ETV Bharat / state

ಅರುಣ್ ಸಿಂಗ್ ಜೊತೆಗಿನ ಮಾತುಕತೆ ಫಲಪ್ರದ: ಸಮಾಧಾನಗೊಂಡ ರೇಣುಕಾಚಾರ್ಯ - State BJP in-charge Arun Singh talks with Renukacharya

ನನಗೆ ತುಂಬಾ ಬೇಸರ ಆಗಿದ್ದು ನಿಜ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸಮಗ್ರವಾಗಿ ಮಾತುಕತೆ ನಡೆಸಿದ್ದೇನೆ. ಇಂದು ತುಂಬಾ ಫಲಪ್ರದ ಮಾತುಕತೆ ನಡೆದಿದ್ದು, ಅವರ ಭೇಟಿ ಸಮಾಧಾನ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Renukacharya statement on Cabinet expansion
ರೇಣುಕಾಚಾರ್ಯ
author img

By

Published : Jan 13, 2021, 3:54 PM IST

ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ತುಂಬಾ ಫಲಪ್ರದ ಮಾತುಕತೆಯಾಗಿದೆ. ನಾನು ಸಂಪೂರ್ಣ ಸಮಾಧಾನಗೊಂಡಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಕುಮಾರ ಕೃಪ ರಸ್ತೆಯಲ್ಲಿರುವ ಕುಮಾರಕೃಪ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ಬೇಸರ ಆಗಿದ್ದು ನಿಜ. ಅರುಣ್ ಸಿಂಗ್ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಸಮಗ್ರವಾಗಿ ಮಾತುಕತೆ ನಡೆಸಿದ್ದೇನೆ. ತುಂಬಾ ಫಲಪ್ರದ ಮಾತುಕತೆ ನಡೆದಿದ್ದು, ಇವರ ಭೇಟಿ ಸಮಾಧಾನ ತಂದಿದೆ. ಅರುಣ್ ಸಿಂಗ್ ಅವರೊಂದಿಗೆ ನೇರವಾಗಿ ಕುಳಿತು ಸಮಾಲೋಚಿಸಲು ಅವಕಾಶ ಲಭಿಸಿತು. ನಾವು ಕೇವಲ ಮೂರು ಮಂದಿ ಒಟ್ಟಾಗಿ ಕುಳಿತು ಚರ್ಚಿಸಿದ್ದೇವೆ ಎಂದು ಹೇಳಿದರು.

ನನ್ನೆಲ್ಲ ಮಾತುಗಳನ್ನು ಅರುಣ್ ಸಿಂಗ್ ತಾಳ್ಮೆಯಿಂದ ಕೇಳಿಸಿಕೊಂಡಿದ್ದಾರೆ. ನಮ್ಮಲ್ಲಿ ಸಾಕಷ್ಟು ಶಾಸಕರು ಸಚಿವರಾಗಲು ಅರ್ಹರಿದ್ದಾರೆ. ಆದರೆ ನಮಗೆ ಒಂದಿಷ್ಟು ಮಿತಿ ಇರುವ ಹಿನ್ನೆಲೆ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಸೂಕ್ತ ಗೌರವ ಸಿಗುವ ಹಾಗೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದು ಬೆಳಗ್ಗೆಯಿಂದ ನನ್ನಲ್ಲಿದ್ದ ಒಂದಿಷ್ಟು ಗೊಂದಲವನ್ನು ನಿವಾರಿಸಿದೆ ಎಂದರು.

ಇದನ್ನೂ ಓದಿ:ಸಚಿವ ಸ್ಥಾನ ಕೇಳೋದು ನನ್ನ ಹಕ್ಕು, ನನ್ನ ಕರ್ತವ್ಯ ಎಂದು ಬುಸುಗುಟ್ಟಿದ ರೇಣುಕಾಚಾರ್ಯ

ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಕಡೆಯ ಕ್ಷಣದವರೆಗೂ ಅವಕಾಶ ಸಿಗುವ ನಂಬಿಕೆಯಲ್ಲಿದ್ದೆ. ಆದರೆ ಕೈ ತಪ್ಪಿದ್ದರಿಂದ ಬೇಸರವಾಗಿದ್ದು ಸಹಜ. ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿದ ನಂತರ ನನಗೆ ನಿರಾಳತೆ ಲಭಿಸಿದೆ. ಸಮಾಧಾನಗೊಂಡಿದ್ದೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.