ETV Bharat / state

SSLC ಪೂರಕ ಪರೀಕ್ಷೆಗೆ ಡೇಟ್ ಫಿಕ್ಸ್- ಸೆಪ್ಟೆಂಬರ್ 27- 29 ರಂದು ನಿಗದಿ..

ಕೋವಿಡ್-19 ಮತ್ತು ಇತರ ಅನಾರೋಗ್ಯ ಕಾರಣದಿಂದ 2020-21 ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸದ ಸರ್ಕಾರಿ ಪ್ರೌಢ ಶಾಲೆ / ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಶಾಲಾ ವಿದ್ಯಾರ್ಥಿಗಳಾಗಿ (CCERF) ಪ್ರಥಮ ಬಾರಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವರ್ಗದ ಹೆಣ್ಣುಮಕ್ಕಳಿಗೆ ಮಾತ್ರ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದೆ.

sslc-supplement-exam-date-fixed
ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆ
author img

By

Published : Aug 18, 2021, 8:31 PM IST

ಬೆಂಗಳೂರು: ಕೋವಿಡ್ ಭೀತಿ ಇದ್ದ ಕಾರಣಕ್ಕೆ ಸುಮಾರು 5,063 ವಿದ್ಯಾರ್ಥಿಗಳು ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದರು. ಬದಲಿಗೆ ಮುಂದಿನ ಸಲ ಪರೀಕ್ಷೆ ಬರೆಯುವ ಆಯ್ಕೆಯನ್ನ ತೆಗೆದುಕೊಂಡಿದ್ದರು. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ ನಡೆಸಲಾಗುವುದು ಅಂತಾ ಪರೀಕ್ಷಾ ಮಂಡಳಿ ತಿಳಿಸಿತ್ತು. ಇವರನ್ನು ಪ್ರಥಮ ಪ್ರಯತ್ನ ಅಂತಲೇ ಪರಿಗಣಿಸಿ ಪರೀಕ್ಷೆ ನಡೆಸಲಾಗುತ್ತಿದೆ.

2020-21ನೇ ಸಾಲಿನ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ನಡೆಸಲು ಯೋಜಿಸಿದ್ದು, ಇದಕ್ಕಾಗಿ ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯಾರು ಯಾರು ಪೂರಕ ಪರೀಕ್ಷೆಗೆ ನೋಂದಣಿ ಮಾಡಬಹುದು

  • 2020-21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್-19 ಮತ್ತು ಇತರ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರು ಹಾಜರಾದ ಮತ್ತು ನೋಂದಾಯಿಸಿದ ಅರ್ಹ ಶಾಲಾ ವಿದ್ಯಾರ್ಥಿಗಳು.
  • ಏಪ್ರಿಲ್ 2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅರ್ಹ ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳು.
  • ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಕೋವಿಡ್​-19 ಮತ್ತು ಇತರ ಅನಾರೋಗ್ಯದ ಕಾರಣದಿಂದ ಪರೀಕ್ಷೆಗೆ ಗೈರು ಹಾಜರಾದ ಅರ್ಹ ಖಾಸಗಿ ಅಭ್ಯರ್ಥಿಗಳು ಮಾತ್ರ.
  • ಏಪ್ರಿಲ್-2019ರ ಮುಖ್ಯ ಪರೀಕ್ಷೆಯಿಂದ ಪ್ರಥಮ ಬಾರಿಗೆ ನೋಂದಾಯಿಸಿ ಅನುತ್ತೀರ್ಣರಾದ ಅರ್ಹ ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು.
  • NSR ಮತ್ತು NSPR ಪುನರಾವರ್ತಿತ ಅಭ್ಯರ್ಥಿಗಳು - 2011ಕ್ಕೂ ಹಿಂದಿನ ಎಸ್​ಎಸ್​ಎಲ್​ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಅರ್ಹ ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು

    ಪರೀಕ್ಷಾ ಶುಲ್ಕ
    ಶಾಲಾ ವಿದ್ಯಾರ್ಥಿಗಳಿಗೆ(ಹೊಸಬರು)
    ಪರೀಕ್ಷಾ ಶುಲ್ಕ- 485ರೂಪಾಯಿ
    22 ( ಲ್ಯಾಮಿನೇಷನ್ ಶುಲ್ಕ)
    ಒಟ್ಟು- 507 ರೂಪಾಯಿ

    ಪುನರಾವರ್ತಿತ ಅಭ್ಯರ್ಥಿಗಳು
    ಒಂದು ವಿಷಯಕ್ಕೆ- 320₹
    ಎರಡು ವಿಷಯಕ್ಕೆ- 386₹
    ಮೂರು ವಿಷಯ/ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ- 520₹

