ಬೆಂಗಳೂರು : ರಾಜ್ಯಪಾಲರು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಸರ್ಕಾರ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಕುರ್ಚಿಗೆ ಕಚ್ಚಾಟ ನಡೀತಿದೆ. ಆಡಳಿತ ಕುಸಿದಿದೆ, ಲೀಡರ್ ಇಲ್ಲ, ಸರ್ಕಾರ ಇಲ್ಲ, ರಾಜ್ಯ ದಿವಾಳಿ ಆಗಿದೆ. ಭ್ರಷ್ಟಾಚಾರ ವ್ಯಾಪಕ ಆಗಿದೆ ಅಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ. ರಾಜ್ಯಾದ್ಯಂತ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಅಂತ ಅವರ ಪಕ್ಷದವರೇ ಹೇಳಿದ್ದಾರೆ ಎಂದು ಕಿಡಿ ಕಾರಿದರು.
ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಲಿ, ಬೆಲ್ಲದ್ ಬಹಿರಂಗವಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ, ಆ ಬಗ್ಗೆ ಮಾತನಾಡಲ್ಲ ಎಂದರು. ಬಿಜೆಪಿ ಶಾಸಕ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಲ್ಲದ್ ಬಹಿರಂಗವಾಗಿಯೇ ಹೇಳಿದ್ದಾರೆ. ಈಗ ಅದು ಸಾರ್ವಜನಿಕವಾಗಿ ಚರ್ಚೆಯಾಗ್ತಿದೆ ಎಂದರು.
ಅವರು ಆಡಳಿತ ಪಕ್ಷದ ಪಾರ್ಟಿಯಲ್ಲೇ ಇದ್ದಾರೆ. ನಮ್ಮ ಸಿಎಲ್ಪಿ ನಾಯಕರು ತನಿಖೆಗೆ ಒತ್ತಾಯಿಸಿದ್ದಾರೆ. ಬೆಲ್ಲದ್ ಅವರು ಆಡಳಿತ ಪಕ್ಷದಲ್ಲಿದ್ದಾರೆ. ಈ ಬಗ್ಗೆ ಬೆಲ್ಲದ್ ಅವರು ವರಿಷ್ಠರ ಗಮನಕ್ಕೆ ತರಬೇಕು, ಅರುಣ್ ಸಿಂಗ್ ಗಮನಕ್ಕೂ ತರಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ: ಸಿಎಂ ಯಡಿಯೂರಪ್ಪ