ETV Bharat / state

ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳೇನು.?..2030ರ ಸುಸ್ಥಿರ ಅಭಿವೃದ್ಧಿ ಅನುಷ್ಠಾನಕ್ಕೆ ಸಿದ್ಧತೆ ಹೀಗಿದೆ! - ನೀತಿ ಆಯೋಗ

ಕರ್ನಾಟಕ ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ವಿಶ್ವ ಮಟ್ಟದ ಸಂಸ್ಥೆಗಳಾದ ಯುಎನ್‌ಡಿಪಿ, ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳು ಯೋಜಿಸುವ ಅಭಿವೃದ್ಧಿ ಕಾರ್ಯಕ್ರಮಗಳ ವಿಚಾರಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ.

State Sustainable_Development process
ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳೇನು.
author img

By

Published : Apr 13, 2021, 7:23 PM IST

ಬೆಂಗಳೂರು: ನೀತಿ ಆಯೋಗವು 2018ರಲ್ಲಿ ರಚಿಸಿದ ಸುಸ್ಥಿರ ಅಭಿವೃದ್ಧಿ ಗುರಿ ಇಂಡೆಕ್ಸ್​​ನ ಪ್ರಕಾರ ಕರ್ನಾಟಕ 52 ಅಂಕಗಳೊಂದಿಗೆ ಸಾಧಕ ರಾಜ್ಯಗಳ ಗುಂಪಿನಲ್ಲಿದೆ. ತಮಿಳುನಾಡು 76 ಅಂಕಗಳೊಂದಿಗೆ ಮುಂಚೂಣಿ ಸ್ಥಾನದಲ್ಲಿದೆ.

2018ರಲ್ಲಿ ನೀತಿ ಆಯೋಗವು ಯುಎನ್ ಇಂಡಿಯಾದ ಸಹಯೋಗದಲ್ಲಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಇಂಡಿಯಾ ಬೇಸ್‌ ಲೈನ್ ವರದಿಯನ್ನು ಸಿದ್ಧಪಡಿಸಿತು, ಜೊತೆಗೆ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 13ಕ್ಕೆ ಸಂಪೂರ್ಣ ಪೂರಕ ಮಾಹಿತಿಗಳಿರುವ 'ಅಗತ್ಯ ಮಾಹಿತಿ-ಸಂಗ್ರಹಗಾರವನ್ನು (ಡ್ಯಾಶ್ಬೋರ್ಡ್) ನಿರ್ಮಿಸಿತು. (12, 13, 14 ಮತ್ತು 17 ಗುರಿಗಳನ್ನು ಹೊರತುಪಡಿಸಿ). ಆಯ್ದ 62 ಸೂಚ್ಯಂಕಗಳನ್ನು ಆಧರಿಸಿ, ದೇಶದ ಪ್ರಗತಿಯನ್ನು ಸಮಗ್ರವಾಗಿ ದಾಖಲಿಸುವ ಪ್ರಯತ್ನವನ್ನು ಈ ವರದಿ ಮಾಡಿತು.

ಜೊತೆಗೆ ಇದೇ 62 ಸೂಚ್ಯಂಕಗಳನ್ನು ಆಧರಿಸಿ, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ಜೇಷ್ಠತಾ ಪಟ್ಟಿಯೊಂದನ್ನು ನಿರ್ಮಿಸಲಾಯಿತು. ಈ ಸೂಚ್ಯಂಕದಲ್ಲಿ ಕರ್ನಾಟಕವು 36 ರಿಂದ 88 ಅಂಕಗಳವರೆಗೆ ಅಂಕಗಳನ್ನು ಪಡೆದುಕೊಂಡಿರುತ್ತದೆ.

ಪ್ರಗತಿಯನ್ನು ಸಾಧಿಸಿರುವ ಗುರಿಗಳು ಈ ರೀತಿಯದ್ದಾಗಿದೆ

03ನೇ ಗುರಿಯಾದ ಉತ್ತಮ ಆರೋಗ್ಯ ಮತ್ತು ಯೋಗ ಕ್ಷೇಮ 69

04ನೇ ಗುರಿಯಾದ ಗುಣಾತ್ಮಕ ಶಿಕ್ಷಣ 76

07ನೇ ಗುರಿಯಾದ ಕೈಗೆಟುಕುವ ದರದಲ್ಲಿ ಶುದ್ಧ ಇಂಧನ 77

08ನೇ ಗುರಿಯಾದ ಉತ್ತಮ ದುಡಿಮೆ ಮತ್ತು ಆರ್ಥಿಕ ಅಭಿವೃದ್ಧಿ 72

10ನೇ ಗುರಿಯಾದ ಅಸಮಾನತೆಗಳ ಇಳಿಕೆ 68

15ನೇ ಗುರಿಯಾದ ಭೂಮಿಯ ಮೇಲಿನ ಜೀವಜಲ 88

16ನೇ ಗುರಿಯಾದ ಶಾಂತಿ, ನ್ಯಾಯ ಮತ್ತು ಸದೃಢ ಸಂಸ್ಥೆಗಳು 74ರಲ್ಲಿ ಸಾಧನೆಯ ಹಾದಿಯಲ್ಲಿದೆ.

