ETV Bharat / state

ಶಿಕ್ಷಕರ ವರ್ಗಾವಣೆ : ದಿವ್ಯಾಂಗರಿಗೆ ವಿನಾಯಿತಿ ನೀಡಲು ಮುಂದಾದ ರಾಜ್ಯ ಸರ್ಕಾರ..

ಶಿಕ್ಷಕರ ವರ್ಗಾವಣೆಯಲ್ಲಿರುವ ಕಠಿಣ ನಿಯಮಾವಳಿಗಳಿಂದ ದಿವ್ಯಾಂಗರಿಗೆ, 50 ವರ್ಷ ದಾಟಿದ ಶಿಕ್ಷಕಿಯರು, 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಕಾನೂನು ತಿದ್ದುಪಡಿಗೆ ಮುಂದಾಗಿದೆ.

ಸುರೇಶ್‍ ಕುಮಾರ್
ಸುರೇಶ್‍ ಕುಮಾರ್
author img

By

Published : Mar 10, 2020, 8:11 PM IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ ಕುಮಾರ್ ಅವರು ವಿಧಾನಸಭೆಯಲ್ಲಿ ಇಂದು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020ರ ಮಸೂದೆಯನ್ನು ಮಂಡಿಸಿದರು.

ಈ ಮಸೂದೆಯ ಮೂಲಕ 2007ರ ಅಧಿನಿಯಮದಲ್ಲಿದ್ದ ಕಠಿಣ ಷರತ್ತುಗಳಿಗೆ ವಿನಾಯ್ತಿ ನೀಡಲಾಗಿದೆ. ಒಂದು ಶಾಲೆಯಲ್ಲಿ ಮೂರು ವರ್ಷಗಳ ಕನಿಷ್ಠ ಸೇವಾವಧಿ ಪೂರೈಸಿದವರಿಗೆ ವರ್ಗಾವಣೆಗೆ ಮನವಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಶಿಕ್ಷಕರ ವರ್ಗಾವಣೆಗೆ ಪ್ರೊಟೇಷನ್ ಸಿಸ್ಟಮ್‌ನ ಸಡಿಲಗೊಳಿಸಲಾಗಿದೆ. ಅಂಗವಿಕಲ ವ್ಯಕ್ತಿಗಳು, 50 ವರ್ಷ ದಾಟಿದ ಶಿಕ್ಷಕಿಯರು, 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ವಲಯವಾರು ವರ್ಗಾವಣೆಯಿಂದ ವಿನಾಯ್ತಿ ನೀಡಲಾಗುತ್ತಿದೆ.

ಈ ಮೊದಲಿನ ಕಾನೂನಿನಲ್ಲಿ ನಿವೃತ್ತಿಯ ಕೊನೆಯ ದಿನದವರೆಗೂ ಶಿಕ್ಷಕರನ್ನು ಅಂತರ್ ಜಿಲ್ಲಾ ಮಟ್ಟಕ್ಕೂ ವರ್ಗಾವಣೆ ಮಾಡಲಾಗುತ್ತಿತ್ತು. ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲು ಅವಕಾಶ ಇರಲಿಲ್ಲ. ಕೌನ್ಸಿಲ್ ಮತ್ತು ರೊಟೇಷನ್ ಸಿಸ್ಟಮ್‍ಗಳು ಅತ್ಯಂತ ಕಠಿಣವಾಗಿದ್ದವು. ಅವುಗಳಿಗೆ ವಿನಾಯ್ತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.