ETV Bharat / state

ಭ್ರಷ್ಟಾಚಾರದ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ: ಡಿಕೆಶಿ ಸ್ಪಷ್ಟ ನುಡಿ - ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಹೇಳಿಕೆ

ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಸಲು ಸಿದ್ಧ ಎಂದು ಸಿಟಿ ರವಿ ಸವಾಲೆಸೆದಿದ್ದು, ಭ್ರಷ್ಟಾಚಾರದ ಚರ್ಚೆಯಿಂದ ಹಿಂದೆ ಸರಿಯುವುದಿಲ್ಲ. ಈ ಬಗ್ಗೆ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

statement-of-dk-shivakumar-about-corrpution-debate
ಭ್ರಷ್ಟಾಚಾರದ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ: ಡಿಕೆಶಿ
author img

By

Published : Jul 25, 2022, 3:20 PM IST

ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆದರೆ, ಯಾರ ಜತೆ ಚರ್ಚೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಹೋರಾಟ ಮಾಡುವುದು ನಮ್ಮ ಮೊದಲ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಭ್ರಷ್ಟಾಚಾರದ ಚರ್ಚೆಯಿಂದ ವಾಪಸ್ ಹೋಗುವುದಿಲ್ಲ. ಈ ಚರ್ಚೆಯನ್ನು ಅಧ್ಯಕ್ಷರ ಜತೆ ಮಾಡಬೇಕೋ, ಮಾಜಿ ಮುಖ್ಯಮಂತ್ರಿಗಳ ಜತೆ ಮಾಡಬೇಕೋ ಎಂದು ತೀರ್ಮಾನ ಮಾಡುತ್ತೇನೆ.

ರಾಜ್ಯ ಸರ್ಕಾರ ಈಶ್ವರಪ್ಪ ಅವರ ಪ್ರಕರಣ ಮುಚ್ಚಿ ಹಾಕಿದ್ದು, ಈ ವಿಚಾರವಾಗಿ ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹಸಚಿವರು ಏನೆಲ್ಲಾ ಹೇಳಿಕೆ ನೀಡಿದ್ದಾರೆ ನೀವೇ ನೋಡಿ. ಬಿ ರಿಪೋರ್ಟ್ ಸಲ್ಲಿಕೆ ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವೇ ಪ್ರಾರಂಭದಿಂದ ಪ್ರಯತ್ನ ಪಟ್ಟಿದ್ದನ್ನು ಸಾಬೀತುಪಡಿಸಿದೆ ಎಂದರು.

ಭ್ರಷ್ಟಾಚಾರದ ಚರ್ಚೆಯಿಂದ ನಾನು ಹಿಂದೆ ಸರಿಯುವುದಿಲ್ಲ: ಡಿಕೆಶಿ

ಹೀಗಾಗಿ ಪ್ರತಿಪಕ್ಷದ ನಾಯಕರು ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ತಾಂಡವಕ್ಕೆ ಯುವಕ ಬಲಿಯಾಗಿದ್ದು, ಇದೇ ರೀತಿ ಬೇರೆ ಇಲಾಖೆಗಳಿಂದಲೂ ಹಲವು ದೂರುಗಳು ಬಂದಿವೆ. ಸರ್ಕಾರ ಆರಂಭದಲ್ಲೇ ಕ್ಲೀನ್ ಚಿಟ್ ನೀಡಿದರೆ ಪೊಲೀಸ್ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ?.

ಈ ವಿಚಾರವಾಗಿ ನಾವು ಸಾಕಷ್ಟು ಮಾಹಿತಿ ಪಡೆದು ಪರಿಶೀಲಿಸಿದ್ದೇವೆ. ಮೊದಲು ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕಿತ್ತು. ಆದರೆ, ಅದನ್ನು ಮಾಡಿಲ್ಲ. ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು.

ಚರ್ಚೆಗೂ ಮೊದಲು ಶೇ 40ರಷ್ಟು ಭ್ರಷ್ಟಾಚಾರ ಪ್ರಕರಣದ ಬಗ್ಗೆ ತೀರ್ಮಾನ ಆಗಬೇಕು. ಕೋವಿಡ್ ಸಮಯದಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ತೀರ್ಮಾನ ಆಗಬೇಕು. ಮಾಧ್ಯಮಗಳಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿರುವ ಪಟ್ಟಿಯ ವರದಿ ಬಗ್ಗೆ ತೀರ್ಮಾನ ಆಗಬೇಕು.

ತೋಟಗಾರಿಕಾ ಇಲಾಖೆ ಪಟ್ಟಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರದ ವಿಚಾರ ಇತ್ಯರ್ಥ ಆಗಬೇಕು. ಗುತ್ತಿಗೆದಾರರನ್ನು ಹೆದರಿಸುವ ಪ್ರಯತ್ನ ಮಾಡಿದ್ದು, ಇವೆಲ್ಲವೂ ಮೊದಲು ಬಗೆಹರಿಯಲಿ ' ಎಂದು ಡಿಕೆ ಶಿವಕುಮಾರ್​ ಹೇಳಿದರು.

ಓದಿ : ಜನಸಂಖ್ಯೆ ನಿಯಂತ್ರಣ ಕಾಯ್ದೆ ರೂಪಿಸುವ ಸಂಸದರಿಗೆ ಮಕ್ಕಳೆಷ್ಟು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.