ಬೆಂಗಳೂರು : ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ವಾ??? ಇಂತಹದೊಂದು ಪ್ರಶ್ನೆ ಎದುರಾಗಲು ಕಾರಣ, ನಗರದ ಖಾಸಗಿ ಶಾಲೆಯ ವರ್ತನೆ...
ಇಲ್ಲಿ ಕನ್ನಡ ಮಾತಾಡೋ ಹಾಗಿಲ್ಲ, ಒಂದು ವೇಳೆ ಮಾತಾಡಿದರೆ, ದಂಡ ಹಾಕಲಾಗುತ್ತೆ. ಮೊದಲ ಸಲ ಕನ್ನಡ ಮಾತಾಡಿದರೆ 50 ರೂಪಾಯಿ, ಎರಡನೇ ಬಾರಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಹೊರಮಾವು ಬಳಿಯ ಚನ್ನಸಂದ್ರದಲ್ಲಿರುವ ಎಸ್ಎಲ್ಎಸ್ ಇಂಟರ್ ನ್ಯಾಷನಲ್ ಗುರುಕುಲ ಶಾಲೆಯ ವಿರುದ್ಧ ಆರೋಪ ಕೇಳಿ ಬಂದಿದೆ.
ಇಂಥ ರೂಲ್ಸ್ನಿಂದ ಬೇಸತ್ತ ಪೋಷಕರೊಬ್ಬರು ಶಾಲಾ ಆಢಳಿತ ಮಂಡಳಿ ವಿರುದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಂಡಳಿಗೆ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಂಡ ಸಮೇತ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಹರೀಶ್ ಕುಮಾರ್, ನಮ್ಮ ಸಂಸ್ಥೆಯಲ್ಲಿ ತೆಲುಗು, ತಮಿಳು ಮತ್ತು ಮರಾಠಿ ಭಾಷೆ ಮಾತನಾಡುವ ವಿದ್ಯಾರ್ಥಿಗಳಿದ್ದಾರೆ. ಇವರಿಂದ ನಮ್ಮ ರಾಜ್ಯದ ಮಕ್ಕಳಿಗೆ ತೊಂದರೆಯಾಗುತಿತ್ತು. ಆದ್ದರಿಂದ ಅನ್ಯ ಭಾಷೆಯ ಮಕ್ಕಳಿಗೆ ಇಂಗ್ಲೀಷ್ನಲ್ಲಿ ಮಾತನಾಡುವಂತೆ ಹೇಳಲಾಗಿತ್ತು ಹಾಗೂ ಈ ಕುರಿತು ತರಗತಿ ಶಿಕ್ಷಕರಿಗೆ ಲಿಖಿತವಾಗಿ ತಿಳಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ...