ETV Bharat / state

174 ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸಿದೆ ರಾಜ್ಯ ಬಿಜೆಪಿ ಸರ್ಕಾರ: ಅವು ಯಾವವು ಗೊತ್ತಾ? - ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸಿದೆ ರಾಜ್ಯ ಬಿಜೆಪಿ ಸರ್ಕಾರ

ಕರ್ನಾಟಕ ಕಾನೂನು ಆಯೋಗ ತನ್ನ 53ನೇ ವರದಿಯಲ್ಲಿ ಈ ಹಿಂದಿನ ಬೆಳಗಾವಿ, ಕೂರ್ಗ್, ಮಂಗಳೂರು, ಕೊಳ್ಳೆಗಾಲ, ಕಲಬುರಗಿ ಮತ್ತು ಮೈಸೂರು ಪ್ರದೇಶಕ್ಕೆ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಅದೇ ರೀತಿ 2016 ರಿಂದ 2019ರ ವರೆಗೆ ಜಾರಿಗೆ ತರಲಾಗಿದ್ದ 96 ತಿದ್ದುಪಡಿ ಕಾಯ್ದೆಗಳು ಸೇರಿದಂತೆ ಒಟ್ಟು 174 ಕಾಯ್ದೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

State BJP government repeal 174 unnecessary acts
174 ಅನಗತ್ಯ ಕಾಯ್ದೆಗಳನ್ನು ರದ್ದುಗೊಳಿಸಿದೆ ಬಿಜೆಪಿ ಸರ್ಕಾರ
author img

By

Published : Dec 4, 2020, 6:43 AM IST

ಬೆಂಗಳೂರು: ರಾಜ್ಯದಲ್ಲಿ ಹಲವು ಹಳೆಯ ಅನಗತ್ಯ ಕಾನೂನು ಈಗಲೂ ಜಾರಿಯಲ್ಲಿವೆ. ಕಾಲಾಂತರದಲ್ಲಿ ಹಲವು ಕಾನೂನುಗಳು ಹಳೆಯದಾಗಿ ಉಳಿಯುತ್ತವೆ. ಸರ್ಕಾರ ಈವರೆಗೆ ಅಂಥಹ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ.

ನಮ್ಮ ದೇಶದಲ್ಲಿರುವ ಹಲವು ಕಾನೂನುಗಳು ಬ್ರಿಟಿಷರ ಕಾಲದಲ್ಲಿ ರಚನೆಯಾಗಿವೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಈ ಪೈಕಿ ಹಲವು ಕಾನೂನುಗಳು ಕಾಲಾಂತರದಲ್ಲಿ ಬಳಕೆಯಾಗದೇ ಅನಗತ್ಯವಾಗಿ ಜಾರಿಯಲ್ಲಿರುತ್ತವೆ. ಇಂಥ ಹಳೆಯ ಕಾನೂನುಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ನಿರ್ದಿಷ್ಟ ಶಾಸನಗಳು ಹಾಗೂ ಪ್ರಾದೇಶಿಕ ಕಾನೂನುಗಳ ರದ್ದುಗೊಳಿಸುವಿಕೆ ಕಾಯ್ದೆ-2020ಅನ್ನು ಜಾರಿಗೆ ತಂದಿದೆ.

ಒಟ್ಟು 174 ಅನಗತ್ಯ ಕಾನೂನುಗಳು ರದ್ದು: ರಾಜ್ಯ ಸರ್ಕಾರ ಒಟ್ಟು 174 ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಅತ್ಯಂತ ಪುರಾತನ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿದೆ. 175 ವರ್ಷದಷ್ಟು ಹಳೆಯದಾದ ಕಂದಾಯ ಬಾಕಿಗಾಗಿ ಭೂಮಿ ಮಾರಾಟ ಕಾಯ್ದೆ 1984ಯನ್ನು ರದ್ದುಗೊಳಿಸಲಾಗಿದೆ. ರಾಜ್ಯ ಸರ್ಕಾರ ಒಟ್ಟು 15 ಬ್ರಿಟಿಷರ ಕಾಲದ ಶಾಸನಗಳನ್ನು ರದ್ದುಗೊಳಿಸಲು ಮುಂದಾಗಿದೆ. ಈ ಮೂಲಕ ಸರ್ಕಾರ ಒಟ್ಟು 174 ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದೆ.

