ETV Bharat / state

ತಾಕತ್​ ಇದ್ರೆ ಕಾಂಗ್ರೆಸ್​ ಆಡಳಿತ ಇರುವ ರಾಜ್ಯದಲ್ಲಿ ವ್ಯಾಟ್​ ಕಡಿಮೆ ಮಾಡಲಿ : ಸಚಿವ ಶ್ರೀರಾಮುಲು - ಎತ್ತುಗಳಿಗೆ ಹಿಂಸಿಸುವ ಬದಲು ನಡೆದು ಬರಬಹುದಿತ್ತು

ಮೋದಿ, ಬೊಮ್ಮಾಯಿ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ. ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಿ ಎಂದು ಶ್ರೀರಾಮುಲು ಕಿಡಿಕಾರಿದರೆ, ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಸುಧಾಕರ್, ಸುಮ್ನೆ ಎತ್ತುಗಳಿಗೆ ಹಿಂಸೆ ಮಾಡುವ ಬದಲು ಸೈಕಲ್ ಅಥವಾ ನಡೆದು ಬಂದಿದ್ರೆ ಒಳ್ಳೆಯದು ಇತ್ತು ಎಂದಿದ್ದಾರೆ..

Sriramulu spark against Congress protest in bangalore
ತಾಕತ್​ ಇದ್ರೆ ಕಾಂಗ್ರೆಸ್​ ಆಡಳಿತ ಇರುವ ರಾಜ್ಯದಲ್ಲಿ ವ್ಯಾಟ್​ ಕಡಿಮೆ ಮಾಡಲಿ: ಸಚಿವ ಶ್ರೀರಾಮುಲು
author img

By

Published : Sep 13, 2021, 5:28 PM IST

ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ಸ್ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಅಂದ್ರೆ ಗಿಮಿಕ್ಸ್, ಗಿಮಿಕ್ಸ್ ಅಂದ್ರೆ ಕಾಂಗ್ರೆಸ್ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇವರ ಕಾಲದಲ್ಲೂ ತೈಲ ಬೆಲೆ ಹೆಚ್ಚಾಗಿತ್ತು. ನಿಮಗೆ ನಾನು ಒಂದು ಸವಾಲ್ ಹಾಕುತ್ತೇನೆ. ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ?. ಡೀಸೆಲ್, ಪೆಟ್ರೋಲ್ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡಿದ್ದೀರಾ?. ತಾಕತ್ ಇದ್ರೆ ವ್ಯಾಟ್ ಕಡಿಮೆ ಮಾಡಿ ನೋಡಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್​ ವಿರುದ್ಧ ಸಚಿವರಾದ ಶ್ರೀರಾಮುಕು ಹಾಗೂ ಸುಧಾಕರ್​ ಆಕ್ರೋಶ

ಮೋದಿ, ಬೊಮ್ಮಾಯಿ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ. ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಿ. ಇಲ್ಲಿ ಎತ್ತಿನ ಗಾಡಿ, ಸೈಕಲ್ ನಲ್ಲಿ ಬನ್ನಿ ಎಂದು ಕಿಡಿ ಕಾರಿದರು.

ಎತ್ತುಗಳಿಗೆ ಹಿಂಸಿಸುವ ಬದಲು ನಡೆದು ಬರಬಹುದಿತ್ತು : ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಸುಧಾಕರ್, ಸುಮ್ನೆ ಎತ್ತುಗಳಿಗೆ ಹಿಂಸೆ ಮಾಡುವ ಬದಲು ಸೈಕಲ್ ಅಥವಾ ನಡೆದು ಬಂದಿದ್ರೆ ಒಳ್ಳೆಯದು ಇತ್ತು ಎಂದು ಟೀಕಿಸಿದರು.

ಯಾರ ಕಾಲದಲ್ಲಿ ಬೆಲೆ ಏರಿಕೆ ಆಗಿದೆ ಎಂದು ಸದನದಲ್ಲಿ ಮಾತಾಡುತ್ತೇವೆ. ಸುಮ್ನೆ ಇವರ ಪ್ರತಿಭಟನೆಯಿಂದ ನಾನು ವಿಧಾನಸೌಧಕ್ಕೆ ಬರುವುದಕ್ಕೆ ಮುಕ್ಕಾಲು ಗಂಟೆ ತಡ ಆಯ್ತು ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.