ETV Bharat / state

'ಕೈ' ಕೊಟ್ಟಿದ್ದಕ್ಕೆ ಕೊರೊನಾ ಹುಟ್ಟಿದ್ದು : ಕರ್ನಾಟಕದ ಕಂಪ್ಲೀಟ್​ ಲಾಕ್​​ಡೌನ್​ ಬಗ್ಗೆ ಪರಿಷತ್​ನಲ್ಲಿ ಪಾಟೀಲ್​ ಮಾತು - ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಲಹೆ

ಕೊರೊನಾ ವೈರಸ್​ನಿಂದಾಗಿ ರಾಜ್ಯ ಬಹುತೇಕ ಸ್ತಬ್ದಗೊಂಡಿರುವ ಈ ಹೊತ್ತಿನಲ್ಲಿ ಸರ್ಕಾರ ಯಾವ ರೀತಿ ಕೆಲಸ ಮಾಡಬೇಕೆಂದು ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಇಂದು ವಿಧಾನ ಪರಿಷತ್​​ನಲ್ಲಿ ನಿಯಮ 69ರ ಅಡಿ ಮಾತನಾಡಿ ಸಲಹೆಯನ್ನು ನೀಡಿದರು.

coronavirus
ಸಾಂದರ್ಭಿಕ ಚಿತ್ರ
author img

By

Published : Mar 16, 2020, 5:48 PM IST

ಬೆಂಗಳೂರು: ಅಮೆರಿಕ ಅಧ್ಯಕ್ಷ ಟ್ರಂಪ್​ ಕೊರೊನಾ ಪೀಡಿತರಾಗಿಲ್ಲ ಎನ್ನುವುದು ನನಗೆ ತುಂಬಾ ಸಮಾಧಾನ ತಂದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ವಿಧಾನ ಪರಿಷತ್​​ನಲ್ಲಿ ನಿಯಮ 69ರ ಅಡಿ ಮಾತನಾಡಿ, ಭಾರತಕ್ಕೆ ಬಂದ ಸಂದರ್ಭ ಇಲ್ಲಿ ಎಷ್ಟು ಜನರಿಗೆ ಅವರು ಶೇಕ್ ಹ್ಯಾಂಡ್ ಮಾಡಿ ಹೋಗಿದ್ದರು. ಬಂದುಬಿಟ್ಟಿದ್ದರೆ ಏನು ಕತೆ ಅಂದುಕೊಂಡಿದ್ದೆ. ಆದರೆ, ಬಂದಿಲ್ಲ ಎನ್ನುವುದು ಸಮಾಧಾನ ತಂದಿದೆ ಎಂದರು.

ಅಮೆರಿಕ ರಾಷ್ಟ್ರ ಕೊರೊನಾ ಆತಂಕಕ್ಕೆ ಗುರಿಯಾಗಿದ್ದು 5 ಸಾವಿರ ಕೋಟಿ ಡಾಲರ್ ಅಂದರೆ 3.5 ಲಕ್ಷ ಕೋಟಿ ಹಣ ವಿನಿಯೋಗ ಮಾಡಿದೆ. ಅಲ್ಲಿ ತುರ್ತು ಪರಿಸ್ಥಿತಿ ಘೋಷಿತವಾಗಿದೆ. ಆದರೆ, ನಮ್ಮ ರಾಜ್ಯ ಹಾಗೂ ರಾಷ್ಟ್ರದಲ್ಲಿ ಯಾಕೆ ಇಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಕೂಡ ನಮ್ಮ ಮಾತು ಕೇಳುವ ಸಚಿವರು, ಅಧಿಕಾರಿಗಳು ಇಲ್ಲ. ಕೊವಿಡ್- 19 (ಕೊರೊನಾ) ಅತ್ಯಂತ ಸೂಕ್ಷ್ಮ ಹಾಗೂ ಕಣ್ಣಿಗೆ ಕಾಣದ ಸೂಕ್ಷ್ಮ ವೈರಾಣು ಎಂದ ಅವರು, ಕೊವಿಡ್ -19 ಹರಡುವ ವಿಧಾನ, ಲಕ್ಷಣ, ಭೀಕರತೆ ಕುರಿತು ವಿವರಿಸಿದರು.

