ETV Bharat / state

ಮೋತಿಲಾಲ್ ವೋಹ್ರಾ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಸಂತಾಪ - State Congress leaders condole

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮೋತಿಲಾಲ್​ ವೋಹ್ರಾ (93) ವಯೋ ಸಹಜ ಖಾಯಲೆಯಿಂದಾಗಿ ದೆಹಲಿಯಲ್ಲಿ ಮೃತಪಟ್ಟಿದ್ದು ರಾಜ್ಯ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

State Congress leaders condole death of Congress veteran Motilal Vora
ಮೋತಿಲಾಲ್ ವೋಹ್ರಾ ನಿಧನ
author img

By

Published : Dec 22, 2020, 2:32 AM IST

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋಹ್ರಾ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

  • Deeply saddened by the demise of Shri. Motilal Vora who was one of our seniormost and dedicated leader of the Congress Party.

    His contribution to the party as well as the nation and his steadfast loyalty is an inspiration to us all. Condolences to his family. pic.twitter.com/WYkkSMWmh7

    — DK Shivakumar (@DKShivakumar) December 21, 2020 " class="align-text-top noRightClick twitterSection" data=" ">

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ನಾಯಕರಾದ ಮೋತಿಲಾಲ್ ವೋಹ್ರಾ ಅವರ ನಿಧನ ಸುದ್ದಿ ತೀವ್ರ ಆಘಾತ ತಂದಿದೆ. ನಮ್ಮ ಹಿರಿಯ ಮತ್ತು ಕಾಂಗ್ರೆಸ್ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಪಕ್ಷಕ್ಕೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಅವರು ನೀಡಿದ ಕೊಡುಗೆ ಮತ್ತು ಅವರ ಅಚಲ ನಿಷ್ಠೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.

State Congress leaders condole death of Congress veteran Motilal Vora
ಮಲ್ಲಿಕಾರ್ಜುನ ಖರ್ಗೆ ಟ್ವೀಟ್​​

ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತಮ್ಮ ಟ್ವೀಟ್​​ನಲ್ಲಿ, ಹಿರಿಯ ಕಾಂಗ್ರೆಸ್ಸಿಗ ಮೋತಿಲಾಲ್ ವೊಹ್ರಾ ಅವರ ನಿಧನದಿಂದ ತೀವ್ರ ದುಃಖಿತವಾಗಿದೆ. ಅವರು ಶಕ್ತಿಯ ಆಧಾರಸ್ತಂಭವಾಗಿದ್ದರು ಮತ್ತು ಅವರ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಬಲಪಡಿಸುವ ಅವರ ನಿರಂತರ ಪ್ರಯತ್ನವು ರಾಷ್ಟ್ರೀಯ ಕಾಂಗ್ರೆಸ್​​ನಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ದುಃಖಿತ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.

ಜಿ ಪರಮೇಶ್ವರ್ ಟ್ವೀಟ್​

ಮಾಜಿ ಡಿಸಿಎಂ ಜಿ ಪರಮೇಶ್ವರ್ ತಮ್ಮ ಟ್ವೀಟ್​ನಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಕ್ಯಾಬಿನೆಟ್ ಸಚಿವ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ಮೋತಿಲಾಲ್ ವೊಹ್ರಾ ನಿಧನ ಆಘಾತ ತಂದಿದೆ. ಒಬ್ಬ ನಿಪುಣ ಮತ್ತು ನಿಷ್ಣಾತ ನಾಯಕರಾಗಿದ್ದ ಅವರು ತಮ್ಮ ಕಾರ್ಯಗಳ ಮೂಲಕವೇ ಅಪಾರ ಗೌರವವನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ನ ಹಿರಿಯ ನಾಯಕ ಮೋತಿ ಲಾಲ್ ವೋರಾ ಇನ್ನಿಲ್ಲ: ಮೋದಿ, ರಾಹುಲ್ ಸಂತಾಪ

ಸಂಸದ ಡಿಕೆ ಸುರೇಶ್ ಟ್ವೀಟ್ ಮಾಡಿದ್ದು, ನಮ್ಮ ಅನುಭವಿ ನಾಯಕ ಮೋತಿಲಾಲ್ ವೊಹ್ರಾ ಅವರ ನಿಧನ ಸುದ್ದಿ ಕೇಳಿ ಬೇಸರವಾಯಿತು. ಕಾಂಗ್ರೆಸ್ ಪಕ್ಷದ ಪ್ರಮುಖ ರಾಜಕೀಯ ಪಟು, ಎಂಪಿಸಿಸಿ ಅಧ್ಯಕ್ಷರಾಗಿ, ಮಧ್ಯಪ್ರದೇಶದ ಸಿಎಂ, ಕೇಂದ್ರ ಸಚಿವರಾಗಿ, ಎಐಸಿಸಿಯ ಖಜಾಂಚಿಯಾಗಿ ಅನೇಕ ಸ್ಥಾನಗಳನ್ನು ಅಲಂಕರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು ಮತ್ತು ಸಾರ್ಥಕ ಸೇವೆ ಸಲ್ಲಿಸಿದ್ದರು. ಕೊನೆಯವರೆಗೂ ನಿಜವಾದ ನಿಷ್ಠಾವಂತ, ಅವನ ನಾಯಕತ್ವ, ಸಂಘಟನೆ ಮತ್ತು ಆಡಳಿತ ಕೌಶಲ್ಯಗಳು ವ್ಯಕ್ತಪಡಿಸಿದ್ದ ಇವರನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರ ಆತ್ಮಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದಿದ್ದಾರೆ.

ಶಾಸಕ ಸೌಮ್ಯ ರೆಡ್ಡಿ ಟ್ವೀಟ್

ಶಾಸಕ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದು, ಹಿರಿಯ ಕಾಂಗ್ರೆಸ್​ ಮುಖಂಡರು ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮೋತಿಲಾಲ್​ ವೋಹ್ರಾ ಅವರು ನಿಧನರಾದ ಸುದ್ದಿ ಕೇಳಿ ಅತೀವ ದುಃಖವುಂಟಾಯಿತು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬ ವರ್ಗದವರಿಗೆ ಮತ್ತು ಸಹಸ್ರಾರು ಅಭಿಮಾನಿಗಳಿಗೆ ಈ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇವರು ಮಾತ್ರವಲ್ಲದೆ ಇನ್ನೂ ಅನೇಕ ಕಾಂಗ್ರೆಸ್ ನಾಯಕರು ಮೋತಿಲಾಲ್ ವೊಹ್ರಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.