ETV Bharat / state

ಜನರ ಜೀವ ಉಳಿಸಬೇಕಾದ ಸರ್ಕಾರವೇ ಐಸಿಯುನಲ್ಲಿದೆ: ಎಸ್ಆರ್​​​​​​ ಪಾಟೀಲ್​​​​ ಗರಂ

ಕೊರೊನಾ ಸೋಂಕಿತರ ಜೀವ ಉಳಿಸಬೇಕಾದ ಆ್ಯಕ್ಸಿಜನ್ ಕೊಡದೇ ಅವರನ್ನು ಸರ್ಕಾರವೇ ಬಲಿ ಪಡೆದಿದೆ ಎಂದು ಎಸ್ಆರ್​​​ಪಿ ಆರೋಪ ಮಾಡಿದ್ದಾರೆ.

Srp tweet
Srp tweet
author img

By

Published : May 4, 2021, 7:11 PM IST

ಬೆಂಗಳೂರು: ಜನರ ಜೀವ ಉಳಿಸಬೇಕಾದ ರಾಜ್ಯ ಸರ್ಕಾರವೇ ಐಸಿಯುನಲ್ಲಿ ಇದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಾಮರಾಜನಗರದಲ್ಲಿ ನಡೆದಿರೋ ಘಟನೆ ಅತ್ಯಂತ ಅಮಾನವೀಯ. ಕೊರೊನಾ ಸೋಂಕಿತರ ಜೀವ ಉಳಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರವೇ ಐಸಿಯುನಲ್ಲಿದೆ.

ಕೊರೊನಾ ಸೋಂಕಿತರ ಜೀವ ಉಳಿಸಬೇಕಾದ ಆಕ್ಸಿಜನ್ ಕೊಡದೇ ಅವರನ್ನು ಸರ್ಕಾರವೇ ಬಲಿ ಪಡೆದಿದೆ ಎಂದಿದ್ದಾರೆ. ಚಾಮರಾಜನಗರದಲ್ಲಿ ನಡೆದ ಘಟನೆ ಬಹಿರಂಗವಾಗಿದೆ. ಚಾಮರಾಜನಗರದಲ್ಲಿ ದೊಡ್ಡ ಮಟ್ಟದಲ್ಲಿ ಸಾವುಗಳು ಸಂಭವಿಸಿದೆ. ಇದೇ ರೀತಿಯ ಹಲವು ಘಟನೆಗಳು ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿ ನಡೆಯುತ್ತಿದೆ.

ಆಕ್ಸಿಜನ್ ಇಲ್ಲದೇ ಪ್ರತಿಯೊಂದು ಜಿಲ್ಲಾಸ್ಪತ್ರೆಯಲ್ಲೂ ದಿನಕ್ಕೆ 4 ರಿಂದ 5 ಸೋಂಕಿತರು ಜೀವ ಬಿಡುತ್ತಿದ್ದಾರೆ. ಚಾಮರಾಜನಗರದ ಘಟನೆ ಬಹಿರಂಗವಾಗಿರೋದ್ರಿಂದ ಇಷ್ಟೆಲ್ಲ ದೊಡ್ಡ ಸುದ್ದಿಯಾಗುತ್ತಿದೆ. ಆದರೆ, ಇದೇ ರೀತಿಯ ಕೆಲವು ಘಟನೆಗಳನ್ನ ಜಿಲ್ಲಾ ಮಟ್ಟದಲ್ಲೇ ಮುಚ್ಚಿಡುವ ಕೆಲಸ ನಡೆಯುತ್ತಿದೆ. ಸಾವುಗಳನ್ನು ಮುಚ್ಚಿಡೋ ಕೆಲಸ ಮಾಡಲಾಗುತ್ತಿದೆ. ಈ ಸರ್ಕಾರವನ್ನು ನಂಬಿದರೆ ಸಾವೇ ಗತಿ ಅನ್ನೋ ಪರಿಸ್ಥಿತಿ ರಾಜ್ಯದಲ್ಲಿದೆ ಎಂದಿದ್ದಾರೆ.

ಸರ್ಕಾರ ಸುಳ್ಳು ಹೇಳುತ್ತಿದೆ: ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಜನ ಮೃತಪಟ್ಟಿದ್ದಾರೆ. ಆದರೆ ನಾಚಿಕೆಗೆಟ್ಟ ಸರ್ಕಾರ ಆಕ್ಸಿಜನ್ ಇಲ್ಲದೇ ಮೃತರಾದವರು ಕೇವಲ 3 ಜನ ಮಾತ್ರ ಎಂದು ಸುಳ್ಳು ಹೇಳುತ್ತಿದೆ.

ಒಂದೇ ದಿನ 21 ಕೊರೊನಾ ಸೋಂಕಿತರು ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗುತ್ತಾರಾ..? ಸಾವುಗಳ ವಿಷಯದಲ್ಲೂ ಸುಳ್ಳು ಹೇಳುತ್ತಿರುವುದೇಕೆ..? ಆಗಿರುವ ಮಹಾ ತಪ್ಪನ್ನು ಮುಚ್ಚಿಕೊಳ್ಳೋದಕ್ಕೆ ಸರ್ಕಾರ ಆಕ್ಸಿಜನ್ ಸಮಸ್ಯೆಯಿಂದ ಸತ್ತಿರುವವರು ಕೇವಲ ಮೂವರು ಮಾತ್ರ ಎಂದು ಸುಳ್ಳು ಹೇಳುತ್ತಿದೆ.

ಈ ಸರ್ಕಾರ ಕೋವಿಡ್ ನಿಂದ ಸಂಭವಿಸಿದ ಸಾವುಗಳನ್ನು ಮುಚ್ಚಿಡುತ್ತಿರುವುದು ಸತ್ಯ ಎಂದು ಮತ್ತೊಮ್ಮೆ ಸಾಬೀತಾಗಿದೆ. ಬಡ ಜನರ ಸಾವಿನ ವಿಚಾರದಲ್ಲೂ ಇಂಥಾ ಭಂಡತನ ಬೇಕಾ..? ಎಂದು ಹೇಳಿದ್ದಾರೆ.

ಮಾನ ಮರ್ಯಾದೆ ಇರೋ ಸರ್ಕಾರವಾಗಿದ್ದರೆ ಚಾಮರಾಜನಗರ ದುರಂತ ನಡೆಯಲು ನಿರ್ಲಕ್ಷ್ಯ ಮಾಡಿದವರ ತಲೆದಂಡ ಪಡೆಯಬೇಕಾಗಿತ್ತು. ಸರ್ಕಾರ ಕಾಟಾಚಾರಕ್ಕೊಂದು ತನಿಖೆ ಮಾಡಿ, ಮೂರು ದಿನದಲ್ಲಿ ವರದಿ ಸಲ್ಲಿಸುವಂತೆ ಹೇಳಿದೆ. ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಮಾಡಿದ್ಯಾರು ಅನ್ನೋದನ್ನು ಕಂಡು ಹಿಡಿಯಲು ಈ ಸರ್ಕಾರಕ್ಕೆ 3 ದಿನ ಬೇಕಾ..? ಎಂದು ಕೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.