ಗುರಿ 01ರಲ್ಲಿ ಬಡತನ ಮುಕ್ತ, ಗುರಿ 02ರಲ್ಲಿ ಹಸಿವು ಮುಕ್ತ, ಗುರಿ 06ರಲ್ಲಿ ಶುದ್ಧ ನೀರು ಮತ್ತು ನೈರ್ಮಲ್ಯ ಮತ್ತು ಗುರಿ 09ರಲ್ಲಿ ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯಗಳು ಇವುಗಳಲ್ಲಿ ಸಾಧಕ ಗುಂಪಿನಲ್ಲಿ ಕರ್ನಾಟಕ ರಾಜ್ಯ ಇದೆ, ಇದಕ್ಕೆ ವಿರುದ್ಧವಾಗಿ ಗುರಿ 05ರಲ್ಲಿ ಲಿಂಗಾಧಾರಿತ ಸಮಾನತೆ, ಗುರಿ 11ರಲ್ಲಿ ಸುಸ್ಥಿರ ನಗರಗಳು ಮತ್ತು ಸಮುದಾಯಗಳು ಇವುಗಳಲ್ಲಿ ರಾಜ್ಯ ಸಾಧಿಸಬೇಕಾದ ಗುಂಪಿನಲ್ಲಿ ಇದೆ.

ಸುಸ್ಥಿರ ಅಭಿವೃದ್ಧಿ ಗುರಿಗಳು 2030ನ್ನು ಅನುಷ್ಠಾನಗೊಳಿಸಲು ರಾಜ್ಯದ ಸಿದ್ಧತೆ

ಕರ್ನಾಟಕ ದೇಶದ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ವಿಶ್ವ ಮಟ್ಟದ ಸಂಸ್ಥೆಗಳಾದ ಯುಎನ್‌ಡಿಪಿ, ವಿಶ್ವಬ್ಯಾಂಕ್, ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳು ಯೋಜಿಸುವ ಅಭಿವೃದ್ಧಿ ಕಾರ್ಯಕ್ರಮಗಳ ವಿಚಾರಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳ ಮತ್ತು ಕ್ರಿಯಾ ಯೋಜನೆಯ ರಚನೆಯಲ್ಲಿ, ಮುನ್ನೋಟ ದಾಖಲೆಯ ತಯಾರಿಯಲ್ಲಿ ಮತ್ತು ಉದ್ದೇಶಿತ ಲಕ್ಷಗಳ ನಿಗದಿಯಲ್ಲಿ ಕರ್ನಾಟಕ ಮೂಂಚೂಣಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ.

ಕರ್ನಾಟಕ ಆದ್ಯತೆ ಮೇಲೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನಕ್ಕೆ ತರಲು ನಿಗಾವಹಿಸುವ ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸಂಖ್ಯಾ ಇಲಾಖೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಯಶಸ್ವೀ ಅನುವಾದಕ್ಕೆ ಸಂಬಂಧಿಸಿದ ತಂತ್ರಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಅಲ್ಲದೇ ಈ ಇಲಾಖೆಗೆ ಸುಸ್ಥಿರ ಅಭಿವೃದ್ಧಿ ಗುರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಕ್ರಿಯಾ ಯೋಜನೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಯಶಸ್ವೀ ಅನುಷ್ಠಾನಕ್ಕೆ ಅಗತ್ಯವಾಗಿರುವ ಉಸ್ತುವಾರಿಯನ್ನು ನಿರ್ವಹಿಸಲು ರಾಜ್ಯಮಟ್ಟದ ಚಾಲನಾ ಸಮಿತಿಯ ಜೊತೆಗೆ ಉಸ್ತುವಾರಿ ಮತ್ತು ನಿಗಾ ಸಮಿತಿಗಳನ್ನು ರಚಿಸಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಚಾರ ಆರಂಭ

ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು. ಅಗತ್ಯ ಬದಲಾವಣೆಗಳನ್ನು ಸೂಚಿಸಲು ತಾಂತ್ರಿಕ ಸಮಿತಿಗಳನ್ನು ಮತ್ತು ನಿರ್ದಿಷ್ಟ ಗುರಿಯಾಧಾರಿತ ಸಮಿತಿಗಳನ್ನು ರಚಿಸಲಾಗಿದೆ. ಕರ್ನಾಟಕ ವಿಷನ್ 2020 ಮತ್ತು 2025ಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ವಿಲೀನಗೊಳಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ನಡೆಯುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪರಿಶೀಲನಾ ಸಭೆಗಳಲ್ಲಿ ನೀತಿ ಆಯೋಗವು ಸುಸ್ಥಿರ ಅಭಿವೃದ್ಧಿ ಗುರಿ ಇಂಡಿಯಾ ಇಂಡೆಕ್ಸ್ 2018ರಿಂದ ಆಯ್ಕೆ ಮಾಡಿ ಸೂಚಿಸಿರುವ 62 ಆದ್ಯತೆಯ ಸೂಚ್ಯಂಕಗಳನ್ನು ಈಗಾಗಲೇ ಒಳಗೊಂಡಿದೆ. ಕರ್ನಾಟಕವು ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಸಾಕಷ್ಟು ಪ್ರಚಾರ ಕಾರ್ಯವನ್ನು ಈಗಾಗಲೇ ಆರಂಭಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳು 2030ರ ಒಳಗೆ ಸಾಧಿಸಲು ಅಗತ್ಯವಿರುವ ತಂತ್ರ ಮತ್ತು ವರದಿಗಳನ್ನು ತಯಾರಿಸುವಲ್ಲಿ ಕರ್ನಾಟಕ ಮಾಲ್ಯಮಾಪನ ಪ್ರಾಧಿಕಾರವು ರಾಜ್ಯ ಯೋಜನೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸಾಂಖ್ಯಿಕ ಇಲಾಖೆಗೆ ಸೂಕ್ತ ಬೆಂಬಲವನ್ನು ನೀಡುತ್ತಿದೆ. ಯುಎನ್‌ಡಿಪಿಯ ಸಹಯೋಗದಲ್ಲಿ ಯೋಜನಾ ಇಲಾಖೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಸಂಯೋಜನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಸಿಎಸ್​​​ಆರ್​​​ ನಿಧಿ ಬಳಕೆ

ಇದರ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಮರುನಿರೂಪಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ಹಾಗೂ ತಂತ್ರಗಳನ್ನು ರೂಪಿಸಲಾಗುತ್ತಿದೆ. ಯುಎನ್​​​ಡಿಪಿಯ ತಾಂತ್ರಿಕ ನೆರವಿನೊಂದಿಗೆ ಸಿಎಸ್‌ಆರ್ (ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ) ವೇದಿಕೆ ರಚಿಸಲಾಗುತ್ತಿದೆ. ಇದರ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನೆರವಾಗಲು ಸಿಎಸ್​​​ಆರ್​​​ ನಿಧಿ ಬಳಸಿಕೊಳ್ಳುವ ಅವಕಾಶ ನೀಡುವ ಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ.

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಗಳ ಮೂಲಕ ಸಾಮಾಜಿಕ ನ್ಯಾಯ ಸ್ಥಾಪನೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೃಷಿ ಭಾಗ್ಯ, ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಋಣಮುಕ್ತ ಭಾಗ್ಯ, ವಿದ್ಯಾಶ್ರೀ ನಿರಂತರ ಜ್ಯೋತಿ ಯೋಜನೆ, ಬಸವ ವಸತಿ ಯೋಜನೆ, ಆರೋಗ್ಯ ಭಾಗ್ಯ ಯೋಜನೆ, ನಾಗರಿಕ ಸೇವಾ ಕೇಂದ್ರಗಳು (ಬೆಂಗಳೂರು ಒಂದು. ಕರ್ನಾಟಕ ಒಂದು). ಏಕೀಕೃತ ಮಾರುಕಟ್ಟೆ ವೇದಿಕೆ, ಮೊಬೈಲ್ ಒಂದು (ವಿವಿಧ-ಹಂತದ ಆಡಳಿತ ಸೇವೆ ಪೂರೈಕೆ ವೇದಿಕೆ).