ಸಾಂಕ್ರಾಮಿಕ ರೋಗ: ವಿಶ್ವಸಂಸ್ಥೆ ಕೂಡ ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಪ್ರಪಂಚದ 150 ರಾಷ್ಟ್ರದಲ್ಲಿ 1.5 ಲಕ್ಷ ಮಂದಿ ರೋಗಕ್ಕೆ ತುತ್ತಾಗಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೆಗಡಿ ಬಂದಿದ್ರೆ ಎಲ್ಲಿಂದ ಬಂತು ಅಂತ ಅನ್ನಿಸುತ್ತೆ, ಪಕ್ಕದಲ್ಲಿದ್ದವರು ಕೆಮ್ಮಿದರೆ ಎದ್ದು ಹೋಗೋಣ ಅನ್ನಿಸುತ್ತದೆ. ಮೈ ಬಿಸಿಯಾದರೆ, ಸೀನು ಬಂದರೆ ಆತಂಕ ಆಗುತ್ತದೆ. ನಮ್ಮದು ವಿಶ್ವದಲ್ಲೇ ಎರಡನೇ ಅತಿದೊಡ್ಡ ರಾಷ್ಟ್ರ. ಇದರಿಂದ ಈ ದೇಶ ಕೊರೊನಾದ ಮೂರು, ನಾಲ್ಕನೇ ಹಂತಕ್ಕೆ ಹೋಗದಂತೆ ನೋಡಬೇಕು. ಇನ್ನೊಂದು ತಿಂಗಳು ಅತ್ಯಂತ ಮುತುವರ್ಜಿ ವಹಿಸಬೇಕಿದೆ. ದೇಶದ 20 ರಾಜ್ಯದಲ್ಲಿ ಕೊರೊನಾ ಶಂಕಿತರಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೊರೊನಾ ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರ ಸಾವಾಗಿದೆ. ಸಾಕಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ 100 ಕ್ಕಿಂತ ಹೆಚ್ಚು ಜನರಿಗೆ ಕೊರೊನಾ ವೈರಸ್ ಪೀಡಿತರಾಗಿರುವ ಶಂಕೆ ಇದೆ. ಇಷ್ಟು ಪೀಡಿತರಲ್ಲಿ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಯಿತಲ್ಲಾ ಅನ್ನುವ ಸಂಗತಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದ ಆರೋಗ್ಯ ಇಲಾಖೆ ವಿಚಾರದಲ್ಲಿ ಇದು ಕಪ್ಪು ಚುಕ್ಕೆ ಎಂದರು.

SR Patil reaction about coronavirus in legislative council
ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ (ಸಂಗ್ರಹ ಚಿತ್ರ)

ಕೈ ಕೊಟ್ಟಿದ್ದಕ್ಕೆ ಕೊರೊನಾ ಹುಟ್ಟಿದ್ದು: ಇದು ಹೊಸ ವೈರಾಣು. ಔಷಧ ಕಂಡು ಹಿಡಿದಿಲ್ಲ. ಚೀನಾದಲ್ಲಿ ಹುಟ್ಟಿ ಅಲ್ಲಿಂದ ಬೇರೆಡೆ ತೆರಳಿದವರಿಂದ ಹಬ್ಬಿದೆ. ದೇಶದ ವಿವಿಧ ಗಡಿ ಬಂದ್ ಮಾಡಲಾಗಿದೆ. ದೇಶದ ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಹರಿಯಾಣ ರಾಜ್ಯದಲ್ಲಿ ಕೂಡ ರಾಜ್ಯದ ಮಾದರಿ ವಿವಿಧ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇಷ್ಟೊಂದು ಸಮಸ್ಯೆ ಆಗಿರುವಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಹೊರ ರಾಷ್ಟ್ರದಿಂದ ಬರುವವರನ್ನು ಕಠಿಣವಾಗಿ ತಪಾಸಣೆಗೆ ವಹಿಸಬೇಕು. ಕೈ ಕೊಟ್ಟಿದ್ದಕ್ಕೆ ಹುಟ್ಟಿದ್ದು ಕೊರೊನಾ, ಕೈ ಕೊಟ್ಟರೆ ಮತ್ತೆ ಹರಡುತ್ತದೆ ಎಂದು ಪಾಟೀಲರು ಹೇಳಿದಾಗ ಎದ್ದುನಿಂತ ಬಿಜೆಪಿ ಸದಸ್ಯ ರವಿಕುಮಾರ್, ಇದು 'ಕೈ'ನಿಂದಲೇ ಬಂದಿದ್ದು ಎಂದರು. ಅದಕ್ಕೆ ತಿರುಗಿ ಹೇಳಿದ ಪಾಟೀಲರು, ಹೌದು ಕೈ ಕೊಟ್ಟಿದ್ದರಿಂದ ಆಗಿದ್ದು. ನಮಗೆ ಹಾಗೂ ಹೊರಟ್ಟಿಯವರಿಗೆ ಕೆಲವರು ಕೈ ಕೊಟ್ಟರು. ಇದರಿಂದ ಚೀನಾದಲ್ಲಿ ಕೊರೊನಾ ಹುಟ್ಟಿತು ಅನ್ನುವ ಅನುಮಾನ ಇದೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ಪ್ರಸ್ತಾಪಿಸಿದರು.

