ಬೆಂಗಳೂರು : ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸರ್ಕಾರ ಹಾಗೂ ಪಕ್ಷದ ಪಾತ್ರವಿಲ್ಲ ಎಂದು ಇಷ್ಟು ದಿನ ಜಾರಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರೇ, ನೀವು ಹೆಣೆದ ನಾಟಕದ ಸೂತ್ರಧಾರ ಯಾರೆಂಬುದು ಈಗ ಅನಾವರಣವಾಗಿದೆ.
ಧರ್ಮ ವಿಭಜನೆಗೆ ಕೈ ಹಾಕಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ನಿಮ್ಮ ಆಪ್ತ ಎಸ್.ಆರ್. ಪಾಟೀಲ್ ಹೇಳಿಕೆ ನೀಡಿದ್ದಾರೆ, ನಿಮ್ಮ ಉತ್ತರವೇನು? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದೇ ಅರ್ಥದಲ್ಲಿ ಮಾತನಾಡಿದಾಗ ಧರ್ಮ ವಿಭಜನೆಯ ರೂವಾರಿಗಳಾದ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಸಾರ್ವಜನಿಕವಾಗಿಯೇ ರೌದ್ರಾವತಾರ ಪ್ರದರ್ಶನ ಮಾಡಿದ್ದರು.
ಈಗ ಸತ್ಯ ಹೇಳಿದ ಎಸ್.ಆರ್. ಪಾಟೀಲ್ ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ? ಈ ಹಿರಿಯ ಜೀವವನ್ನೂ ರಾಜಕೀಯವಾಗಿ ಮುಗಿಸುತ್ತೀರಾ? ಎಂದು ಬಿಜೆಪಿ ಟ್ವೀಟ್ ಮಾಡಿದೆ.
-
ಎಸ್. ಆರ್. ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ.
— BJP Karnataka (@BJP4Karnataka) December 1, 2021 " class="align-text-top noRightClick twitterSection" data="
ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ.
ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ?#ಉತ್ತರಿಸಿಕಾಂಗ್ರೆಸ್
">ಎಸ್. ಆರ್. ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ.
— BJP Karnataka (@BJP4Karnataka) December 1, 2021
ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ.
ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ?#ಉತ್ತರಿಸಿಕಾಂಗ್ರೆಸ್ಎಸ್. ಆರ್. ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ.
— BJP Karnataka (@BJP4Karnataka) December 1, 2021
ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ.
ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ?#ಉತ್ತರಿಸಿಕಾಂಗ್ರೆಸ್
ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸುವಂತೆ ನನಗೂ ಆಹ್ವಾನ ನೀಡಲಾಗಿತ್ತು. ಆದರೆ, ರಾಜಕೀಯ ಪಕ್ಷಗಳು ಧರ್ಮದ ವಿಚಾರದಲ್ಲಿ ತಲೆ ಹಾಕಬಾರದೆಂಬ ಕಾರಣಕ್ಕೆ ನಾನು ನಿರಾಕರಿಸಿದೆ ಎಂಬ ಎಸ್. ಆರ್. ಪಾಟೀಲ್ ಅವರ ಹೇಳಿಕೆಯಲ್ಲೇ ಸಿದ್ದರಾಮಯ್ಯ ಪಟಾಲಂ ಸಂಚು ಅನಾವರಣಗೊಂಡಿದೆ. ನೀವೇಕೆ ಅಷ್ಟು ಆತುರ ತೋರಿದಿರಿ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದೆ.
ಎಸ್. ಆರ್. ಪಾಟೀಲ್ ಅವರಂತಹ ಹಿರಿಯ ಧರ್ಮಜ್ಞಾನವನ್ನು ಸಕಾಲದಲ್ಲಿ ಬಳಸದ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವನ್ನು ಜನತೆ ಕಿತ್ತೆಸೆದಿದ್ದಾರೆ. ಧರ್ಮ ವಿಭಜನೆ ಎನ್ನುವುದು ಈ ಶತಮಾನ ಕಂಡ ಅತಿದೊಡ್ಡ ಧಾರ್ಮಿಕ ಷಡ್ಯಂತ್ರ. ಸಿದ್ದರಾಮಯ್ಯನವರೇ, ಇದಕ್ಕೆ ನೀವೊಬ್ಬರೇ ನಿರ್ದೇಶಕರೋ ಅಥವಾ ಜನಪಥ್ ರಸ್ತೆಯ ನಿರ್ದೇಶನವೂ ಇತ್ತೋ? ಎಂದು ಟ್ವೀಟ್ ಮೂಲಕ ಕಾಲೆಳೆದಿದೆ.
ಹಿಂದುತ್ವದ ವಿನಾಶಕ್ಕಾಗಿ ಯಾವ ದಾರಿಯನ್ನು ಬೇಕಾದರೂ ಕಾಂಗ್ರೆಸ್ ಹಿಡಿಯುತ್ತದೆ ಎಂಬುದಕ್ಕೆ ಲಿಂಗಾಯತ ಧರ್ಮ ವಿರೋಧಿ ಹೋರಾಟವೇ ಸಾಕ್ಷಿಯಾಗಿದೆ. ಈ ದುಷ್ಪ್ರಯತ್ನ ನಡೆಸಿದ ನಿಮ್ಮನ್ನು ಇತಿಹಾಸ ಎಂದಿಗೂ ಕ್ಷಮಿಸದು.
ಪಾಟೀಲರಂತಹ ಹಿರಿಯರ ಮಾತಿಗೂ ಮನ್ನಣೆ ನೀಡದೆ, ಯಾರಿಗಾಗಿ ಹಠಕ್ಕೆ ಬಿದ್ದು ಧರ್ಮ ಒಡೆಯಲು ಮುಂದಾದಿರಿ? ಎಂದು ಪ್ರಶ್ನಿಸಿ ಉತ್ತರಿಸಿ ಕಾಂಗ್ರೆಸ್ ಹ್ಯಾಷ್ ಟ್ಯಾಗ್‌ನೊಂದಿಗೆ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.