ಪ್ರತಿಬಿಂಬ (ಇಲಾಖಾವಾರು ಪ್ರಗತಿ ಅಳೆಯುವ ಕಾರ್ಯಕ್ರಮ), ಕರ್ನಾಟಕ ಸಕಾಲ ಕಾಯಿದೆ 2011 ಮತ್ತು ತಿದ್ದುಪಡಿ 2014; ಐಟಿಬಿಟಿ, ಏರೋಸ್ಪೇಸ್, ಸ್ಟಾರ್ಟ್ ಅಪ್ ಗಳು, ಎಫ್ ಪಿಒಗಳು, ಆನಿಮೇಷನ್ಸ್, ವಿಷುವಲ್ ಆರ್ಟ್ಸ್, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಿಕ್​ ವಾಹನಗಳ ತಯಾರಿ ಕೈಗಾರಿಗಳಿಗೆ ಪೂರಕವಾದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿ ಅನುಷ್ಠಾನಕ್ಕೆ ತಂದಿದೆ.

ಪಬ್ಲಿಕ್ ಆಫೈರ್ ಇಂಡೆಕ್ಸ್ (ಪಿಎಐ-2017) ಕರ್ನಾಟಕವನ್ನು ಪಾರದರ್ಶಕತೆಯಲ್ಲಿ ಎರಡನೇ ಸ್ಥಾನವನ್ನು ಮತ್ತು ಉತ್ತರದಾಯಿತ್ವದಲ್ಲಿ ಮೂರನೇ ಸ್ಥಾನವನ್ನು ನೀಡಿದೆ. ಈ ಬ್ಯಾಂಕಿಂಗ್ ಅನ್ನು 25 ವಿಷಯಗಳನ್ನು ಆಧರಿಸಿದ 10 ಮಾನದಂಡಗಳು ಹಾಗೂ 68 ಅಭಿವೃದ್ಧಿ ಸೂಚ್ಯಂಕಗಳನ್ನು ಆಧರಿಸಿ ನೀಡಲಾಗಿದೆ (ಕರ್ನಾಟಕ ಸರ್ಕಾರ 2018).

ಕ್ಷಯ ರೋಗದ ನಿರ್ಮೂಲನೆ ತಂತ್ರ

ಈಗ ಚಾಲ್ತಿಯಲ್ಲಿರುವ ಕ್ಷಯ ರೋಗ ನಿಯಂರ್ತಣ ಕಾರ್ಯಕ್ರಮವನ್ನು ಕ್ಷಯ ರೋಗದ ನಿರ್ಮೂಲನೆ ತಂತ್ರ' ಹೆಸರಿನಲ್ಲಿ ಸುಸ್ಥಿರ ಗುರಿಗಳೊಂದಿಗೆ ವಿಲೀನಗೊಳಿಸಲು ಉದ್ದೇಶಿಸಲಾಗಿದೆ. ಮಿಲೇನಿಯಂ ಗುರಿಗಳ ಅಡಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ನಿಯಂತ್ರಿಸುವ ಗುರಿಯನ್ನು ಈಗಾಗಲೇ ಮುಟ್ಟಲಾಗಿದೆ.

ಹಾಲಿ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು 29 ಆಗಿದ್ದು (ಎಸ್ ಆರ್ ಎಸ್ 2016 ದತ್ತಾಂಶ); 2009ಕ್ಕೆ ಹೋಲಿಸಿದರೆ 19 ಪಾಯಿಂಟ್‌ಗಳ ಇಳಿಕೆಯಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ ಇದನ್ನು ಹಾಲಿಯಿರುವ 29ರಿಂದ 25ಕ್ಕೆ ಇಳಿಸುವ ಅಗತ್ಯವಿದೆ. ನವಜಾತ ಶಿಶು ಮರಣ ಪ್ರಮಾಣ ಸದ್ಯದ ಪರಿಸ್ಥಿತಿಯಲ್ಲಿ 18 ಆಗಿದ್ದು, ಇದನ್ನು ಸುಸ್ಥಿರ ಅಭಿವೃದ್ಧಿ ಗುರಿಯು 12ಕ್ಕೆ ಇಳಿಸುವ ಉದ್ದೇಶವನ್ನು ಹೊಂದಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ವಿಷನ್ /ಮುನ್ನೋಟ ದಾಖಲೆಯ ಸದ್ಯದ ಸ್ಥಿತಿ, ಲಕ್ಷಣಗಳು ಮತ್ತು ಬಜೆಟ್ ಆಗತ್ಯಗಳ ಕುರಿತು ವಿಶ್ಲೇಷಣೆಯನ್ನು ನಡೆಸುತ್ತದೆ, ಸಂಬಂಧಿಸಿದ ಇಲಾಖೆಗಳು ಬೇಸ್ ಲೈನ್ ಮಾಹಿತಿಯನ್ನು ನೀಡುತ್ತದೆ. ಹಿಂದಿನ ಪ್ರಗತಿ ಸಾಧ್ಯತೆಗಳು, ಉತ್ತಮವಾಗಿ ಕಾರ್ಯನಿರ್ವಹಿಸಿರುವ ರಾಜ್ಯಗಳು ಮತ್ತು ರಾಷ್ಟ್ರೀಯ ಹಂತದಲ್ಲಿ ನಿಗದಿಪಡಿಸಿರುವ ಕುರಿಗಳಿಗೆ ಆಧರಿಸಿ, ಗುರಿವಾರು ಸಮಿತಿಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಗುರಿವಾರು ಸೂಚ್ಯಂಕಗಳನ್ನು ನಿಗದಿಪಡಿವೆ‌.

