ETV Bharat / state

ಸರ್ಕಾರದ ಜೊತೆ ಕೈ ಜೋಡಿಸಿದ ವಿದ್ಯಾರ್ಥಿನಿ: ಒಂದು ಲಕ್ಷ ದೇಣಿಕೆ ನೀಡಿದ ಬಾಲಕಿ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಇಂದು ಸಿಎಂ ಯಡಿಯೂರಪ್ಪನವರು ಕೊರೊನಾ ಸಂಬಂಧ ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸುತ್ತಿದ್ದು, ಈ ನಡುವೆ ಬಿಎಂಐಸಿಟಿ ಕಾಲೇಜಿನಿ ವಿದ್ಯಾರ್ಥಿನಿಯೋರ್ವಳು ಸರ್ಕಾರದೊಂದಿಗೆ ಕೈ ಜೋಡಿಸಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾಳೆ.

Student donated Rs 1 lakh to the Chief Minister's Relief Fund
ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂ ದೇಣಿಗೆ ನೀಡಿದ ವಿದ್ಯಾರ್ಥಿನಿ
author img

By

Published : Mar 23, 2020, 12:37 PM IST

Updated : Mar 23, 2020, 1:14 PM IST

ಬೆಂಗಳೂರು: ಕೊರೊನಾ ಸಂಬಂಧ ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಿಎಂ ಬಿ.ಎಸ್ .ಯಡಿಯೂರಪ್ಪ ಇಂದು ಮಹತ್ವದ ಸಭೆ ನಡೆಸುತ್ತಿದ್ದು, ಈ ವೇಳೆ ಬಿಎಂಐಸಿಟಿ ಕಾಲೇಜಿನಿ ವಿದ್ಯಾರ್ಥಿನಿಯೋರ್ವಳು ಸರ್ಕಾರದ ಜೊತೆ ಕೈ ಜೋಡಿಸಿದ್ಧಾಳೆ. ಒಂದು ಲಕ್ಷ ರೂಗಳು ಮೂಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.

ಬಿಎಂಐಸಿಟಿ ಕಾಲೇಜಿನಿ ವಿದ್ಯಾರ್ಥಿನಿ

ವಿಧಾನಸೌಧದಲ್ಲಿ ಸಭೆ ಆರಂಭವಾಗಿದ್ದು, 15ರಿಂದ 20 ಖಾಸಗಿ ಆಸ್ಪತ್ರೆ ಮುಖ್ಯಸ್ಥರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್ಚುವರಿ ವೆಂಟಿಲೇಟರ್, ಐಸೊಲೇಶನ್ ವಾರ್ಡ್ ಸೇರಿದಂತೆ ಇನ್ನುಳಿದ ವ್ಯವಸ್ಥೆಗಳಿಗೆ ಖಾಸಗಿ ಆಸ್ಪತ್ರೆಗಳ ಜೊತೆಗೆ ಸರ್ಕಾರ ಸೇರಿ ಕೆಲಸ ಮಾಡುವ ಸಂಬಂಧ ಇಲ್ಲಿ ಚರ್ಚೆ ನಡೆಯುತ್ತಿದೆ. ಕೊರೊನಾ ಸಂಬಂಧ ಇಂದು ಮಹತ್ವದ ತೀರ್ಮಾನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.

1 ಲಕ್ಷ ದೇಣಿಗೆ ನೀಡಿದ ವಿದ್ಯಾರ್ಥಿನಿ:

ಈ ವೇಳೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಬಿಎಂಐಸಿಟಿ ಕಾಲೇಜಿನಿ ವಿದ್ಯಾರ್ಥಿನಿ ಅಮೂಲ್ಯ ಎಂಬಾಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ, ದೇಶದಲ್ಲಿ ಎಲರಲ್ಲೂ ಒಂದು ಜವಾಬ್ದಾರಿ ಇರಬೇಕು. ಎಲ್ಲಾ ಸರಕಾರವೇ ಮಾಡಬೇಕು ಅನ್ನೋದಕ್ಕೆ ಆಗಲ್ಲ. ಜನರು ಸಪೋರ್ಟ್ ಮಾಡಿದ್ರೆ ಸಹಕಾರಿ ಆಗುತ್ತದೆ. ಭಾರತದ ಎಲ್ಲಾ ಪ್ರಜೆಗಳು ಜಾಗೃತರಾಗಬೇಕೆಂದು ವಿನಂತಿ ಮಾಡಿಕೊಂಡರು.

ಸಭೆಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆ ಅಧ್ಯಕ್ಷ ಡಾ ನರೇಶ್ ಶೆಟ್ಟಿ, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ ಸುದರ್ಶನ ಬಲ್ಲಾಳ್, ನಾರಾಯಣ ಹೆಲ್ತ್ ಆಸ್ಪತ್ರೆ ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ, ಫೋರ್ಟಿಸ್ ಆಸ್ಪತ್ರೆ ವಿಭಾಗಿಯ ನಿರ್ದೇಶಕ ಡಾ. ಮನೀಶ್ ಮಟ್ಟು, ಎಚ್ ಸಿ ಜಿ ಆಸ್ಪತ್ರೆ ಡಾ .ವಿಶಾಲ್ ರಾವ್ ಸಭೆಯಲ್ಲಿ ಉಪಸ್ಥಿತರಿದ್ದರು.

Last Updated : Mar 23, 2020, 1:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.