ETV Bharat / state

ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಸಮವಸ್ತ್ರ' ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ

author img

By

Published : Jan 18, 2023, 1:01 PM IST

ಮೂರು ತಿಂಗಳ ಹಿಂದೆ ವಿಡಿಯೋ ಕಾನ್ಫರೆನ್ಸ್​ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಗೃಹ ಸಚಿವರುಗಳ ಮುಂದೆ ಒಂದು ದೇಶ ಒಂದು ಸಮವಸ್ತ್ರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದರು.

Vidhana Soudha
ವಿಧಾನಸೌಧ

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳ ಪೊಲೀಸ್‌ ಸಿಬ್ಬಂದಿಯ ಸಮವಸ್ತ್ರಗಳು ಒಂದೇ ರೀತಿಯಾಗಿ ಇರಬೇಕು ಎಂದು ಕೇಂದ್ರದ ಗೃಹ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ. 'ವನ್ ನೇಷನ್ ವನ್ ಯೂನಿಫಾರ್ಮ್’ ಹೆಸರಿನಲ್ಲಿ ಸಿದ್ಧಪಡಿಸಿರುವ ಈ ಪ್ರಸ್ತಾವನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ.

ವನ್ ನೇಷನ್ ವನ್ ಯೂನಿಫಾರ್ಮ್ ಎಂಬ ಯೋಜನೆ ಜಾರಿಗೊಳಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿ ಸೂಚಿಸಿರುವುದರಿಂದ, ಕರ್ನಾಟಕ ಪೊಲೀಸ್‌ ಇಲಾಖೆಯ ಸಿಬ್ಬಂದಿ ಸಮವಸ್ತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಎಲ್ಲಾ ರಾಜ್ಯಗಳಲ್ಲಿ ಒಂದೇ ಮಾದರಿಯ ಯೂನಿಫಾರ್ಮ್ ಜಾರಿಗೆ ಎಷ್ಟು ರಾಜ್ಯಗಳು ಅಂತಿಮವಾಗಿ ಒಪ್ಪಿಗೆ ಸೂಚಿಸುತ್ತವೆ ಎಂಬುದರ ಆಧಾರದ ಮೇಲೆ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪೊಲೀಸರಿಗೆ ಒಂದು ದೇಶ ಒಂದು ಸಮವಸ್ತ್ರ ಪ್ರಸ್ತಾವನೆಯನ್ನು ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿಯೇ ಕೇಂದ್ರ ಸರ್ಕಾರ ಸಿದ್ಧಪಡಿಸಿತ್ತು. ಈ ಪ್ರಸ್ತಾವನೆ ರಾಜ್ಯದಲ್ಲಿ ಡಿಸೆಂಬರ್‌ ತಿಂಗಳು ಲಭ್ಯವಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಕೆಲವು ದಿನಗಳಲ್ಲಿ ಅಧಿಕೃತ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರ ತಲುಪಲಿದೆ. ನಂತರ, ಪ್ರಸ್ತಾವನೆಯಲ್ಲಿ ಸೂಚಿಸಲಾಗಿದ್ದ ಸಮವಸ್ತ್ರಗಳು ಜಾರಿಗೆ ಬರಬಹುದು.

