ETV Bharat / state

'ಸೋಂಕು ಕಡಿಮೆಯಾದ ಮೇಲಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲೇಬೇಕು' - SSLC examination

ಕೋವಿಡ್​ ಕಮ್ಮಿ ಆದ್ಮೇಲೆ SSLC ಪರೀಕ್ಷೆ ನಡೆಯಲೇಬೇಕು. ಇದು ರಾಜ್ಯದಲ್ಲಿ ವಿದ್ಯಾರ್ಥಿ ಜೀವನದ ಮಾನದಂಡವಾಗಿದೆ ಎಂದು ಕ್ಯಾಮ್ಸ್ ಮುಖ್ಯ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.

Shamsikumar, Chief Secretary of Cams
ಕ್ಯಾಮ್ಸ್ ಮುಖ್ಯ ಕಾರ್ಯದರ್ಶಿ ಶಶಿಕುಮಾರ್
author img

By

Published : May 14, 2021, 8:11 PM IST

ಬೆಂಗಳೂರು: ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವುದು ಆರೋಗ್ಯಕರ ಬೆಳವಣಿಗೆ. ಮಕ್ಕಳು-ಪೋಷಕರು, ಶಿಕ್ಷಕರು ಕೋವಿಡ್​ನಿಂದ ನರಳುತ್ತಿದ್ದು ಈ ಪರಿಸ್ಥಿತಿಯಲ್ಲಿ ಆರೋಗ್ಯವೇ ಮುಖ್ಯ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆಯ ‌(ಕ್ಯಾಮ್ಸ್) ಮುಖ್ಯ ಕಾರ್ಯದರ್ಶಿ ಶಶಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಮ್ಸ್ ಮುಖ್ಯ ಕಾರ್ಯದರ್ಶಿ ಶಶಿಕುಮಾರ್

ಈ ಬಗ್ಗೆ ಮಾತನಾಡಿರುವ ಶಶಿಕುಮಾರ್, ರಾಜ್ಯದಲ್ಲಿ ಕೊರೊನಾ ತೀವ್ರತೆಯಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ದ್ವಿತೀಯ‌ ಪಿಯುಸಿ ಪರೀಕ್ಷೆ ಮುಂದೂಡಲಾಗಿತ್ತು. ಬಳಿಕ‌ ನಿನ್ನೆಯಷ್ಟೇ ಎಸ್ಎಸ್​ಎಲ್‌ಸಿ ಪರೀಕ್ಷೆಯನ್ನೂ ಮುಂದೂಡಿರುವ ಕುರಿತು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಲೇಬೇಕಾಗುತ್ತದೆ.‌ ಸಿಬಿಎಸ್​ಸಿ, ಐಸಿಎಸ್ಇ ಮಾನದಂಡಗಳಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಲ್ಲ.‌

ಓದಿ:ಹೊರಗಡೆ ಬಂದರೆ ಇದೇ ನಿಮ್ಮ ಕೊನೆ ಬರ್ತಡೇ: ಕೇಕ್ ಕತ್ತರಿಸಿ ಪೊಲೀಸರಿಂದ ವಿನೂತನ ಜಾಗೃತಿ

ಈ ಪರೀಕ್ಷೆಗಳ ಅಂಕಿಅಂಶಗಳ ಮೂಲಕವೇ‌ ಮುಂದಿನ ಕೋರ್ಸ್​​ಗಳನ್ನ ಆಯ್ಕೆ ಮಾಡಲು ಸಾಧ್ಯ. ಹಾಗೇ ಹಲವಾರು ಮಂದಿ ಈ ಪ್ರಮಾಣಪತ್ರದ ಮೂಲಕವೇ ಕೆಲಸಕ್ಕೆ ಮುಂದಾಗುತ್ತಾರೆ. ಆಟೋ ಲೈಸೆನ್ಸ್ ಬೇಕೆಂದ್ರು ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಬೇಕಾಗುತ್ತೆ. ‌ಹೀಗಾಗಿ ಪರೀಕ್ಷೆ ನಡೆಸುವುದು ಅತೀ ಅಗತ್ಯವಿದ್ದು,‌ ಅಂಕಿಅಂಶ ಬೇಕಾಗುತ್ತೆ. ಹೀಗಾಗಿ ಸರ್ಕಾರದ ಜೊತೆಗೆ ನಾವು ಕೈ ಜೋಡಿಸುತ್ತೇವೆ. ಕೊರೊನಾ ಕಂಟ್ರೋಲ್ ಬಂದ ಮೇಲೆ ಮುಂಜಾಗ್ರತಾ ಕ್ರಮದಿಂದ ಪರೀಕ್ಷೆ ನಡೆಸಬೇಕು ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.