ETV Bharat / state

ಬಜೆಟ್​​​ನಲ್ಲಿ ವಿವಿಧ ವಸ್ತುಗಳ ತೆರಿಗೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ

ಮಾರ್ಚ್‌ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021-22 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ಇಲಾಖಾವಾರು ಸಭೆಗಳನ್ನು ಮುಖ್ಯಮಂತ್ರಿಗಳು ನಡೆಸುತ್ತಿದ್ದಾರೆ.

CM Yadiyurappa
ಬಜೆಟ್​​​ನಲ್ಲಿ ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ
author img

By

Published : Feb 13, 2021, 5:42 PM IST

ಬೆಂಗಳೂರು: ಕೋವಿಡ್​​ನಿಂದಾಗಿ ಈ ಬಾರಿ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗದ ಕಾರಣ ಈ ಬಜೆಟ್​​ನಲ್ಲಿ ತೆರಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

ಮಾರ್ಚ್‌ ತಿಂಗಳಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021-22 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ಇಲಾಖಾವಾರು ಸಭೆಗಳನ್ನು ಮುಖ್ಯಮಂತ್ರಿಗಳು ನಡೆಸುತ್ತಿದ್ದಾರೆ.

ಆದಾಯ ತರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಪ್ರಸ್ತಾಪ:

ಕಳೆದ ವರ್ಷ ಸರ್ಕಾರ ಇರಿಸಿಕೊಂಡಿದ್ದ ತೆರಿಗೆ ಸಂಗ್ರಹಣೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ತೆರಿಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಮುಖ್ಯವಾಗಿ ಮದ್ಯ, ಸಿಗರೇಟು, ಕಬ್ಬಿಣ, ಸಿಮೆಂಟ್, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸೇರಿದಂತೆ ಬೊಕ್ಕಸಕ್ಕೆ ಆದಾಯ ತರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಬೇಕೆಂಬ ಪ್ರಸ್ತಾಪ ವ್ಯಕ್ತವಾಗಿದೆ. ಖುದ್ದು ಹಣಕಾಸು ಇಲಾಖೆ ಅಧಿಕಾರಿಗಳೆ ತೆರಿಗೆ ಹೆಚ್ಚಳ ಮಾಡದಿದ್ದರೆ ಈ ವರ್ಷ ಆರ್ಥಿಕ ನಿರ್ವಹಣೆ ಕಷ್ಟವಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಬೊಕ್ಕಸ ತುಂಬಿಸಲು ಸರ್ಕಾರ ಹರಸಾಹಸ:

ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ವಿಭಾಗದಿಂದ 7,459.29 ಕೋಟಿ ರೂ, ಅಬಕಾರಿ ಇಲಾಖೆಯಿಂದ 2436.34 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕದಿಂದ 1150 ಕೋಟಿ ರೂ. ಹಾಗೂ ಸಾರಿಗೆ ಇಲಾಖೆಯಿಂದ 533 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದಲೆ ರಾಜ್ಯದಲ್ಲಿ ಲಾಕ್​​ಡೌನ್ ಜಾರಿಯಾದ ಪರಿಣಾಮ ಸುಮಾರು 4 ರಿಂದ 6 ತಿಂಗಳು ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅದರಲ್ಲೂ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುತ್ತಿದ್ದ ಇಲಾಖೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡ ಕಾರಣ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿತಗೊಂಡಿತ್ತು. ಇದೀಗ ಬೊಕ್ಕಸವನ್ನು ಸರಿದೂಗಿಸಲು ಸರ್ಕಾರ ಸಾಕಷ್ಟು ಹರಸಾಹಸ ನಡೆಸುತ್ತಿದೆ.