ದೇಶಾದ್ಯಂತ ಪೊಲೀಸ್‌ ಸಮವಸ್ತ್ರ ಎಂದರೆ ಖಾಕಿ ಬಟ್ಟೆಯೇ ಇದೆ. ಆದರೆ, ಬೆಲ್ಟ್‌, ಟೊಪ್ಪಿ, ಹುದ್ದೆಗೆ ತಕ್ಕಂತೆ ಶೂಗಳ ಬಣ್ಣಗಳು ಬದಲಾಗುತ್ತದೆ. ಆಯಾ ರಾಜ್ಯಗಳ ಬ್ಯಾಡ್ಜ್‌ಗಳು ಬದಲಾಗುತ್ತವೆ. ಜೊತೆಗೆ, ಪೊಲೀಸ್‌ ಕಾನ್ಸ್‌ಸ್ಟೆಬಲ್‌, ರಿಸರ್ವ್‌ ಪೊಲೀಸ್‌, ಹೆಡ್‌ ಕಾನ್‌ಸ್ಟೆಬಲ್, ಎಎಸ್‌ಐ, ಪಿಎಸ್‌ಐ, ಸಿಪಿಐ, ಎಸ್‌ಪಿ, ಎಡಿಜಿಪಿ, ಡಿಜಿಪಿ ಹುದ್ದೆಗಳಿಗೆ ತಕ್ಕಂತೆ ಸ್ಟಾರ್‌ಗಳು, ಲಾಂಛನ ಬದಲಾಗಲಿದೆ.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಪರಿಕಲ್ಪನೆ ಪ್ರಸ್ತಾಪಿಸಿದ್ದ ಮೋದಿ: ದೇಶದಲ್ಲಿ ಏಕರೂಪದ ವ್ಯವಸ್ಥೆ ಇರಬೇಕು ಎನ್ನುವ ಆಶಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒಂದು ಶ್ರೇಣಿ, ಒಂದು ಪಿಂಚಣಿ, ಒಂದು ರಾಷ್ಟ್ರ, ಏಕರೂಪದ ಶಿಕ್ಷಣ, ಒಂದು ಪಡಿತರ ಚೀಟಿ, ಏಕರೂಪ ನಾಗರಿಕ ಸಂಹಿತೆಯಂತಹ ಏಕರೂಪದ ಕಲ್ಪನೆಗಳನ್ನು ಪ್ರಸ್ತಾಪಿಸಿದ್ದರು. ಈ ರೀತಿಯ ಯೋಜನೆಗಳಂತೆಯೇ ಕಳೆದ ಅಕ್ಟೋಬರ್​ನಲ್ಲಿ ರಾಜ್ಯ ಸರ್ಕಾರಗಳ ಗೃಹ ಸಚಿವರಿಗೆ ಹರಿಯಾಣದಲ್ಲಿ ಆಯೋಜಿಸಿದ್ದ ಚಿಂತನ ಶಿಬಿರವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪ್ರಧಾನಿ ಮೋದಿ ಪೊಲೀಸರು ಧರಿಸುವ ಸಮವಸ್ತ್ರಗಳಲ್ಲಿಯೂ ಏಕರೂಪ ಕಲ್ಪನೆ ತರುವ ಪ್ರಸ್ತಾವನೆಯನ್ನು ಎಲ್ಲಾ ರಾಜ್ಯಗಳ ಮುಂದಿಟ್ಟಿದ್ದರು. ಪೊಲೀಸರಿಗೆ 'ಒಂದು ದೇಶ, ಒಂದು ಸಮವಸ್ತ್ರ' ಪರಿಕಲ್ಪನೆಯನ್ನು ವಿವರಿಸಿದ್ದರು. ಈ ಪ್ರಸ್ತಾವನೆಯನ್ನು ಕೇವಲ ಸಲಹೆಯಂತೆ ಪರಿಗಣಿಸಬೇಕು. ಇದೊಂದು ಪರಿಕಲ್ಪನೆ ಅಷ್ಟೇ ಆಗಿದ್ದು, ಹೇರಿಕೆ ಅಲ್ಲ ಎಂದು ಆ ದಿನವೇ ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೇ ಈ ಪರಿಕಲ್ಪನೆ ಹೆಚ್ಚಿನ ರಾಜ್ಯಗಳು ಸಮ್ಮತಿ ಸೂಚಿಸಿದರಷ್ಟೇ ಅದು ಜಾರಿಯಾಗುತ್ತದೆ ಎನ್ನುವುದನ್ನೂ ಹೇಳಿದ್ದರು.

ಇದರ ಹೆಸರೇ ಹೇಳುವಂತೆ ಇದು ದೇಶದ ಎಲ್ಲಾ ರಾಜ್ಯಗಳ ಪೊಲೀಸ್​ ಇಲಾಖೆಗಳಲ್ಲಿ ಒಂದೇ ರೀತಿಯ ಸಮವಸ್ತ್ರವನ್ನು ಜಾರಿಗೆ ತರುವುದು. ಸದ್ಯ ಎಲ್ಲಾ ರಾಜ್ಯಗಳಲ್ಲಿ ಪೊಲೀಸ್​ ಇಲಾಖೆಯ ಬೇರೆ ಬೇರೆ ವಿಭಾಗಗಳಲ್ಲಿ ಪ್ರತ್ಯೇಕ ಸಮವಸ್ತ್ರಗಳು ಜಾರಿಯಲ್ಲಿವೆ. ಕೆಲವು ರಾಜ್ಯಗಳಲ್ಲಿ ಖಾಕಿ ಬಟ್ಟೆ ಧರಿದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಬಿಳಿ ಸಮವಸ್ತ್ರ ಧರಿಸುತ್ತಾರೆ. ಅದಲ್ಲದೆ ಟೋಪಿ, ಬೆಲ್ಟ್​​ ಬಣ್ಣಗಳಲ್ಲೂ ವ್ಯತ್ಯಾಸವಿದೆ. ಈ ಒಂದು ದೇಶ ಒಂದು ಸಮವಸ್ತ್ರ ಪರಿಕಲ್ಪನೆ ಬಹುತೇಕ ರಾಜ್ಯಗಳಿಗೆ ಒಪ್ಪಿಗೆಯಾದರೆ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್​ ಇಲಾಖೆಯ ಸಿಬ್ಬಂದಿ ಒಂದೇ ರೀತಿಯ ಸಮವಸ್ತ್ರ ಧರಿಸುವಂತಾಗುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಚಿಂತನೆ: ಸಿಎಂ ಬೊಮ್ಮಾಯಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.