ಗುರಿಗಳನ್ನು ಆಧರಿಸಿ, ಸೂಕ್ತ ತಂತ್ರಗಳನ್ನು ಮತ್ತು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಸಾಧನೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿರುವ ಗುರಿಗಳಿಗೆ ಆದ್ಯತೆ ನೀಡುವುದರ ಮೂಲಕ 2030 ರ ವೇಳೆಗೆ ಸಾಧನೆಗೆ ಪೂರಕವಾಗುವಂತೆ ಬಜೆಟ್ ನ್ನು ನಿಗದಿಪಡಿಸಲಾಗಿದೆ.

ನಿಗದಿತ ಗುರಿಗಳನ್ನು ತಲುಪಲು ಕ್ರಿಯಾ ಯೋಜನೆ:

2030ಕ್ಕೆ ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿ ನಿಗದಿತ ಗುರಿಗಳನ್ನು ತಲುಪಲು ಬೇಕಿರುವ ಕಾರ್ಯಕ್ರಮಗಳನ್ನು ಯೋಜನೆಗಳನ್ನು ಮತ್ತು ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಬೇಕಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿವಾರು ಸಮಿತಿಗಳ ಸಲಹೆಯ ಆಧಾರದ ಮೇಲೆ, ಬಜೆಟ್ ಅಂತರಗಳನ್ನು ಅಂದಾಜು ಮಾಡಲಾಗಿದೆ.

2016-17ನ್ನು ಬೇಸ್ ಲೈನ್ ಆಗಿ ಇರಿಸಿಕೊಂಡು, 'ಬ್ಯಾಕ್ ಕಾಸ್ಟಿಂಗ್ ಮೂಲಕ 2030ಕ್ಕೆ ಬೇಕಿರುವ ಬಜೆಟ್‌ನ್ನು ಅಂದಾಜು ಮಾಡಲಾಗಿದೆ. 2018-19ರ ಬೇಸ್‌ ಲೈನ್‌ನ್ನು 2019-2020ಕ್ಕೆ ಹೋಲಿಕೆ ಮಾಡಿ, ಬಿಎಯು ತಂತ್ರದ ಮೂಲಕ ಯೋಜನಾವಾರು ಅಗತ್ಯವಿರುವ ಹಣಕಾಸು ಅಂದಾಜನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಗುರಿವಾರು ಸಮಿತಿಗಳ ಅಂದಾಜು ಬಿಎಯುಗಿಂತ ಕಡಿಮೆ ಇದ್ದಲ್ಲಿ, ಅದನ್ನೇ 2020-21ರ ಅಗತ್ಯವೆಂದು ಪರಿಗಣಿಸಿ, ಅಂತರವನ್ನು ಶೂನ್ಯವೆಂದು ನಿಗದಿಪಡಿಸಲಾಗಿದೆ.

ಒಂದು ವೇಳೆ ಗುರಿವಾರು ಸಮಿತಿಗಳು ಅಂದಾಜಿಸಿರುವ ಮೊತ್ತವು ಬಿಎಯು ಗಿಂತ ಹೆಚ್ಚಿದ್ದಲ್ಲಿ, ಎರಡರ ನಡುವಿನ ಅಂತರವನ್ನು ಅಗತ್ಯವಿರುವ ಹೆಚ್ಚುವರಿ ಹಣಕಾಸು ಸಂಪನ್ಮೂಲವೆಂದು ಪರಿಗಣಿಸಿ ಅದನ್ನು ಒದಗಿಸಲಾಗಿದೆ. ಇದನ್ನು ಸುಸ್ಥಿರ ಅಭಿವೃದ್ಧಿ ಗುರಿ 08 ಅನ್ನು ಹೊರತು ಪಡಿಸಿ ಉಳಿದ ಗುರಿಗಳಿಗೆ ಅನುಷ್ಠಾನ ಮಾಡಲಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳು ಅಗತ್ಯವಾದ ತಂತ್ರಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಶ್ರಮವಹಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.