ETV Bharat / state

ಬೆಂಗಳೂರು ತಲುಪಿದ ವಿಶೇಷ ಶ್ರಮಿಕ್ ರೈಲು.. ಮೊದಲ ಟ್ರೈನ್‌ನಲ್ಲಿ 900 ಪ್ರಯಾಣಿಕರ ಆಗಮನ - ದೆಹಲಿಯಿಂದ ಬೆಂಗಳೂರು ತಲುಪಿದ ವಿಶೇಷ ಶ್ರಮಿಕ್ ರೈಲು

ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು 900 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರಿಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ಗಾಂಧಿನಗರ, ಚಿಕ್ಕಪೇಟೆ, ಕಾಟನ್ ಪೇಟೆಯ ಸುಮಾರು 90 ಹೋಟೆಲ್​ಗಳಲ್ಲಿ 14 ದಿನಗಳ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ರೈಲಿನಿಂದ ಇಳಿಯುತ್ತಿದ್ದಂತೆ 11 ಬಿಎಂಟಿಸಿ ಬಸ್​ಗಳ ಮೂಲಕ ಅವರನ್ನು ಕ್ವಾರಂಟೈನ್​ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗಿದೆ.

Special train from Delhi Reached to Bangalore
ದೆಹಲಿಯಿಂದ ಬೆಂಗಳೂರು ತಲುಪಿದ ವಿಶೇಷ ಶ್ರಮಿಕ್ ರೈಲು
author img

By

Published : May 14, 2020, 10:22 AM IST

Updated : May 14, 2020, 10:40 AM IST

ಬೆಂಗಳೂರು : ದೆಹಲಿಯಿಂದ ಹೊರಟ್ಟಿದ್ದ ಮೊದಲ ವಿಶೇಷ ಶ್ರಮಿಕ್​ ರೈಲು ಇಂದು ಬೆಳಗ್ಗೆ ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ.

ವಿಶೇಷ ರೈಲಿನಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು 900 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರಿಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ಗಾಂಧಿನಗರ, ಚಿಕ್ಕಪೇಟೆ, ಕಾಟನ್ ಪೇಟೆಯ ಸುಮಾರು 90 ಹೋಟೆಲ್​ಗಳಲ್ಲಿ 14 ದಿನಗಳ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ರೈಲಿನಿಂದ ಇಳಿಯುತ್ತಿದ್ದಂತೆ 11 ಬಿಎಂಟಿಸಿ ಬಸ್​ಗಳ ಮೂಲಕ ಅವರನ್ನು ಕ್ವಾರಂಟೈನ್​ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗಿದೆ. ರೈಲು ಆಗಮನಕ್ಕಿಂತ ಮುನ್ನವೇ ಪ್ರತಿ ಬೋಗಿಯ ಪ್ರಯಾಣಿಕರಿಗೂ ಸ್ಥಳೀಯ ಹೋಟೆಲ್​ಗಳ ಮಾಹಿತಿ ನೀಡಲಾಗಿತ್ತು. ಜೊತೆಗೆ ಕ್ವಾರಂಟೈನ್​ ಹೋಟೆಲ್​ಗಳಲ್ಲಿ ಊಟ, ವಸತಿ ಸೇರಿ ಒಟ್ಟು ವೆಚ್ಚದ ಬಗ್ಗೆ ಮಾಹಿತಿ ನೀಡಲಾಗಿತ್ತು.

ಪ್ರಯಾಣಿಕರಿಗೆಲ್ಲರಿಗೂ ಆಯ್ಕೆಯ ಕ್ವಾರಂಟೈನ್ ಕೇಂದ್ರಗಳಿಗೆ ತೆರಳುವ ಅವಕಾಶ ನೀಡಲಾಗಿತ್ತು. ದುಬಾರಿ ವೆಚ್ಚ ಮಾಡಿ ಖಾಸಗಿ ಹೋಟೆಲ್​ಗಳಲ್ಲಿ ಉಳಿಯಲು ಅಸಾಧ್ಯವಾದವರಿಗೆ ಸರ್ಕಾರಿ ಹಾಸ್ಟೆಲ್​ಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ರೈಲು ಆಗಮಿಸುವ ಮುನ್ನವೇ ನಿಲ್ದಾಣದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ವಿಶೇಷ ರೈಲಿನಲ್ಲಿ ಬಂದ ಪ್ರಯಾಣಿಕರು, ‌ಆರೋಗ್ಯಾಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಜೊತೆಗೆ ಪೊಲೀಸರು ಸೂಚಿಸಿದ ಗೇಟ್​ಗಳ ಹೊರತು ಇತರ ಗೇಟ್​ಗಳ ಮೂಲಕ ಪ್ರವೇಶ ನಿರಾಕರಿಸಲಾಗಿತ್ತು. ಗೇಟ್​ಗಳ ಬಳಿ ಬ್ಯಾರಿಕೇಡ್​ ಹಾಕಿ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು.

Last Updated : May 14, 2020, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.