ETV Bharat / state

ಮಧ್ಯಪ್ರದೇಶ ರಾಜಕೀಯ ವಿದ್ಯಮಾನ:  ಪರಿಷತ್​​ನಲ್ಲಿ ಪ್ರತಿಧ್ವನಿ.. ಪ್ರತಿಪಕ್ಷ ನಾಯಕರ ಅಸಮಾಧಾನ - ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಲೆಟೆಸ್ಟ್ ನ್ಯೂಸ್​

ವಿಧಾನ ಪರಿಷತ್​ನ ಮಧ್ಯಾಹ್ನದ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರರು ಮಧ್ಯ ಪ್ರದೇಶದ ರಾಜಕೀಯ ವಿದ್ಯಮಾನದ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.

ಮಧ್ಯಪ್ರದೇಶ ರಾಜಕೀಯಕ್ಕೆ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕಿಡಿ
SR Patil outrage against Madhya Pradesh political
author img

By

Published : Mar 18, 2020, 7:12 PM IST

ಬೆಂಗಳೂರು: ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಒಂದು ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಹೋಗಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಪ್ರಸಕ್ತ ಮಧ್ಯಪ್ರದೇಶ ರಾಜಕೀಯ ವಿದ್ಯಮಾನಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್​ನ ಮಧ್ಯಾಹ್ನದ ಕಲಾಪದಲ್ಲಿ ಭಾರತ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆ‌ಯವರು, ರಿಯಲ್ ಎಸ್ಟೇಟ್​ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಾಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಎಂದರು.

ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ‌:

ಈ ವೇಳೆ, ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂಇಬ್ರಾಹಿಂ, ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ‌ ಇದೆ. ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ. ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜನನ್ನಾಥರಾವ್ ಜೋಶಿ ಬಳಿ‌ ಚಿಕಿತ್ಸೆಗೆ ಹಣ ಇರಲಿಲ್ಲ. ಆದರೆ, ಇಂದು ಏನಾಗಿದೆ. ಇದಕ್ಕೆಲ್ಲಾ ನಾವೇ ಕಾರಣ. ಹಿಂದೆ ಭಾಷಣಕ್ಕೆ ಜನರು ಬರುತ್ತಿದ್ದರು. ಆದರೆ ಇಂದು ಜನರನ್ನು ನಾವೇ ತರಬೇಕಿದೆ.ಇದಕ್ಕೆಲ್ಲಾ ಪರಿಹಾರ ಎಂದರೆ ಸಾಕು ಎನ್ನುವ ಭಾವನೆ ಬೇಕಿದೆ ಎಂದರು. ಆಗ ರಾಜಕೀಯ ಎಲ್ಲಾಗಲಿದೆ ರಾಮಕೃಷ್ಣ ಆಶ್ರಮ ಆಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಕಿಚಾಯಿಸಿದರು.

ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ:

ನಂತರ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆ, ಬಡವರ,ರೈತರ, ಮಹಿಳೆಯರ ಪರ ಎನ್ನುವ ಭರವಸೆ ನೀಡುತ್ತಾರೆ. ಸ್ವರ್ಗವನ್ನೇ ತರುವ ಭರವಸೆ ನೀಡಿರುತ್ತಾರೆ. ಆದರೆ ಅದರಲ್ಲಿ ಈಡೇರಿಕೆ ಆಗುವ ಭರವಸೆ ಇರಲ್ಲ. ಹೀಗಾಗಿ ಬಡ, ಹಿಂದುಳಿದ,‌ಶೋಷಿತ,ವಿದ್ಯಾರ್ಥಿ, ಹಿಂದುಳಿದ ವರ್ಗದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯಾ ರಾಮ್​ ಗಯಾ ರಾಮ್​​​ ಪರಿಸ್ಥಿತಿ:

ಇಂದು ರಾಜಕಾರಣದಲ್ಲಿ ಆಯಾ ರಾಮ್ ಗಯಾ ರಾಮ್ ಹೆಚ್ಚಾಗುತ್ತಿದೆ. ಗೆದ್ದ ಮೇಲೆ ಪಕ್ಷ ಬದಲಾವಣೆ ಮಾಡುತ್ತಾರೆ. ನಮ್ಮ ಕಡೆ ಇದನ್ನು ಗೋಸುಂಬೆ ಎಂದು ಕರೆಯುತ್ತಾರೆ. ಆಸೆ,ಆಮಿಷಕ್ಕೆ‌ ಒಳಗಾಗಿ‌ ಪಕ್ಷಾಂತರ ಮಾಡುವುದು ಯಾರಿಗೆ ಪ್ರಯೋಜನ ಆಗಲಿದೆ. ಪಕ್ಷ ಬದಲಾವಣೆ ಮಾಡುತ್ತಿರುವುದರಿಂದ ಜನ ಪ್ರಜಾಪ್ರಭುತ್ವದ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಪಕ್ಷಾಂತರ ವನ್ನು ಟೀಕಿಸಿದರು.

ನಿಮ್ಮವರೂ ಕರ್ನಾಟಕಕ್ಕೆ ಬಂದಿದ್ದರು:

ಮಧ್ಯಪ್ರದೇಶದ ಶಾಸಕರು ಇಲ್ಲಿಗೆ ಬಂದಿದ್ದಾರೆ. ನಮ್ಮವರು ಮುಂಬೈಗೆ ಹೋಗಿದ್ದರು ಎನ್ನುತ್ತಿದ್ದಂತೆ ಗುಜರಾತ್ ನಿಂದಲೂ ಬಂದಿದ್ದರು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ಹಣ,ಅಧಿಕಾರದ ಆಸೆಗೆ ಬಲಿಯಾಗುತ್ತಿದ್ದಾರೆ, ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಿದ್ದಾರಂತೆ. ಹೀಗಾದರೆ ಹೇಗೆ ಪ್ರಜಾಪ್ರಭುತ್ವ ಉಳಿಯಲಿದೆ, ಸಂವಿಧಾನದ ಸಿದ್ಧಾಂತ ಎಲ್ಲಿ ಉಳಿಯಲಿದೆ, ಹಣಕ್ಕೆ ಜನಪ್ರತಿನಧಿಗಳು ಮಾರಿಕೊಳ್ಳುತ್ತಿದ್ದಾರೆ ಅಂದರೆ ಎಲ್ಲಿಗೆ ಹೋಗಿ ಮುಟ್ಟಲಿದೆ.ಈ ದೇಶದ ಪಿಎಂ ಮಾಡುತ್ತೇನೆ ಎಂದರೂ ನಾನು ಮತ್ತೊಂದು ಪಕ್ಷಕ್ಕೆ‌ಹೋಗಲ್ಲ, ಇವರು ಹೇಗೆ ಬಲಿಯಾಗುತ್ತಾರೆ ಎಂದು‌ ಪ್ರಶ್ನಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಇದೆ:

ಇದಕ್ಕೆ‌ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಬೇರೆ ಪಕ್ಷಕ್ಕೆ ಹೋಗಬೇಕಿದ್ದರೆ ಇರುವ ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಹಿಂದೆ ಸಿದ್ದರಾಮಯ್ಯ ಕೂಡ ರಾಜೀನಾಮೆ‌ ಕೊಟ್ಟು ಬಂದರು ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು ಅಮಾನತು ಮಾಡಲಾಗಿತ್ತು. ಹಾಗಾಗಿ ಅವರು ಪಕ್ಷ ತೊರೆದು ಬಂದರು ಎಂದು ಸಮಜಾಯಿಷಿ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.