ಬೆಂಗಳೂರು : ಕೊರೊನಾ ಸೋಂಕಿನ ನಡುವೆಯೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ನ್ಯಾಯಾಲಯಗಳು ಆಗಸ್ಟ್ ತಿಂಗಳಲ್ಲಿ 16 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶಿಸಿವೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಮಾಹಿತಿ ನೀಡಿದ್ದಾರೆ. ಅದರಂತೆ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಆಗಸ್ಟ್ 1ರಿಂದ 28ರವರೆಗೆ ಒಟ್ಟು 16,302 ಪ್ರಕರಣ ಇತ್ಯರ್ಥಪಡಿಸಿವೆ.
ಈ ಅವಧಿಯಲ್ಲಿ ಹೈಕೋರ್ಟ್ 12,989 ಪ್ರಕರಣಗಳನ್ನು ವಿಚಾರಣೆ ನಡೆಸಿ 2417 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದರೆ, ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು 18,645 ಪ್ರಕರಣಗಳನ್ನು ವಿಚಾರಣೆ ನಡೆಸಿ 13,885 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ.
ಇನ್ನು, ಈ ಒಂದು ತಿಂಗಳ ನಡುವೆ ಹೈಕೋರ್ಟ್‌ನಲ್ಲಿ 4,060 ಪ್ರಕರಣ ದಾಖಲಾಗಿದ್ದರೆ, ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ 36,197 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.