ಬೆಂಗಳೂರು: ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಮತ್ತು ಪಾರ್ಟಿಗೆ ಹೋಗೋಣವೆಂದು ಯುವತಿಗೆ ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಮಾರತ್ತಹಳ್ಳಿಯ ಖಾಸಗಿ ಕಾಲೇಜಿನ ದೈಹಿಕಶಿಕ್ಷಕ ಜಾನ್ಯು ಯುವತಿಯೋರ್ವಳಿಗೆ ಹೊಸ ವರ್ಷಾಚರಣೆಗೆ ಶಾಪಿಂಗ್, ಪಬ್ ಬಾರ್ಗೆ ಜೊತೆಯಲ್ಲಿ ಪಾರ್ಟಿಗೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ನೊಂದ ಯುವತಿ ಎಷ್ಟೇ ಬಾರಿ ಬರಲ್ಲ ಎಂದರೂ ಹಿಂಸೆ ನೀಡುತ್ತಿದ್ದನಂತೆ. ಈ ವಿಷಯ ತಿಳಿದ ಯುವತಿ ಮತ್ತು ಆಕೆಯ ಸ್ನೇಹಿತರು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.