ETV Bharat / state

ರೋಮಾಂಚನವೀ ಕನ್ನಡ ಎಂದಿದ್ದ ಎಸ್‌ಪಿಬಿ.. ಕರುನಾಡಿಗರ ಅಭಿಮಾನ 'ಎದೆ ತುಂಬಿ ಹಾಡಿದ್ದರು'.. - ಎಸ್.ಪಿ.ಬಾಲಸುಬ್ರಹ್ಮಣ್ಯಂ

ರಾಜಕುಮಾರ್ ಬಳಿಕ ಸಾಹಸ ಸಿಂಹ ವಿಷ್ಣವರ್ಧನ್ ಅವರ ನಾಗರಹಾವು ಚಿತ್ರದಲ್ಲಿ ಹಾವಿನ ದ್ವೇಷದ ಹಾಡಿನಿಂದ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಸ್ಯಾಂಡಲ್​ವುಡ್​ನ ಎಲ್ಲಾ ಚಿತ್ರಗಳಲ್ಲಿ ಎಸ್​ಪಿಬಿ ಹಾಡೋದು ಕಡ್ಡಾಯ ಎಂಬ ಮಾತು ಕೂಡ ಇದ್ದವು. ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಶಿವರಾಜ್ ಕುಮಾರ್, ಶ್ರೀನಾಥ್, ಶಶಿಕುಮಾರ್ ಸೇರಿ ಯಾರೇ ಕನ್ನಡ ನಟನಾಗಿದ್ದರೂ ಅವರ ಸಿನಿಮಾದ ಒಂದು ಹಾಡಾದ್ರೂ ಇವರ ಪಾಲಿಗಿರುತ್ತಿತ್ತು..

special-story-on-s-p-balasubrahmanyam-kannada-songs
ಬಾಲಸುಬ್ರಹ್ಮಣ್ಯಂ ಸಂಗೀತ ಸುಧೆ
author img

By

Published : Sep 25, 2020, 3:29 PM IST

ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ.. 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡುವ ಮೂಲಕ ದಾಖಲೆ ನಿರ್ಮಿಸಿದ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆಂಧ್ರದ ಕೊನೇಟಮ್ಮಪೇಟಾದಲ್ಲಿ ಸಂಗೀತದ ಗಂಧಗಾಳಿ ಗೊತ್ತಿಲ್ಲದ ಕುಟುಂಬದಲ್ಲಿ ಹುಟ್ಟಿದ ಅವರು ಕನ್ನಡನಾಡಿನ ಅಚ್ಚುಮೆಚ್ಚಿನ ಗಾಯಕರಾಗಲು ಕಾರಣ ಅವರ ಶ್ರದ್ಧೆ.. ಆದರೆ, ಅದು ನಿಜಕ್ಕೂ ದೈವ ಲೀಲೆ ಅಂತಾನೇ ನಂಬಿದ್ದರು ಎಸ್‌ಪಿಬಿ.

ಸಂಗೀತ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡ ಎಸ್​ಪಿಬಿ ಚಿತ್ರರಂಗದಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾ ಅಭಿರುಚಿ ಹೊಂದಿದ್ದ ಎಸ್​ಪಿಬಿ ಅವರು ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಎಂಟ್ರಿ ಕೊಟ್ಟಿದ್ದು 1967ರಲ್ಲಿ. ನಿರ್ದೇಶಕ ಎಂ ರಂಗಾರಾವ್ ಅವರ ಈ ಚಿತ್ರದಲ್ಲಿ ಕನಸಿದೋ, ನನಸಿದೋ ಎಂಬ ಹಾಡಿನ ಮೂಲಕ ಎಸ್​ಪಿಬಿ ಅವರ ಕನ್ನಡ ಸಿನಿ ಜರ್ನಿ ಶುರುವಾಗುತ್ತೆ.

1967ರಲ್ಲಿ ಕನ್ನಡಕ್ಕೆ ಚಿತ್ರರಂಗಕ್ಕೆ ಎಸ್​ಪಿಬಿ ಎಂಟ್ರಿ..

ಕನ್ನಡ ಹಾಡುವಾಗ ಈ ಭಾಷೆ ಗೊತ್ತಿರಲಿಲ್ಲ : ಬಾಲಸುಬ್ರಹ್ಮಣ್ಯಂ ಸಂಗೀತ ಸುಧೆ ಶುರುವಾದಾಗ ಅವರಿಗೆ ಸರಿಯಾಗಿ ಕನ್ನಡ ಭಾಷೆ ಮಾತಾಡೋಕೆ ಬರ್ತಿರಲಿಲ್ಲ. ಆದ್ರೂ ಕೂಡ ಅವರ ಮಧುರ ಕಂಠ ಎಲ್ಲರನ್ನೂ ಸೆಳೆದಿತ್ತು. ರಾಜ್​ಕುಮಾರ್ ಚಿತ್ರಗಳಿಗೆ ಅವರೇ ಫುಲ್​ಟೈಮ್​​ ಗಾಯಕರಾಗಿದ್ದ ಕಾಲವೂ ಇತ್ತು.

