ಬೆಂಗಳೂರು : ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ಮೀಸಲಾತಿ ಪಟ್ಟಿಯನ್ನು ಕೊನೆಗೂ ರಾಜ್ಯ ಸರ್ಕಾರ ಪ್ರಕಟಿಸಿದೆ. ಬಿಬಿಎಂಪಿಯ 243 ವಾರ್ಡ್ ಗಳಿಗೂ ಮೀಸಲಾತಿ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ ಮಾಡಬೇಕೆಂದು ಸುಪ್ರೀಂಕೋರ್ಟ್ ಒಂದು ವಾರಗಳ ಗಡುವು ನೀಡಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇದರಿಂದ ಎಚ್ಚೆತ್ತ ಸರ್ಕಾರ ಇಂದು ಮೀಸಲಾತಿ ಪಟ್ಟಿ ಪ್ರಕಟಣೆ ಮಾಡಿದೆ. ಇತ್ತೀಚೆಗೆ ಬಿಬಿಎಂಪಿ 243 ವಾರ್ಡ್ ಗಳ ಡಿಲಿಮಿಟೇಷನ್ ಕೂಡ ಮಾಡಲಾಗಿತ್ತು.ಓದಿ : ಲಂಚ ಪ್ರಕರಣ: ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ ತಿರಸ್ಕಾರ