ಯಲಹಂಕ: ಕೊರೊನಾ ನಿಯಂತ್ರಣಕ್ಕಾಗಿ ದೇಶದ್ಯಾಂತ ಲಾಕ್ ಡೌನ್ ಜಾರಿಮಾಡಿ ಜನರ ಓಡಾಡಕಕ್ಕೆ ಬ್ರೇಕ್ ಹಾಕಲಾಗಿದೆ.
ಆದರೆ ಬೆಂಗಳೂರು ನಗರದ ಸನಿಹವೇ ಇರುವ ಯಲಹಂಕದ ಬೈರಾಪುರ ಗ್ರಾಮದಲ್ಲಿ ಎರಡು ವಾರದ ಹಿಂದೆ ಅಪರಿಚಿತ 40 ಜನರ ಗುಂಪು ಬಂದಿದ್ದು, ಅಲ್ಲಿನ ಮಸೀದಿಯಲ್ಲಿ ತಂಗಿದ್ದರು. ಕೊಲ್ಕತಾದಿಂದ ಬಂದಿದ್ದೇವೆಂದು ಓಡಾಡುತ್ತಿದ್ಧ ಮುಸ್ಲಿಂ ಜನರನ್ನ ಕಂಡು ಭಯಗೊಂಡ ಭೈರಾಪುರ ಗ್ರಾಮಸ್ಥರು ಅವರನ್ನು ಅಲ್ಲಿಂದ ಓಡಿಸಿದ್ದಾರೆ. ಅವರು ಯಲಹಂಕದ ಸುತ್ತಮುತ್ತ ಅಲೆದಾಡುತ್ತಿದ್ದು ಆತಂಕ ಉಂಟು ಮಾಡಿದೆ.
ಇದೀಗ ರೆಸಾರ್ಟ್ ರಾಜಕಾರಣಕ್ಕೆ ಕುಖ್ಯಾತಿಯಾಗಿದ್ದ ರಮಡಾ ಹೋಟೆಲ್ನಲ್ಲಿ ಕೊಲ್ಕತಾ ಮೂಲದ ಮುಸ್ಲಿಂ ಸಮುದಾಯದ ಮದುವೆಯ ಸಿದ್ಧತೆ ನಡೆದಿತ್ತು. ಈ ಬಗ್ಗೆ ಮಾಹಿತಿ ತಿಳಿದ ರಮಾಡಾ ಹೋಟೆಲ್ ಬಳಿಯ ಹೊನ್ನೆನಹಳ್ಳಿಯ ಗ್ರಾಮಸ್ಥರು ಹೋಟೆಲ್ ಮುಂದೆ ಗಲಾಟೆ ಮಾಡಿ ಮದುವೆಗೆ ಬಂದಿದ್ದ ಜನರನ್ನ ಅಲ್ಲಿಂದ ಓಡಿಸಿದ್ದಾರೆ.
ಬಾಂಬೆ, ಕೊಲ್ಕತಾ ಮೂಲದವರೆಂದು ಹೇಳಲಾಗುತ್ತಿದ್ದು, ಸೋಮವಾರ ಸಂಜೆ 20 ಕಾರುಗಳಲ್ಲಿ ಬಂದಿದ್ದವರು ಮದುವೆಗೆ ಸಿದ್ಧತೆ ನಡೆಸಿದ್ದರು. ಸ್ಥಳೀಯ ಹೊನ್ನೆನಹಳ್ಳಿ ಗ್ರಾಮಸ್ಥರ ದೂರಿನ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಯಲಹಂಕ ತಹಶೀಲ್ದಾರ್ ಪರಿಶೀಲನೆ ನಡೆಸಿ ವಾಪಸ್ ಕಳುಹಿಸಿದರು.
ಮಂಗಳವಾರ ರಮಾಡಾ ಹೋಟೆಲ್ನಿಂದ ತೆರಳಿದರು ಮತ್ತೆ ಸಂಜೆ ಹೋಗೆ ಬಂದಿದ್ದು ಹೇಗೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಸಂಜೆ ಕಾರುಗಳಲ್ಲಿ ಹೋಟೆಲ್ ಪ್ರವೇಶ ಮಾಡಿದ್ದನ್ನ ಗಮನಿಸಿದ ಸ್ಥಳೀಯರು ಹೋಟೆಲ್ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಕಾರುಗಳನ್ನು ಸ್ಥಳೀಯರ ಮೇಲೆ ಹತ್ತಿಸಲು ಮುಂದಾದಾಗ ಕಾರುಗಳ ಮೇಲೆ ಕಲ್ಲು ಎಸೆದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಜನಕುಂಟೆ ಪೋಲಿಸರು ಸ್ಥಳೀಯರನ್ನ ಸಮಧಾನ ಮಾಡಿದ್ದಾರೆ.
ಪಕ್ಕದೂರಿನಲ್ಲಿಯೇ ಸ್ಥಳೀಯ ಶಾಸಕರಾದ ಎಸ್. ಆರ್ ವಿಶ್ವನಾಥ್ ಇದ್ದು, ರಮಾಡಾ ಹೋಟೆಲ್ನಲ್ಲಿ ಇಷ್ಟೆಲ್ಲ ಘಟನೆಯಾದರೂ ಸುಮ್ಮನಿದ್ದದ್ದು ಯಾಕೆ ಅನ್ನೋದು ಪ್ರಶ್ನೆಯಾಗಿದೆ.
ಇದೇ ವೇಳೆ ರಮಾಡಾ ಹೋಟೆಲ್ನಲ್ಲಿ ಮದುವೆ ವಿಚಾರಕ್ಕೆ ಯಲಹಂಕ ತಹಶೀಲ್ದಾರ್ ಮತ್ತು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ. ಮದುವೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಭೀಮಾಶಂಕರ್ ಗುಳೇದ್, ಯಲಹಂಕ ತಹಶೀಲ್ದಾರ್ ಮದುವೆಗೆ ಸಮ್ಮತಿ ನೀಡಿದರು. ತಹಶೀಲ್ದಾರ್ ಅನುಮತಿ ಪತ್ರದ ಆಧಾರದ ಮೇಲೆ ರಮಾಡಾ ಹೊಟೇಲ್ಗೆ ಹೋಗಲು ಅನುಮತಿ ನೀಡಲಾಗಿದೆ. ನಾವು ಕೇವಲ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಿದ್ದು ಮದುವೆಗೆ ಹೆಚ್ಚು ಜನ ಸೇರಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು ಅಲ್ಲಿನ ಸ್ಥಳೀಯ ಅಧಿಕಾರಿಯ ಕರ್ತವ್ಯ ಎಂದರು.