ETV Bharat / state

ಕಾಂಗ್ರೆಸ್​ನ ‘ಗ್ಯಾರಂಟಿ ಸ್ಕೀಂ’' ಪ್ರಣಾಳಿಕೆ ಅಸ್ತ್ರಕ್ಕೆ ಬಿಜೆಪಿಯಿಂದ ‘ಮೀಸಲಾತಿ ಗಿಫ್ಟ್’ ಬ್ರಹ್ಮಾಸ್ತ್ರ ..!?

ಕರ್ನಾಟಕ ವಿಧಾನಸಭೆ ಚುನಾವಣೆ - ರಾಜ್ಯ ಸರ್ಕಾರದಿಂದ ವಿವಿಧ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ - ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಕಸರತ್ತು

author img

By

Published : Mar 25, 2023, 7:48 AM IST

state-govt-increased-reservations-for-some-community
ಕಾಂಗ್ರೆಸ್ ನ '' ಗ್ಯಾರಂಟಿ ಸ್ಕೀಂ'' ಪ್ರಣಾಳಿಕೆ ಅಸ್ತ್ರಕ್ಕೆ ಬಿಜೆಪಿಯಿಂದ '' ಮೀಸಲಾತಿ ಗಿಫ್ಟ್ '' ಬ್ರಹ್ಮಾಸ್ತ್ರ ..!

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಚುನಾವಣೆ ಪ್ರಣಾಳಿಕೆಯ ಜನಪ್ರಿಯ ಗ್ಯಾರಂಟಿ ಉಚಿತ ಯೋಜನೆಗಳ ಅಸ್ತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಗಿಫ್ಟ್ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿ ಮತದಾರರನ್ನು ಕಮಲದತ್ತ ಸೆಳೆಯುವ ಕಸರತ್ತು ನಡೆಸಿದೆ.

ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ಘೋಷಣೆ ಆಗುವ ಮುನ್ನವೇ ಚುನಾವಣೆ ಪೂರ್ವ ಪ್ರಚಾರಗಳು ಮತ್ತು ಸಮಾವೇಶಗಳಲ್ಲಿ ಹಲವಾರು ಉಚಿತ ಕೊಡುಗೆಗಳ ಚುನಾವಣೆ ಆಶ್ವಾಸನೆಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಪಕ್ಷದ ನೇತಾರರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೂಲಕ ಚುನಾವಣೆ ಪ್ರಣಾಳಿಕೆಯ ಘೋಷಣೆಗಳನ್ನು ಪ್ರಕಟಿಸಿ ಕಾಂಗ್ರೆಸ್ ಪಕ್ಷ ಅವುಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿದೆ. ಪ್ರತಿ ಮನೆಗೆ ತೆರಳಿ ಮತದಾರರಿಗೆ ಗ್ಯಾರಂಟಿ ಚುನಾವಣೆ ಆಶ್ವಾಸನೆಗಳನ್ನು ತಲುಪಿಸುವ ಪ್ರಯತ್ನ ನಡೆಸಿದೆ.

ಪ್ರತಿ ಮನೆಗೆ ಎರಡು ನೂರು ಯೂನಿಟ್ ತನಕ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಗ್ಯಾರಂಟಿ ನಂ -1 ಯೋಜನೆ, ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2000 ರೂಪಾಯಿ ಪ್ರೋತ್ಸಾಹ ಧನ ನೀಡುವ ‘ಗೃಹ ಲಕ್ಷ್ಮಿ’ ಗ್ಯಾರಂಟಿ ನಂ - 2 ಯೋಜನೆ , ಕಡು ಬಡ ಕುಟುಂಬದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’ ಗ್ಯಾರಂಟಿ ನಂ. - 3 ಯೋಜನೆ ಹಾಗೂ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ (ಪದವೀಧರರಿಗೆ 3000ರೂ, ಡಿಪ್ಲೊಮೊ ಪದವೀಧರರಿಗೆ 1500 ರೂ.) ನೀಡುವ ‘ಯುವನಿಧಿ’ ಗ್ಯಾರಂಟಿ ನ-4 ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದೆ.

ಜನಪ್ರಿಯ ಚುನಾವಣೆ ಆಶ್ವಾಸನೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಮತದಾರರನ್ನು ಭೇಟಿ ಮಾಡಿ ಮತದಾರರಿಗೆ ಉಚಿತ ಕೊಡುಗೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿ ಇರುವಾಗ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗೆ ಜನತೆ ಮಾರುಹೋಗುತ್ತಿರುವುದನ್ನು ಮನಗಂಡ ಬಿಜೆಪಿ ಕಾಂಗ್ರೆಸ್​ನ ಚುನಾವಣೆ ಪ್ರಣಾಳಿಕೆಗೆ ಪ್ರತಿಯಾಗಿ ಮೀಸಲಾತಿ ಹೆಚ್ಚಳದ ಅಸ್ತ್ರವನ್ನು ಪ್ರಯೋಗಿಸಿದೆ.

ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಬಹುದು ಎನ್ನುವ ಹಂತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕೆನ್ನುವ ವಿವಿಧ ಸಮುದಾಯಗಳ ಬೇಡಿಕೆಗೆ ಅಸ್ತು ಎಂದಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರನ್ನು ಹೊಂದಿರುವ ವೀರಶೈವ ಲಿಂಗಾಯತ, ಒಕ್ಕಲಿಗ ಜನಾಂಗಕ್ಕೆ ಕ್ರಮವಾಗಿ ಮೀಸಲಾತಿಯನ್ನು ಶೇ.7 ಮತ್ತು 6 ರಷ್ಟು ಮೀಸಲಾತಿ ನಿಗದಿ ಮಾಡಿದೆ. ಈ ಮೂಲಕ ಬಿಜೆಪಿ ಪರವಾಗಿರುವ ಲಿಂಗಾಯತ ಸಮುದಾಯದ ಮತಬ್ಯಾಂಕ್ ಉಳಿಸಿಕೊಳ್ಳುವ ಹಾಗು ಒಕ್ಕಲಿಗ ಸಮುದಾಯದ ಮೀಸಲು ಹೆಚ್ಚಿಸುವುದರೊಂದಿಗೆ ಹೊಸ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆ ಮೀಸಲು ಹೆಚ್ಚಳದ ಹಿಂದೆ ಅಡಗಿದೆ ಎಂದು ಹೇಳಲಾಗುತ್ತಿದೆ.

ಪ್ರಬಲ ಜನಸಮುದಾಯದ ಜೊತೆಗೆ ಎಸ್ಸಿ ಸಮುದಾಯದ ಒಲವು ಗಳಿಸಲು ಸಹ ಮುಖ್ಯಮಂತ್ರಿ ಬೊಮ್ಮಾಯಿ ಪ್ರಯತ್ನ ಮಾಡಿದ್ದಾರೆ. ದಶಕಗಳಿಂದ ಹಿಂದಿನ ರಾಜ್ಯ ಸರ್ಕಾರಗಳು ಒಳಮೀಸಲಾತಿ ತಂಟೆಗೆ ಹೋಗಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ವಿವಾದಿತ ಒಳ ಮೀಸಲಾತಿ ಜಾರಿ ಬಗ್ಗೆ ಸಂಪುಟದಲ್ಲಿ ತೀರ್ಮಾನ ತಗೆದುಕೊಂಡು ವಿಧಾನಸಭೆ ಚುನಾವಣೆಗೆ ಮತ ಬ್ಯಾಂಕ್​ನ್ನು ಗಟ್ಟಿಪಡಿಸಿಕೊಂಡಿದೆ.

ಎಸ್ಸಿ ಜನಾಂಗಕ್ಕೆ ಒಳ ಮೀಸಲಾತಿಯನ್ನು ಘೋಷಣೆ ಮಾಡಿ ಪರಿಶಿಷ್ಟ ಜಾತಿಯ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ಮೀಸಲಾತಿ ಪ್ರಮಾಣ ನಿಗದಿಪಡಿಸಿದೆ. ಇದರ ಜೊತೆಗೆ ಮುಸ್ಲಿಂ ಸಮುದಾಯದ ಶೇ.4ರ ಒಬಿಸಿ ಮೀಸಲಾತಿಯನ್ನು ರದ್ದುಪಡಿಸಿ ಅವರನ್ನು ಆರ್ಥಿಕ ಹಿಂದುಳಿದ ವರ್ಗದಡಿ ಸೇರಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೀಸಲಾತಿ ಹೆಚ್ಚಳ ಹಾಗೂ ಮೀಸಲಾತಿ ಪ್ರಮಾಣವನ್ನು ಮರು ಹೊಂದಾಣಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಎಲ್ಲ ವರ್ಗದ ಸಮುದಾಯಗಳ ಜನರನ್ನು ತಲುಪಿ ಜನರನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮೀಸಲಾತಿ ಹೆಚ್ಚಳದ ಗಿಫ್ಟ್​ನ ದಾಳವಾಗಿ ಉರುಳಿಸಿದ್ದಾರೆ. ವಿಧಾನಸಭೆ ಚುನಾವಣೆ ಅಖಾಡದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಉಚಿತ ಕೊಡುಗೆಗಳ ಗ್ಯಾರಂಟಿ ಯೋಜನೆಗಳಿಗೆ ಮರಳಾಗುವರಾ...? ಅಥವಾ ಬಿಜೆಪಿ ಪಕ್ಷದ ಮೀಸಲಾತಿ ಹೆಚ್ಚಳದ ಕೊಡುಗೆಗೆ ಫಿದಾ ಆಗುವರಾ..? ಎನ್ನುವುದು ಮೇ ತಿಂಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : ವರುಣಾದಿಂದ ಸ್ಪರ್ಧಿಸುವಂತೆ ನಮ್ಮ ಮನೆಯಲ್ಲಿ ಸಲಹೆ ನೀಡಿದ್ದಾರೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.