ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ಹೈಕೋರ್ಟ್ ವಕೀಲ ಶ್ರೀಧರ್ ಪ್ರಭು ಸೇರಿ 11 ಮಂದಿಯನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಾ. ಮೋಹನ್‍ರಾವ್ ನಲವಡೆ, ವಿನೋದ ಮನೋಹರ್ ಗಾಯಕವಾಡ, ಉಮೇಶ ಗಣಪತಿ ಶೇಠ್, ಎನ್.ವಿ. ಲೋಕೇಶ್, ಡಾ. ಎಂ.ಆರ್. ಮಲ್ಲಯ್ಯ, ಡಾ. ಪ್ರೀತಿ ವಿ. ಶಾನಭೋಗ, ಮೀರಾಬಾಯಿ, ಡಾ. ಬಸವರಾಜ ಪೂಜಾರ, ಡಾ. ಮಂಜುನಾಥ ಬೆವಿನಕಟ್ಟಿ, ಸರಸ್ವತಿ ಕಿಲ್‍ಕಿಲೆ ಅವರನ್ನು ಪ್ರಾಧಿಕಾರಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಅಧಿಕಾರೇತರ ಸದಸ್ಯರ ಅವಧಿ 3 ವರ್ಷ ಆಗಿರಲಿದೆ ಎಂದು ಕಾನೂನು ಇಲಾಖೆ ಅಧಿಸೂಚನೆ ಹೇಳಿದೆ. ಕಾನೂನು ಸೇವಾ ಪ್ರಾಧಿಕಾರ ಇನ್ನಷ್ಟೂ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಇವರ ಸಲಹೆ ಸೂಚನೆ ಪಡೆಯಲಿದೆ.