    ಶುಲ್ಕ ವಿನಾಯಿತಿ
    ಪರಿಶಿಷ್ಟ ಜಾತಿ- ಪಂಗಡ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಕೋವಿಡ್-19 ಮತ್ತು ಇತರ ಅನಾರೋಗ್ಯ ಕಾರಣದಿಂದ 2020-21 ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸದ ಸರ್ಕಾರಿ ಪ್ರೌಢ ಶಾಲೆ / ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಶಾಲಾ ವಿದ್ಯಾರ್ಥಿಗಳಾಗಿ (CCERF) ಪ್ರಥಮ ಬಾರಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ಎಲ್ಲ ವರ್ಗದ ಹೆಣ್ಣುಮಕ್ಕಳಿಗೆ ಮಾತ್ರ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದೆ. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದ್ದಾರೆ.

ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆ

ಈ ಹಿಂದೆ ನಡೆಸಿದ್ದಂತೆ MCQ (Multiple Choice Question) ಬಹು ಆಯ್ಕೆ ಪ್ರಶ್ನೆ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತೆ. ಪ್ರತಿ ವಿಷಯಕ್ಕೆ ಗರಿಷ್ಠ 40 ಅಂಕಗಳಿಗೆ ಸೀಮಿತಗೊಳಿಸಿ, ಒಟ್ಟು 03 ಕೋರ್ ವಿಷಯಗಳಿಗೆ 120 ಪ್ರಶ್ನೆಗಳುಳ್ಳ ಒಂದೇ ಪ್ರಶ್ನೆಪತ್ರಿಕೆ (ಪತ್ರಿಕೆ-1) ನೀಡಲಾಗುವುದು. ಪರೀಕ್ಷಾ ಸಮಯವನ್ನು ಬೆಳಗ್ಗೆ 10.30 ರಿಂದ 01.30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3.00 ಗಂಟೆಯ ಕಾಲಾವಕಾಶ ನೀಡಲಾಗುತ್ತಿದೆ.

ಗಣಿತ ಮತ್ತು ವಿಜ್ಞಾನ ವಿಷಯಗಳ ಬದಲಾಗಿ ಪರ್ಯಾಯ ವಿಷಯಗಳನ್ನು ಆಯ್ಕೆ ಮಾಡಿಕೊಂಡ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಪತ್ರಿಕೆ-1ರಲ್ಲಿ ಭಾಗ-1 ಪರ್ಯಾಯ ವಿಷಯ-1, ಭಾಗ-2 ಪರ್ಯಾಯ ವಿಷಯ 2 ಮತ್ತು ಭಾಗ-3ರಲ್ಲಿ ಸಮಾಜ ವಿಜ್ಞಾನದ ಪ್ರಶ್ನೆಗಳಿರುತ್ತವೆ.

ವೇಳಾಪಟ್ಟಿ ಹೀಗಿದೆ

27-9-2021
ಬೆಳಗ್ಗೆ 10-30 ಮಧ್ಯಾಹ್ನ 1:30

ಕೋರ್ ಸಬ್ಜೆಕ್ಟ್

ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ
ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ಥಾನ ಸಂಗೀತ/ ಕರ್ನಾಟಕ ಸಂಗೀತ

ಮಧ್ಯಾಹ್ನ 2:30- 5:00

ಎಲಿಮೆಂಟ್ಸ್​ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಇಂಜಿನಿಯರಿಂಗ್ ಗ್ರಾಫಿಕ್ಸ್- 2
ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಇಂಜಿನಿಯರಿಂಗ್
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

29-9-2021

ಭಾಷಾ ವಿಷಯ
•ಪ್ರಥಮ ಭಾಷೆ
ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
•ದ್ವಿತೀಯ ಭಾಷೆ
ಇಂಗ್ಲಿಷ್ ಕನ್ನಡ
• ತೃತೀಯ ಭಾಷೆ
ಹಿಂದಿ,ಕನ್ನಡ,ಇಂಗ್ಲಿಷ್, ಅರೇಬಿಕ್, ಪರ್ಷಿಯನ್,ಉರ್ದು,ಸಂಸ್ಕೃತ, ಕೊಂಕಣಿ, ತುಳು

ಓದಿ: ರಾಜ್ಯದಲ್ಲಿಂದು 1,365 ಮಂದಿಗೆ ಕೋವಿಡ್ ದೃಢ: 22 ಸೋಂಕಿತರು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.