ರಾಜಕುಮಾರ್ ಬಳಿಕ ಸಾಹಸ ಸಿಂಹ ವಿಷ್ಣವರ್ಧನ್ ಅವರ ನಾಗರಹಾವು ಚಿತ್ರದಲ್ಲಿ ಹಾವಿನ ದ್ವೇಷದ ಹಾಡಿನಿಂದ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಸ್ಯಾಂಡಲ್​ವುಡ್​ನ ಎಲ್ಲಾ ಚಿತ್ರಗಳಲ್ಲಿ ಎಸ್​ಪಿಬಿ ಹಾಡೋದು ಕಡ್ಡಾಯ ಎಂಬ ಮಾತು ಕೂಡ ಇದ್ದವು. ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಶಿವರಾಜ್ ಕುಮಾರ್, ಶ್ರೀನಾಥ್, ಶಶಿಕುಮಾರ್ ಸೇರಿ ಯಾರೇ ಕನ್ನಡ ನಟನಾಗಿದ್ದರೂ ಅವರ ಸಿನಿಮಾದ ಒಂದು ಹಾಡಾದ್ರೂ ಇವರ ಪಾಲಿಗಿರುತ್ತಿತ್ತು.

ಕರುನಾಡಿನಲ್ಲಿ ಸಿಕ್ಕ ಗೌರವ ಮರೆಯದ ಎಸ್‌ಪಿಬಿ : ಎಸ್​ಪಿಬಿ ಹಾಗೂ ಕನ್ನಡನಾಡಿನ ನಡುವಿನ ಬಾಂಧವ್ಯಕ್ಕೆ ಎಣೆಯೇ ಇರಲಿಲ್ಲ. ಎಸ್​ಪಿಬಿ ಅವರೇ ಒಂದು ಬಾರಿ ನಂಗೆ ಕರ್ನಾಟಕದಲ್ಲಿ ಸಿಕ್ಕಿರುವ ಪ್ರೀತಿ ಹಾಗೂ ಗೌರವ ಇನ್ನೆಲ್ಲೂ ಸಿಕ್ಕಿಲ್ಲ ಅಂತಾ ಹೇಳ್ಕೊಂಡಿದ್ದರು. ರಾಜೇಶ್​ ಕೃಷ್ಣನ್, ಹೇಮಂತ್​ಕುಮಾರ್, ಭದ್ರಿಪ್ರಸಾದ್​ ಕೂಡ ಇವರ ಶಿಷ್ಯರೇ.. ರಾಜೇಶ್​ ಕೃಷ್ಣನ್​ಗೆ ಇವರನ್ನು ಕಂಡರೆ ಪಂಚಪ್ರಾಣ.. ಡಾ.ರಾಜ್​ಕುಮಾರ್ ಅವರು ಮುದ್ದಿನ ಮಾವ ಚಿತ್ರದಲ್ಲಿ ದೀಪಾವಳಿ ಹಾಡನ್ನು ಹಾಡಿಸೋಕೆ ಕೂಡ ಎಸ್​ಪಿಬಿ ಕಾರಣವಂತೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಗೊತ್ತಿರದಿದ್ರೂ ರಾಷ್ಟ್ರ ಪ್ರಶಸ್ತಿ : ಕರ್ನಾಟಕ ಸಂಗೀತ ಅಭ್ಯಾಸ ಮಾಡದೇ ಇದ್ದರೂ ಕನ್ನಡದಲ್ಲಿ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದವರಿವರು. ಇದು ಸಿಕ್ಕಿದ್ದು ಹಂಸಲೇಖ ಸಂಗೀತ ನಿರ್ದೇಶನದ ಪಂಚಾಕ್ಷರಿ ಗವಾಯಿಯವರ ನಿಜಗುಣ ಶಿವಯೋಗಿ ಹಾಡಿಗೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ ಈ ಹಾಡನ್ನು ಹಾಡೋದಕ್ಕೆ ಎಸ್​ಪಿಬಿ ತಮ್ಮಮನೆಯಲ್ಲಿ ಒಂದು ದಿನ ಅಭ್ಯಾಸ ಮಾಡಿ ಕೊಂಡಿದ್ದರಂತೆ. ಈ ರೀತಿ ಪಟ್ಟಿ ಮಾಡುತ್ತಾ ಹೋದ್ರೆ ಕನ್ನಡಿಗರ ಹಾಗೂ ಎಸ್​ಪಿಬಿ ನಡುವಿನ ಬಾಂಧವ್ಯ ವರ್ಣಿಸೋಕೆ ಒಂದಿಡೀ ದಿನ ಸಾಕಾಗಲ್ಲ. ಕನ್ನಡ ನಾಡಿಗೆ ಅವರ ಕೊಡುಗೆ ನಿಜಕ್ಕೂ ಅವಿಸ್ಮರಣೀಯ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.