ಓದಿ: ಇಂದು ಬೆಳಗಾವಿಗೆ ಬಿಎಸ್‍ವೈ - ಅರುಣ್‍ ಸಿಂಗ್​​ ಆಗಮನ: ಸಂಪುಟ ಸರ್ಕಸ್​ಗೆ ಸಿಗುತ್ತಾ ತಾರ್ಕಿಕ ಅಂತ್ಯ?

ರಾಜ್ಯ ಸರ್ಕಾರ ಬಾಡಿಗೆ ವಸೂಲಾತಿ ಕಾಯ್ದೆ 1853, ಲಸಿಕಾ ಕಾಯ್ದೆ 1877 ಸೇರಿದಂತೆ ಹಲವು ಬ್ರಿಟಿಷರ ಕಾಲದ ಕಾಯ್ದೆಗಳನ್ನು ರದ್ದುಗೊಳಿಸಿದೆ. ರದ್ದುಪಡಿಸಿದ ಆರು ಕಾಯ್ದೆಗಳು ಇಡೀ ರಾಜ್ಯಕ್ಕೆ ಅನ್ವಯವಾಗಿದ್ದವು. ಇನ್ನು 9 ಕಾಯ್ದೆಗಳು ಅಂದಿನ ಬಾಂಬೆ, ಹೈದರಾಬಾದ್, ಮೈಸೂರು, ಮದ್ರಾಸ್, ಕೇರಳ ಮತ್ತು ಕೂರ್ಗ್ ರಾಜ್ಯಗಳಿಗೆ ಸಂಬಂಧ ಪಟ್ಟಿದ್ದಾಗಿದ್ದವು.

ನಿರಸನಗೊಂಡ ಸುಮಾರು 96 ಕಾನೂನುಗಳನ್ನು ಮೈತ್ರಿ ಸರ್ಕಾರ ಜಾರಿಗೆ ತಂದಿತ್ತು. ಅದರಲ್ಲಿ ಪ್ರಮುಖವಾಗಿ ಅರಣ್ಯ ಅಭಿವೃದ್ಧಿ ತೆರಿಗೆ ಸಂಗ್ರಹ ಸಂಬಂಧಿತ ಪರಿಷ್ಕೃತ ಕಾನೂನು, ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣ ಕಾನೂನು, ಬೆಂಗಳೂರು ಕೆರೆ ಸಂರಕ್ಷಣೆ ಸಂಬಂಧಿತ ಅನಗತ್ಯ ಕಾನೂನುಗಳು ಸೇರಿವೆ.

ರದ್ದುಗೊಳಿಸಿದ ಹಲವು ಕಾನೂನುಗಳಲ್ಲಿ ಹಿಂದಿನ ವರ್ಷಗಳಲ್ಲಿನ ಹಣಕಾಸು ಮಸೂದೆ‌ ಮತ್ತು 2019ರಲ್ಲಿ ಯಡಿಯೂರಪ್ಪ ಅವರು ಮಂಡಿಸಿದ್ದ ಲೇಖಾನುದಾನ ಕಾಯ್ದೆಯನ್ನು ಸಹ ರದ್ದುಗೊಳಿಸಲಾಗಿದೆ.

ಕರ್ನಾಟಕ ಕಾನೂನು ಆಯೋಗ ತನ್ನ 53ನೇ ವರದಿಯಲ್ಲಿ ಈ ಹಿಂದಿನ ಬೆಳಗಾವಿ, ಕೂರ್ಗ್, ಮಂಗಳೂರು, ಕೊಳ್ಳೆಗಾಲ, ಕಲಬುರಗಿ ಮತ್ತು ಮೈಸೂರು ಪ್ರದೇಶಕ್ಕೆ ಸಂಬಂಧಿತ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಅದೇ ರೀತಿ 2016 ರಿಂದ 2019ರ ವರೆಗೆ ಜಾರಿಗೆ ತರಲಾಗಿದ್ದ 96 ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ಅದರಲ್ಲಿ ಮೋಟಾರು ವಾಹನ ತೆರಿಗೆ ಕಾಯ್ದೆ, ಲೇಖಾನುದಾನ ಕಾಯ್ದೆ, ಹಣಕಾಸು ಮಸೂದೆ ಸೇರಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.