ಮಹದೇವಪುರ/ಬೆಂಗಳೂರು : ಕ್ಷೇತ್ರದ ಗುಂಜೂರು ಬಳಗೆರೆ ರಸ್ತೆಯಲ್ಲಿರುವ ಯುನೈಟ್ ಆಫ್ ರೋಡ್ ಪಾರ್ಕ್ನಲ್ಲಿ ಎಕೊ ಲೈಫ್ ಕ್ರಾಸ್, ಪ್ರಶಾಂತ ಫೌಂಡೇಶನ್ Govt of India FMSci ( Federation Moter sports clubs of India ) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಡರ್ಟ್ ಕ್ರಾಸ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ವಿಜೇತರಿಗೆ ಬಹುಮಾನ ವಿತರಿಸಿದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಮುಖಂಡ ಜಯಚಂದ್ರ ರೆಡ್ಡಿ ಅವರ ಪುತ್ರ ನಿಖಿಲ್ ರೆಡ್ಡಿ ಅವರು ಡರ್ಟ್ ಕ್ರಾಸ್ ಮೋಟಾರು ಕಾರು ಸ್ಪರ್ಧೆ ಆಯೋಜಿಸಿದ್ದರು. ಕಳೆದ ಎರಡು ದಿನಗಳ ಕಾಲ ಈ ರೇಸ್ನ್ನು ಆಯೋಜನೆ ಮಾಡಲಾಗಿತ್ತು. ರಾಷ್ಟ್ರ ಮಟ್ಟದ ಈ ಡರ್ಟ್ ಕ್ರಾಸ್ ಮೋಟಾರು ಕಾರು ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಯ ಹಾಗೂ ಕೇರಳ, ಮಹಾರಾಷ್ಟ್ರ ಸೇರಿದಂತೆ 120 ಹೆಚ್ಚು ಉತ್ಸಾಹಿ ಯುವಕರು ಪಾಲ್ಗೊಂಡಿದ್ದರು. ಐದು ವಿಭಾಗದ ಈ ಸ್ಪರ್ಧೆಯಲ್ಲಿ ರೂಪೇಶ್ ಬಿ.ಸಿ. ಅವರು ವೇಗದ ಚಾಲಕ ಪ್ರಶಸ್ತಿ ಪಡೆದರು.
ಈ ಸ್ಪರ್ಧೆಯಲ್ಲಿ 100cc ಯಿಂದ 2000cc ಅವರಿಗೆ ಬೈಕ್ಗಳು ಮತ್ತು ಕಾರುಗಳು ಭಾಗವಹಿಸಿದ್ದವು. ಅಲ್ಲದೇ ಮಾರುತಿ ಕಂಪನಿಯ ಜನ್, ಸ್ವಿಫ್ಟ್ ಹುಂಡೈ ಕಂಪನಿಯ ವರ್ಣ, ಅಸೆಂಟ್, ಜೀಪ್ ಮುಂತಾದ ಕಾರುಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭ ಉದ್ದೇಶಿಸಿ ಮಾತಾಡಿದ ಸಚಿವ ಅರವಿಂದ ಲಿಂಬಾವಳಿ ಯವಕರ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಹೆಚ್ಚು ಪೂರಕವಾಗಿದ್ದು, ಉತ್ತಮ ಕ್ರೀಡಾ ಮನೋರಂಜನೆಗೆ ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಕ್ರೀಡೆಗಳಲ್ಲಿ ಸುರಕ್ಷತೆ ಬಹಳ ಮುಖ್ಯವಾಗಿದ್ದು, ಉತ್ತಮ ಸ್ಪರ್ಧೆಯೊಂದಿಗೆ ಸುರಕ್ಷತೆಗೂ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು. ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವಂತೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.