ಹಲವು ಇಲಾಖೆಗಳ ವೆಚ್ಚ ಕಡಿತ ತೀರ್ಮಾನ:

ಇತ್ತೀಚೆಗಷ್ಟೇ ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ದರವನ್ನು ಹೆಚ್ಚಳ ಮಾಡಿತ್ತು. ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ಕಡಿಮೆಯಾಗಿದೆ. ಈ ಕಾರಣದಿಂದಾಗಿ ಕರ್ನಾಟಕಕ್ಕೆ 8,887 ಕೋಟಿ ರೂ. ಕಡಿತವಾಗಿವೆ ಎಂದು ಸರ್ಕಾರ ಲೆಕ್ಕ ಕೊಟ್ಟಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆ ಪಾಲು ಕಡಿತವಾಗಿರುವುದರಿಂದ ರಾಜ್ಯದ ಸ್ವ ಸಂಪನ್ಮೂಲ ಕೂಡಾ ಇಳಿಕೆಯಾಗಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಜಿಎಸ್‍ಟಿ ಪರಿಹಾರ ಉಪಕರ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಣೆಯಾಗಿಲ್ಲ. ಹೀಗಾಗಿ ಅಲ್ಲಿಯೂ ಕೂಡಾ 3 ಸಾವಿರ ಕೋಟಿ ರೂ. ಆದಾಯ ಕಡಿತವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದ ಆದಾಯ ಕಡಿತವಾಗಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ನಿಯಮದಡಿ ಕಾರ್ಯ ನಿರ್ವಹಿಸಬೇಕಾದ ಹಿನ್ನೆಲೆಯಲ್ಲಿ ಹಲವು ಇಲಾಖೆಗಳ ವೆಚ್ಚ ಕಡಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ರಾಜ್ಯದ ತೆರಿಗೆ ಆದಾಯಕ್ಕೆ ಕೊಕ್ಕೆ:

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಕೂಡಾ ಮುಂದಿನ ವರ್ಷ ಇನ್ನಷ್ಟು ಕಡಿಮೆಯಾಗಲಿದೆ. 14ನೇ ಹಣಕಾಸು ಆಯೋಗ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಶೇ 4.71ಕ್ಕೆ ನಿಗದಿ ಪಡಿಸಿತ್ತು. ಆದರೆ ಇದೀಗ 15ನೇ ಹಣಕಾಸು ಆಯೋಗ ತನ್ನ ವರದಿಯಲ್ಲಿ ರಾಜ್ಯದ ಪಾಲನ್ನು ಶೇ 3.64ಕ್ಕೆ ಇಳಿಕೆ ಮಾಡಿದೆ. ಹೀಗಾಗಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 11,215 ಕೋಟಿ ರೂ. ಕಡಿಮೆಯಾಗಲಿದೆ. ಬಡ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವ ಕಾರಣ ರಾಜ್ಯದ ತೆರಿಗೆ ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಇನ್ನೊಂದೆಡೆ ಸರ್ಕಾರಿ ನೌಕರರ ವೇತನ, ಪಿಂಚಣಿ, ಸರ್ಕಾರಿ ಸಾಲದ ಮೇಲಿನ ಬಡ್ಡಿ ಮೊತ್ತಗಳೆಲ್ಲವೂ ಏರಿಕೆ ಕಂಡಿದೆ. ಸರ್ಕಾರಕ್ಕೆ 10,000 ಕೋಟಿ ರೂ. ಹೆಚ್ಚಿನ ಹೊರೆ ಬಿದ್ದಿದೆ. ವೆಚ್ಚಗಳ ಹೆಚ್ಚಳಕ್ಕೆ ಹೋಲಿಸಿದರೆ ಅಷ್ಟು ಪ್ರಮಾಣದಲ್ಲಿ ಆದಾಯ ಏರಿಕೆ ಕಂಡಿಲ್ಲ. ಆದಾಯ ಸಂಗ್ರಹ 1,19,847 ಕೋಟಿ ರೂ ತಲುಪಿದೆ. ಇದರಲ್ಲಿ ಸಿಜಿಎಸ್​​ಟಿ 21,923 ಕೋಟಿ ರೂ, ಎಸ್​ಜಿಎಸ್​​ಟಿ 29,014 ಕೋಟಿ ರೂ, ಐಜಿಎಸ್​​ಟಿ 60,923 ಕೋಟಿ ರೂ. ವಸ್ತುಗಳ ಆಮದು ವಲಯದಿಂದ 27,424 ಕೋಟಿ ರೂ. ಸೇರಿ ಮತ್ತು 8,622 ಕೋಟಿ ರೂ. ಸೆಸ್ ವಸ್ತುಗಳ ಆಮದು ವಲಯದಲ್ಲಿ 883 ಕೋಟಿ ರೂ. ಸೇರಿ ರೂಪದಲ್ಲಿ ಸಂಗ್ರಹವಾಗಿದೆ.

