ETV Bharat / state

ಭಾನುವಾರದ ಲಾಕ್​​ಡೌನ್​​: 33 ಗಂಟೆಗಳ ಕಾಲ ರಾಜ್ಯ ಸ್ತಬ್ಧ... ಏನು ಇರುತ್ತೆ, ಏನು ಇರಲ್ಲ ಗೊತ್ತಾ?

ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೆ ಸೋಮವಾರದಿಂದ ಬೆಂಗಳೂರು ಸೀಲ್​​​ ಡೌನ್​​ ಆಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಭಾನುವಾರದ ಲಾಕ್​​ಡೌನ್
ಭಾನುವಾರದ ಲಾಕ್​​ಡೌನ್
author img

By

Published : Jul 4, 2020, 5:25 PM IST

ಬೆಂಗಳೂರು: ಕೋವಿಡ್-19 ಅಟ್ಟಹಾಸ ನಿಯಂತ್ರಿಸಲು ಹರಸಾಹಸ ನಡೆಸಿರುವ ರಾಜ್ಯ ಸರ್ಕಾರ ಮತ್ತೊಮ್ಮೆ ಭಾನುವಾರ ಲಾಕ್​ಡೌನ್​​ಗೆ ಮುಂದಾಗಿದ್ದು, ನಾಳೆ ರಾಜ್ಯ ಸಂಪೂರ್ಣ ಲಾಕ್​ಡೌನ್​​ ಆಗಲಿದೆ.

ಇದು ಕೇವಲ ಭಾನುವಾರದ ಲಾಕ್​ಡೌನ್ ಮಾತ್ರವಲ್ಲ, ಶನಿವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ಲಾಕ್​ಡೌನ್ ಇರಲಿದೆ ಎಂಬುದನ್ನು ಅರಿಯಬೇಕಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೆ ಸೋಮವಾರದಿಂದ ಬೆಂಗಳೂರು ಸೀಲ್​​​ ಡೌನ್​​ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಏನೇನು ಇರುವುದಿಲ್ಲ?

ತುರ್ತು ಸೇವೆ ಒದಗಿಸುವ ಇಲಾಖೆ ಕಚೇರಿಗಳನ್ನು ಹೊರತುಪಡಿಸಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡ್​ಗಳು ಬಂದ್ ಆಗಲಿವೆ. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಎನ್​​ಡಬ್ಲ್ಯೂಕೆಆರ್​​ಟಿಸಿ, ಎನ್ಇಕೆಆರ್​​ಟಿಸಿ ಬಸ್​ಗಳ ಸಂಚಾರ ಇರುವುದಿಲ್ಲ. ಜೊತೆಗೆ ಕ್ಯಾಬ್, ಆಟೋ, ವಾಣಿಜ್ಯ ಮಳಿಗೆ ಇನ್ನಿತರ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಮಾಲ್​ಗಳು ಮುಚ್ಚಿರಲಿವೆ. ಈಗಾಗಲೇ ಬಾಗಿಲು ತೆರೆಯದ ಚಿತ್ರಮಂದಿರಗಳೂ ಸ್ತಬ್ಧವಾಗಿರಲಿವೆ. ಯಾವುದೇ ಮದ್ಯದ ಅಂಗಡಿಗಳು ತೆರೆಯುವುದಿಲ್ಲ. ಎಂಆರ್​​ಪಿ, ವೈನ್​​ ಶಾಪ್, ಕ್ಲಬ್, ಬಾರ್​​ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಏನೆಲ್ಲಾ ಇರಲಿದೆ?

ಸರಕು ಸಾಗಣೆ ಮತ್ತು ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹೋಟೆಲ್​​ನಲ್ಲಿ ಪಾರ್ಸಲ್, ತರಕಾರಿ ಅಂಗಡಿ, ಮಾಂಸದಂಗಡಿ, ಹಾಲು ಮತ್ತು ಪೊಲೀಸ್, ವೈದ್ಯಕೀಯ, ಮಾಧ್ಯಮ ಸೇವೆ ಸಿಗಲಿದೆ.

ಗಡಿಯಲ್ಲಿ ಭದ್ರತೆ

ಅಂತರ್​ ರಾಜ್ಯ, ಜಿಲ್ಲಾ ಗಡಿಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಇರಲಿದೆ. ಈ ಲಾಕ್​ಡೌನ್​​ ಹಿಂದೆ ಇದ್ದ ಭಾನುವಾರದ ಲಾಕ್​ಡೌನ್​​ ಮಾದರಿ ವಿನಾಯಿತಿ ಒಳಗೊಂಡಿರುವುದಿಲ್ಲ. ಸಂಪೂರ್ಣ ಬಿಗಿಯಾಗಿರಲಿದ್ದು, ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ಆದೇಶಿಸಲಾಗಿದೆ. ದೂರದ ಊರಿಗೆ ಪ್ರಯಾಣ ಮಾಡುವ ಉದ್ದೇಶ ಇದ್ದರೆ ಕೈಬಿಡುವುದು ಒಳಿತು.

ಮದ್ಯ ಇರಲ್ಲ!

ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆಯವರೆಗೆ ಒಟ್ಟು 33 ಗಂಟೆಗಳ ಕಾಲ ಮದ್ಯ ಮಾರಾಟ ಇರುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.