ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಮೆರಿಕಕ್ಕೆ ತೆರಳಿದ್ದು, ಅವರು ಬರುವ ಹೊತ್ತಿಗೆ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸರ್ಕಾರ ಉರುಳಬೇಕಾದರೆ ಹದಿಮೂರು ಜನರು ರಾಜೀನಾಮೆ ನೀಡಬೇಕಿದೆ. ಸದ್ಯ ಎಂಟು ಜನರು ರಾಜೀನಾಮೆ ನೀಡಲು ಮುಂದಾಗಿದ್ದಾರೆನ್ನುವ ವಿಷಯ ಮೈತ್ರಿ ಸರ್ಕಾರದ ಮಟ್ಟಿಗೆ ಗಂಭೀರ ಹೌದು.
ಮಿಕ್ಕ ಐದು ಜನರು ರಾಜೀನಾಮೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಹಾಗೊಮ್ಮೆ ಆದರೆ, ಸಿಎಂ ವಾಪಸ್ ಬರುವ ವೇಳೆಗೆ ಸರ್ಕಾರ ಪತನವಾಗಿರಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.