22 ರವರೆಗೆ ರಾಜ್ಯ ಸ್ತಬ್ಧ :ಸೂಕ್ತ ತಪಾಸಣೆ, ಮುಂಜಾಗ್ರತೆ ಕ್ರಮ ಸರ್ಕಾರ ಕೈಗೊಂಡಿದ್ದರೆ, ಮೊದಲ ಹಂತದ ರೋಗಿಗಳಿಂದ ರೋಗ ಹರಡುತ್ತಲೇ ಇರಲಿಲ್ಲ. ಸೌದಿಯಿಂದ ಬಂದ ಸಂದರ್ಭ ಸೂಕ್ತ ತಪಾಸಣೆ ಆಗಿದ್ದರೆ ಅವನಿಂದ ಬೇರೆಯವರಿಗೆ ಹರಡುತ್ತಿರಲಿಲ್ಲ. ವಿದೇಶದಿಂದ ಬಂದ ನಾಗರಿಕರನ್ನು ವೈಜ್ಞಾನಿಕವಾಗಿ ತಪಾಸಣೆಗೆ ಒಳಪಡಿಸಿದ್ದರೆ ಸಮಸ್ಯೆ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ. ಸರ್ಕಾರ ಬಂದ್ ಮಾಡಿರುವ ಹಿನ್ನೆಲೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಾಜ್ಯ 22 ರವರೆಗೆ ಸ್ತಬ್ಧವಾಗಿದೆ. ಆ ನಂತರ ಇದರ ಶಕ್ತಿ ಕುಂದಲಿದೆ ಎಂದಾದರೆ ಸಂತಸ. ರಾಜ್ಯದ ಹಲವು ಜಿಲ್ಲೆಯಲ್ಲಿ ವಿಶೇಷ ವಾರ್ಡ್ ಮಾಡಿದ್ದಾರೆ. ಆದರೆ, ಸೂಕ್ತ ಲ್ಯಾಬ್ ಇಲ್ಲ. ರಾಜ್ಯದಲ್ಲಿ ಕೊರೊನಾ ತಪಾಸಣೆ ಮಾಡುವ ಸೂಕ್ತ ಲ್ಯಾಬ್ ಇಲ್ಲವಾಗಿದೆ ಎಂದರೆ ಹೇಗೆ? ನಾವೆಲ್ಲಾ ಒಂದೇ ಕುಟುಂಬ ಸದಸ್ಯರಂತೆ ಒಟ್ಟಾಗಿ ಶ್ರಮಿಸೋಣ. ಕೊರೊನಾವನ್ನು ತೊಲಗಿಸೋಣ ಎಂದರು.

ಜನರಲ್ಲಿ ಧೈರ್ಯ ತುಂಬಬೇಕು: ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದೊಡ್ಡ ನೆರೆ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಬೊಕ್ಕಸದಿಂದ ಇನ್ನಷ್ಟು ಹಣ ಹಾಕುವ ಸ್ಥಿತಿ ಬಂದಿದೆ. ಉದ್ಯಮಗಳು ನಿಂತಿವೆ. ಈ ಸ್ಥಿತಿ ರಾಜ್ಯದ ಆರ್ಥಿಕ ಸ್ಥಿತಿಮೇಲೆ ದೊಡ್ಡ ಪರಿಣಾಮ ಬೀರಲಿದೆ. ಪ್ರವಾಸೋದ್ಯಮ ಹಾಳಾಗಲಿದೆ. ದೇವಾಲಯಕ್ಕೆ ಜನ ತೆರಳದ ಸ್ಥಿತಿ ತಲುಪಿದೆ. ಇದರಿಂದ ದೇಶ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಲಿದೆ. ಅನಗತ್ಯ ಗೊಂದಲ ನಿವಾರಿಸಿ ವಿಶೇಷ ಗಮನ ಹರಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಜನರಲ್ಲಿ ಧೈರ್ಯ ತುಂಬಬೇಕು ಎಂದು ವಿವರಿಸಿದರು.

ವಿದ್ಯಾರ್ಥಿಗಳನ್ನು ರಕ್ಷಿಸಿ: ಹಲವು ವಿದ್ಯಾರ್ಥಿಗಳು ರೋಮ್ ಏರ್ಪೋರ್ಟ್​ನಲ್ಲಿದ್ದಾರೆ. ನನ್ನ ಮಗಳೂ ಇವರೊಂದಿಗೆ ಇದ್ದಾರೆ. ಪ್ರಮಾಣಪತ್ರ ಇಲ್ಲದೇ ಹೊರಡಲಾಗದೇ ಏರ್ಪೋರ್ಟ್​ನಲ್ಲಿ ಹಲಗೆ ಮೇಲೆ ಮಲಗುತ್ತಿದ್ದಾರೆ. ಈ ರೀತಿ ವಿವಿಧ ರಾಷ್ಟ್ರದಲ್ಲಿ ವಿದ್ಯಾರ್ಥಿಗಳು ಈ ರೀತಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಭಾರತ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ದೇಶ ಸದ್ಯ ಎರಡನೇ ಹಂತದಲ್ಲಿದೆ. ನಿರ್ಲಕ್ಷ್ಯ ಮಾಡಿ ಮೂರು ಹಾಗೂ ನಾಲ್ಕನೇ ಹಂತಕ್ಕೆ ಕಳಿಸಿ ಇನ್ನೊಂದು ಚೈನಾ, ಇಟಲಿ ಮಾಡಬೇಡಿ ಎಂದು ಮನವಿ ಮಾಡಿದರು. ಇದಾದ ಬಳಿಕ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ನಿಯಮ 69ರಡಿ ಮಾತನಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.