ಸರ್ಕಾರ 24,531 ಕೋಟಿ ರೂ ಸಿಜಿಎಸ್​​ಟಿ ಮತ್ತು ಐಜಿಎಸ್​​ಟಿಯಿಂದ ಎಸ್​ಜಿಎಸ್​​ಟಿ ಮೂಲಕ 19,371 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪಾವತಿಸಿದೆ. 2021 ರ ಜನವರಿ ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಿಯಮಿತ ಪಾವತಿಯ ನಂತರ ಸಿಜಿಎಸ್​​ಟಿಯಲ್ಲಿ 46,454 ಕೋಟಿ ರೂ.. ಮತ್ತು ಎಸ್​ಜಿಎಸ್​ಟಿ ಮೂಲಕ 48,385 ಕೋಟಿ ರೂ. ಆದಾಯ ಬಂದಿದೆ. ಕಳೆದ ಐದು ತಿಂಗಳಿಂದ ಜಿಎಸ್​​ಟಿಯಲ್ಲಿ ಆದಾಯ ಏರಿಕೆಯಾಗುತ್ತಿದ್ದು, ಇದಕ್ಕೂ ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ 8 ರಷ್ಟು ಪ್ರಗತಿಯಾಗಿತ್ತು. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಸರಕುಗಳ ಆಮದು ವಲಯದಲ್ಲಿ ಶೇ16 ರಷ್ಟು ಪ್ರಗತಿಯಾಗಿತ್ತು ಮತ್ತು ದೇಶೀಯ ವಹಿವಾಟಿನಲ್ಲಿ ಸೇವೆಗಳ ಆಮದು ವಲಯದಿಂದ ಶೇ 6 ರಷ್ಟು ಬೆಳವಣಿಗೆಯಾಗಿತ್ತು. ಜಿಎಸ್​​ಟಿ ಬಂದ ನಂತರದಿಂದ ಇದುವರೆಗೆ ಹೋಲಿಸಿದರೆ 2021 ರ ಜನವರಿಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಆದಾಯ ಹರಿದು ಬಂದಿದ್ದು, ಬಹುತೇಕ 1.2 ಲಕ್ಷ ಕೋಟಿ ರೂ. ಗೆ ತಲುಪಿದೆ. ಕಳೆದ ತಿಂಗಳು 1.15 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.

ಜನಸಾಮಾನ್ಯರ ಮೇಲೆ ಹೊರೆ ಎಳೆಯಲು ಸರ್ಕಾರ ಸಿದ್ಧತೆ :

ಕಳೆದ ನಾಲ್ಕು ತಿಂಗಳಿಂದ ಆದಾಯ ಒಂದು ಲಕ್ಷ ಕೋಟಿ ರೂ. ದಾಟುತ್ತಿದೆ. ಬೆಳವಣಿಗೆಯಾಗುತ್ತಿರುವ ಜಿಎಸ್​​ಟಿ ಟ್ರೆಂಡ್ ಗಮನಿಸಿದರೆ ಈ ಸಾಲಿನ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕಕ್ಕೆ ಹೋಲಿಸಿದರೆ ಎರಡನೇ ಅರ್ಧವಾರ್ಷಿಕದ ಮೊದಲ ನಾಲ್ಕು ತಿಂಗಳಲ್ಲಿ ಶೇ 8 ರಷ್ಟು ಬೆಳವಣಿಗೆಯಾಗಿದ್ದು, ಇದಕ್ಕೂ ಹಿಂದಿನ ಆಯವ್ಯಯದಲ್ಲಿ ಶೇ 24 ರಷ್ಟಿತ್ತು. ಒಂದೆಡೆ ಆಶಾದಾಯಕ ತೆರಿಗೆ ಸಂಗ್ರಹವಾಗಿದ್ದರೂ, ತೆರಿಗೆಯನ್ನು ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಹೊರೆಯ ಬರೆ ಎಳೆಯಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.