೆ ಇದೀಗ ಪರೀಕ್ಷೆ ಬರೆಯಲು ತಯಾರಿ ನಡೆಸಿರುವುದಾಗಿ ತಿಳಿಸಿದರು. ‌

ಇದನ್ನೂ ಓದಿ: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್‌ ಹೀಗೆ ನೋಡಿ..

ಎಕ್ಸಾಂ ಬರೆದ್ಮೇಲೆ ಹಳೇ ಅಂಕನೇ ಬೇಕು ಅನ್ನುವಂತಿಲ್ಲ: ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಬಂದರೂ, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಇಲಾಖೆ ಕೊಟ್ಟಿರುವ ಫಲಿತಾಂಶ ತೃಪ್ತಿಕೊಡದ ಕಾರಣಕ್ಕೆ ಈ ತೀರ್ಮಾನ ಮಾಡಿರುವವರಿಗೆ ಆಗಸ್ಟ್ 19 ರಿಂದ ಸೆಪ್ಟೆಂಬರ್ 3 ರ ತನಕ ಪರೀಕ್ಷೆ ನಡೆಯಲಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲಾಖೆಯು ಖಡಕ್ ಸೂಚನೆ ನೀಡಿದ್ದು, ಪರೀಕ್ಷೆಯಲ್ಲಿ ಬಂದ ಅಂಕಗಳೇ ಅಂತಿಮವಾಗಿ ಇರಲಿದೆ. ಈ ಪರೀಕ್ಷೆಯಲ್ಲಿ ಫೇಲ್ ಆದರೆ ಅಥವಾ ಕಡಿಮೆ ಅಂಕ ಬಂದರೆ, ನಾವು ನೀಡಿರುವ ಹಳೇ ಅಂಕವನ್ನ ನೀಡುವುದಿಲ್ಲ ಅಂತ ಸೂಚಿಸಿದೆ.

ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಪರೀಕ್ಷೆಯನ್ನು ಎದುರಿಸುತ್ತಿದ್ದು, ಬಳ್ಳಾರಿ ಒಂದರಲ್ಲೇ 297 ವಿದ್ಯಾರ್ಥಿಗಳು ಫಲಿತಾಂಶ ರಿಜೆಕ್ಟ್ ಮಾಡಿದ್ದಾರೆ.‌ ಚಾಮರಾಜನಗರದಲ್ಲಿ ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿದ್ದಾ‌ನೆ. ‌

Last Updated : Aug 3, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.