ETV Bharat / state

ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ - ಬೆಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಅನುತ್ತೀರ್ಣನಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

student-committed-suicide-in-bengaluru
ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
author img

By

Published : Jul 6, 2023, 7:06 PM IST

Updated : Jul 6, 2023, 8:32 PM IST

ಮೃತ ವಿದ್ಯಾರ್ಥಿಯ ಸಹೋದರ ಶರ್ಮಾ

ಬೆಂಗಳೂರು : ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ. ಚಾರ್ಲಿ(17) ಆತ್ಮಹತ್ಯೆಗೆ ಶರಣಾದ ಯುವಕ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಾರ್ಲಿಗೆ ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಓದಿ ಕೆಲಸ ಹುಡುಕುತ್ತಿದ್ದ ಅಣ್ಣ, ವಿಕಲಚೇತನ ಅಪ್ಪ. ತುಂಬಾ ಕಷ್ಟದಿಂದ ಕುಟುಂಬ ಸಾಗುತ್ತಿತ್ತು. ಈ ಹಿನ್ನಲೆ ಚೆನ್ನಾಗಿ ಓದಿ ತನ್ನ ಕುಟುಂಬ ಸಾಕಬೇಕು ಎಂದು ಚಾರ್ಲಿ ಕನಸು ಕಂಡಿದ್ದ. ಆದರೆ ಅದೇನೋ ಗೊತ್ತಿಲ್ಲ ಓದೋ ಆಸೆ ಬೆಟ್ಟದಷ್ಟಿದ್ದರೂ ಚಾರ್ಲಿ ತಲೆಗೆ ಓದೇ ಹತ್ತಲಿಲ್ಲ.

ಹತ್ತನೇ ತರಗತಿ ಪಾಸಾಗಿ ತನ್ನ ಇಷ್ಟದ ಖಾಸಗಿ ಕಾಲೇಜಿಗೆ ಚಾರ್ಲಿ ಸೇರಿದ್ದ. ಆದರೆ ಓದು ತಲೆಗೆ ಹತ್ತದೇ ಆರು ತಿಂಗಳ ಹಿಂದೆ ಮೊದಲ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಇದರಿಂದ ನೊಂದಿದ್ದ ಚಾರ್ಲಿಯನ್ನು ಅಪ್ಪ ಮತ್ತು ಅಣ್ಣ ಧೈರ್ಯ ತುಂಬಿ ಟ್ಯೂಷನ್​ಗೆ ಕಳುಹಿಸಿದ್ದರು. ಬಳಿಕ ಇತ್ತೀಚೆಗೆ ಮತ್ತೊಮ್ಮೆ ಸಪ್ಲಿಮೆಂಟ್ರಿ ಪರೀಕ್ಷೆ ಬರೆದಾಗಲೂ ಚಾರ್ಲಿ ಫೇಲ್ ಆಗಿದ್ದಾನೆ. ನಂತರ ತಾನು ಓದುತ್ತಿದ್ದ ಕಾಲೇಜಿನವರು ಬೇರೆ ಕಾಲೇಜಿಗೆ ಹೋಗಿ ಎಂದು ಟಿಸಿ ಕೊಡಲು ಮುಂದಾಗಿದ್ದಾರೆ. ಇಷ್ಟವಾದ ಕಾಲೇಜಲ್ಲಿ ಓದೋಕೆ ಆಗ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತನ ಸಹೋದರ ಶರ್ಮಾ, ನಿನ್ನೆ ರಾತ್ರಿ 10 ಗಂಟೆಗೆ ಮನೆಗೆ ಬಂದಿದ್ದ ಚಾರ್ಲಿ, ರೂಮ್ ಗೆ ಹೋಗಿ ಡ್ರೆಸ್ ಮಾಡಿಕೊಂಡು ಬರುವೆ ಎಂದು ಕದ ಹಾಕಿಕೊಂಡಿದ್ದಾನೆ. ಕೆಲ ಸಮಯದ ಬಳಿಕ ತಂದೆ ಬಾಗಿಲು ತೆಗೆಯುವಂತೆ ಹೇಳಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಮನೆಯವರು ಹೇಳಿದ್ದಾರೆ.

ಉಳ್ಳಾಲದಲ್ಲಿ ಯುವತಿ ನೇಣು ಬಿಗಿದು ಆತ್ಮಹತ್ಯೆ : ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಪ್ರೀತಿಕಾ ಪೂಜಾರಿ(21) ಎಂದು ಗುರುತಿಸಲಾಗಿದೆ.

ಮೃತ ಪ್ರೀತಿಕಾ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಮಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಪ್ರೀತಿಕಾ ಉದ್ಯೋಗ ಮಾಡುತ್ತಿದ್ದಳು. ಆದರೆ ಇಂದು ಮಧ್ಯಾಹ್ನ ಕೆಲಸದಿಂದ ವಾಪಸ್ಸಾಗಿದ್ದ ಪ್ರೀತಿಕಾ 12.30ರ ವೇಳೆಗೆ ಮನೆಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕೊಣಾಜೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದಲ್ಲಿ ನಡೆದಿತ್ತು. ಕುರಿಕೋಟಾ ಗ್ರಾಮದ ಪ್ರಶಾಂತ ಅಷ್ಟಗಿ (16) ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿ. ಕೆಲ ಯುವಕರು ವಿನಾಕಾರಣ ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದ ಎಂದು ತಿಳಿದುಬಂದಿತ್ತು.

ಮೃತ ಪ್ರಶಾಂತ್​ ಅವರಾದ (ಬಿ) ಪ್ರೌಢ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ. 'ಕುರಿಕೋಟಾ ಗ್ರಾಮದ ಯುವಕರು ಹಾಗೂ ಕಲಬುರಗಿಯ ಕೆಲ ಯುವಕರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಪ್ರಶಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿತರ ವಿರುದ್ಧ ಕ್ರಮ‌ ಕೈಗೊಳ್ಳಬೇಕು' ಎಂದು ಮಹಾಗಾಂವ ಪೊಲೀಸ್​​ ಠಾಣೆಯಲ್ಲಿ ಮೃತ ಬಾಲಕನ ತಂದೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ : Student suicide: ನೀಟ್​ ಪರೀಕ್ಷೆಯಲ್ಲಿ 2ನೇ ಬಾರಿಗೆ ಫೇಲ್; ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Last Updated : Jul 6, 2023, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.